ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) 2 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವಹಿವಾಟಿನ ಮೇಲೆ ಇಂಟರ್ ಚೇಂಜ್ ಶುಲ್ಕವನ್ನು ಶಿಫಾರಸು ಮಾಡಿದೆ. ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (ಪಿಪಿಐ) ಮೂಲಕ ಮಾಡಿದ ವಹಿವಾಟಿಗೆ ಮಾತ್ರ ಈ ಶುಲ್ಕವನ್ನು ವಿಧಿಸಲಾಗುತ್ತದೆ. ಸುಮಾರು ಶೇಕಡ 1.1ರಷ್ಟು ಇಂಟರ್ ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಸುದ್ದಿಯ ಬಳಿಕ ಎಲ್ಲರಿಗೂ ಶುಲ್ಕ ವಿಧಿಸಲಾಗುತ್ತದೆಯೇ ಎಂಬ ಗೊಂದಲವಿತ್ತು, ಇದಕ್ಕೆ ಸ್ಪಷ್ಟಣೆಯನ್ನು ನೀಡಲಾಗಿದೆ. ಆದರೆ ಈಗ ಪಿಪಿಐ ಎಂದರೇನು ಎಂಬ ಬಗ್ಗೆ ಚರ್ಚೆಯಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಪ್ರಕಾರ ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (ಪಿಪಿಐ) ಯುಪಿಐ ವ್ಯವಸ್ಥೆಯಲ್ಲಿನ ಒಂದು ವ್ಯಾಲೆಟ್ ವ್ಯವಸ್ಥೆಯಾಗಿದೆ. ಇದನ್ನು ಬಳಕೆ ಮಾಡುವ ಎಲ್ಲರಿಗೂ ದಂಡವನ್ನು ವಿಧಿಸಲಾಗುವುದಿಲ್ಲ. ಬ್ಯಾಂಕ್ ಅಕೌಂಟ್‌ನಿಂದ ಬ್ಯಾಂಕ್ ಅಕೌಂಟ್‌ಗೆ ಮಾಡಲಾಗುವ ಯುಪಿಐ ಪಾವತಿಗೆ ಯಾವುದೇ ಶುಲ್ಕವಿರಲ್ಲ. ಎನ್‌ಪಿಸಿಐ ಮಾಹಿತಿ ಪ್ರಕಾರ ಪಿಪಿಐ ಮೆರ್ಚಂಟ್ ವಹಿವಾಟಿನ ಮೇಲೆ ಇಂಟರ್‌ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ ಗ್ರಾಹಕರಿಗೆ ವಿಧಿಸಲಾಗುವ ಶುಲ್ಕ ಇದಲ್ಲ. ಹಾಗಾದರೆ ಪಿಪಿಐ ಎಂದರೇನು, ಯುಪಿಐಗಿಂತ ಇದು ಹೇಗೆ ಭಿನ್ನ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಪಿಪಿಐ ಎಂದರೇನು ತಿಳಿಯಿರಿ
ಪಿಪಿಐ ಅಥವಾ ಪ್ರಿಪೇಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ ಹಣಕಾಸು ಸೇವೆ ಸೇರಿದಂತೆ ಒಂದು ವಸ್ತು ಅಥವಾ ಸೇವೆಗೆ ಪಾವತಿ ಮಾಡಲು ಸರಳ ಸುಲಭವನ್ನಾಗಿಸುತ್ತದೆ. ಪಿಪಿಐ ವ್ಯಾಲೆಟ್‌ನಲ್ಲಿರುವ ಮೊತ್ತವನ್ನು ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ಕಳುಹಿಸಲು ಸಾಧ್ಯವಾಗುತ್ತದೆ. ನಗದನ್ನು ಪಾವತಿಸದೆಯೇ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡದೆಯೇ ನೀವು ಪಿಪಿಐ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು ಅಥವಾ ಪಡೆಯಬಹುದಾಗಿದೆ. ಆನ್‌ಲೈನ್ ವ್ಯಾಲೆಟ್, ಸ್ಮಾರ್ಟ್ ಕಾರ್ಡ್, ಪೇಪರ್ ಕೂಪನ್, ಆನ್‌ಲೈನ್ ಅಕೌಂಟ್ಸ್ ಪಿಪಿಐಗೆ ಉದಾಹರಣೆಗಳಾಗಿದೆ. ಬಳಕೆದಾರರು ಪ್ರಿಪೇಡ್ ಫಂಡ್‌ಗಳನ್ನು ಪಡೆಗಳನ್ನು ವರ್ಗಾವಣೆ ಮಾಡಲು ಸಾಧ್ಯವಾಗುವುದು ಇದರ ಮುಖ್ಯ ಗುರಿಯಾಗಿದೆ.
ಎನ್‌ಪಿಸಿಐ ಪ್ರಕಾರ ಇತ್ತೀಚಿನ ನಿಯಂತ್ರಕ ನಿಯಮಗಳ ಅಡಿಯಲ್ಲಿ ಪಿಪಿಐ ವ್ಯಾಲೆಟ್‌ಗಳು ಇಂಟರ್‌ಆಪರೇಬಲ್ ಯುಪಿಐ ವ್ಯವಸ್ಥೆಯ ಭಾಗವಾಗಿರಲು ಈಗ ಅನುಮತಿ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಲೋನ್‌ಟ್ಯಾಪ್‌ನ ಬಿಸಿನೆಸ್ ಹೆಡ್ ಅಮೀತ್ ವೆಂಕೇಶ್ವರ್, "ಇತ್ತೀಚಿನ ಬದಲಾವಣೆಯಿಂದ ಗ್ರಾಹಕರಿಗೆ ಹಾನಿಯಾಗುವುದಿಲ್ಲ. ಯಾಕೆಂದರೆ ಹೆಚ್ಚುವರಿ ವೆಚ್ಚವನ್ನು ವ್ಯಾಪಾರಿ ಭರಿಸಬೇಕಾಗುತ್ತದೆ," ಎಂದು ಉಲ್ಲೇಖ ಮಾಡಲಾಗಿದೆ.
ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (ಪಿಪಿಐ) ಮೂಲಕ ಮಾಡಿದ ವಹಿವಾಟಿಗೆ ಮಾತ್ರ ಈ ಶುಲ್ಕವನ್ನು ವಿಧಿಸಲಾಗುತ್ತದೆ. ಸುಮಾರು ಶೇಕಡ 1.1ರಷ್ಟು ಇಂಟರ್ ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಎನ್‌ಪಿಸಿಐ 2 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಮೇಲೆ ಶೇಕಡ 1.1ರಷ್ಟು ಇಂಟರ್ ಚೇಂಜ್ ಶುಲ್ಕವನ್ನು ವಿಧಿಸಲಿದೆ. ಬ್ಯಾಂಕ್ ಹಾಗೂ ಪಾವತಿ ಸೇವೆಯನ್ನು ನೀಡುವವರಿಗೆ ಆದಾಯವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಯುಪಿಐ ಹಾಗೂ ಪಿಪಿಐ ನಡುವೆ ಏನು ವ್ಯತ್ಯಾಸ?
ಪಿಪಿಐ ವಹಿವಾಟುಗಳು ಮೊಬೈಲ್ ವ್ಯಾಲೆಟ್‌ಗಳು, ಉಡುಗೊರೆ ಕಾರ್ಡ್‌ಗಳು ಮತ್ತು ಇತರ ಆನ್‌ಲೈನ್ ಪಾವತಿ ವಿಧಾನಗಳಂತಹ ಪ್ರಿಪೇಯ್ಡ್ ಪಾವತಿ ವಿಧಾನಗಳನ್ನು ಬಳಸುತ್ತವೆ. ಆದರೆ ಯುಪಿಐ ವಹಿವಾಟುಗಳು ಎರಡು ಬ್ಯಾಂಕ್ ಖಾತೆಗಳ ನಡುವಿನ ವರ್ಗಾವಣೆಯಾಗಿದೆ. ಯುಪಿಐಗಳು ಬಿಲ್ ಪಾವತಿ, ಆನ್‌ಲೈನ್ ಶಾಪಿಂಗ್ ಮತ್ತು ಇತರ ಚಟುವಟಿಕೆಗಳಿಗೆ ಆಗಾಗ್ಗೆ ಬಳಕೆ ಮಾಡಲಾಗುತ್ತಿದ್ದರೆ, ಯುಪಿಐ ಪೀರ್ ಟು ಪೀರ್ ವರ್ಗಾವಣೆಗಳು ಮತ್ತು ವ್ಯಾಪಾರಿ ಪಾವತಿಗಳಿಗೆ ಬಳಸಲಾಗುತ್ತದೆ. ಪಿಪಿಐಗೆ ಹೋಲಿಸಿದರೆ, ಯುಪಿಐ ಕೂಡಾ ಹೆಚ್ಚಿನ ಪಾವತಿ ಮಿತಿಯನ್ನು ಹೊಂದಿದೆ.


Click it and Unblock the Notifications