ಪಿಂಚಣಿದಾರರು ವಾರ್ಷಿಕವಾಗಿ ಒಂದು ಬಾರಿ ತಮ್ಮ ಇರುವಿಕೆಯನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡುವುದು ಅತೀ ಮುಖ್ಯವಾಗಿದೆ. ಪಿಂಚಣಿಯನ್ನು ನಾವು ಯಾವುದೇ ಅಡೆತಡೆಗಳು ಇಲ್ಲದೆ ಪಡೆಯಬೇಕಾದರೆ ಪ್ರತಿ ವರ್ಷ ನವೆಂಬರ್ 30ರ ಒಳಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬೇಕಾಗುತ್ತದೆ.
ಈ ಹಿಂದೆ ಪಿಂಚಣಿ ಪಡೆಯುವವರೇ ಸ್ವತಃ ಬ್ಯಾಂಕ್‌ಗೆ ಭೇಟಿ ನೀಡಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸಬೇಕಾಗಿತ್ತು. ನಮಗೆ ಪಿಂಚಣಿ ವಿತರಣೆ ಮಾಡಲಾಗುವ ಸ್ಥಳವಾದ ಬ್ಯಾಂಕ್ ಅಥವಾ ಅಂಚೆಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಆದರೆ ಜೀವನ ಪ್ರಮಾಣಪತ್ರದ ಪರಿಶೋಲನೆ ಮಾಡಲು ಯಾವುದೇ ತಾಂತ್ರಿಕ ವ್ಯವಸ್ಥೆಗಳು ಇರಲಿಲ್ಲ. ಆದರೆ ಈಗ ಫೇಸ್ ರೆಕಾಗ್ನಿಷನ್ ಅನ್ನು ಪರಿಚಯಿಸಲಾಗಿದೆ.
ಫೇಸ್ ರೆಕಾಗ್ನಿಷನ್ ತಂತ್ರಜ್ಞಾನವು ಆಧಾರ್ ಡೇಟಾವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಇದು ಯಾವುದೇ ಆಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೂಲಕ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಹಾಗಾದರೆ ಈ ಜೀವನ ಪ್ರಮಾಣಪತ್ರದ ಫೇಸ್ ರೆಕಾಗ್ನಿಷನ್ ಪ್ರಕ್ರಿಯೆ ಎಂದರೇನ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...
ಡಿಜಿಟಲ್ ಜೀವನ ಪ್ರಮಾಣಪತ್ರ ಎಂದರೇನು?
ಕೇಂದ್ರ ಸರ್ಕಾರದಿಂದ ಮಾಸಿಕವಾಗಿ ಪಿಂಚಣಿಯನ್ನು ಪಡೆಯುವವರು ಜೀವನ ಪ್ರಮಾಣ ಪತ್ರ ಅಥವಾ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡುವುದು ಮುಖ್ಯವಾಗಿದೆ. ಇದಕ್ಕೆ ಜೀವನ ಪ್ರಮಾಣ ಎಂದು ಕೂಡಾ ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾವು ಜೀವನ ಪ್ರಮಾಣ ಪತ್ರವನ್ನು ಪಿಂಚಣಿ ವಿತರಣಾ ಸಂಸ್ಥೆಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಇದು ನಾವು ಬದುಕುಳಿದಿದ್ದೇವೆ ಎಂಬುವುದಕ್ಕೆ ಸಾಕ್ಷಿಯಾಗಿದ್ದು, ಇದನ್ನು ಸಲ್ಲಿಕೆ ಮಾಡದಿದ್ದರೆ ನಮ್ಮ ಪಿಂಚಣಿ ಸ್ಥಗಿತವಾಗಬಹುದು. ಪ್ರತಿ ವರ್ಷವು ಪಿಂಚಣಿದಾರರು ನವೆಂಬರ್ 1ರಿಂದ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡುವುದನ್ನು ಆರಂಭ ಮಾಡಬೇಕು. ಸರ್ಕಾರವು 80 ವರ್ಷಕ್ಕಿಂತ ಮೇಲ್ಪಟ್ಟವರು ಜೀವನ ಪ್ರಮಾಣಪತ್ರವನ್ನು ಬ್ಯಾಂಕ್‌ಗೆ ಬಂದು ಸಲ್ಲಿಕೆ ಮಾಡುವುದು ಕಷ್ಟವೆಂದು ಬೇರೆ ವಿಧಾನವನ್ನು ಕೂಡಾ ಜಾರಿ ಮಾಡಿದೆ. 80 ವರ್ಷಕ್ಕಿಂತ ಮೇಲ್ಪಟ್ಟವರು ಅಕ್ಟೋಬರ್ 1ರಿಂದಲೇ ಲೈಫ್ ಸರ್ಟಿಫಿಕೇಟ್ ಅನ್ನು ಸಲ್ಲಿಕೆ ಮಾಡಬಹುದು. ಹಾಗೆಯೇ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಕೂಡಾ ಸಲ್ಲಿಕೆ ಮಾಡಬಹುದು. ಹಿರಿಯ ನಾಗರಿಕರು ಪ್ರಯಾಣ ಮಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾಗ ಆನ್‌ಲೈನ್ ಮೂಲಕ ಸಲ್ಲಿಕೆ ಮಾಡುವ ಜೀವನಪ್ರಮಾಣಪತ್ರಕ್ಕೆ ಡಿಜಿಟಲ್ ಜೀವನ ಪ್ರಮಾಣಪತ್ರ ಎಂದು ಕರೆಯಲಾಗುತ್ತದೆ. ಇದನ್ನು ಮನೆ ಮನೆಗೆ ಭೇಟಿ ನೀಡುವ ಅಂಚೆ ಕಚೇರಿ ಸಿಬ್ಬಂದಿಗಳ ಸಹಾಯದ ಮೂಲಕವೂ ಸಲ್ಲಿಕೆ ಮಾಡಬಹುದು.
ಫೇಸ್ ರೆಕಾಗ್ನಿಷನ್ ಮೂಲಕ ಡಿಜಿಟಲ್ ಪ್ರಮಾಣಪತ್ರ ಸಲ್ಲಿಕೆ ಹೇಗೆ?
ಹಂತ 1: ಮೊದಲು ಗೂಗಲ್ ಪ್ಲೆಸ್ಟೋರ್‌ಗೆ ಭೇಟಿ ನೀಡಿ Aadhar FaceRD ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಹಂತ 2: ಬಳಿಕ https:// jeevanpramaan.gov.in/package/download ಮೂಲಕ ಜೀವನ ಪ್ರಮಾಣ ಫೇಸ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಿ
ಹಂತ 3: client installation document for Android face app ಮೇಲೆ ಕ್ಲಿಕ್ ಮಾಡಿ
ಹಂತ 4: ಅಗತ್ಯ ಮಾಹಿತಿಯನ್ನು ನಮೂದಿಸಿದರೆ, ನಿಮ್ಮ ಇಮೇಲ್ ಐಡಿಗೆ ಲಿಂಕ್ ಬರಲಿದೆ
ಹಂತ 5: ನೀಓವು ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಫೈಲ್ ಡೌನ್‌ಲೋಡ್ ಆಗಲಿದೆ, ಆ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ
ಹಂತ 6: ಆಪ್ ಅನ್ನು ತೆರೆದು, ಬಳಕೆದಾರರ ಮಾಹಿತಿಯನ್ನು ಭರ್ತಿ ಮಾಡಿ, ಎಲ್ಲ ಮಾಹಿತಿ ಹಾಕಿ ಸಬ್‌ಮಿಟ್ ಮಾಡಿ
ಹಂತ 7: ಒಟಿಪಿಯನ್ನು ನಮೂದಿಸಿ, ಬಳಕೆದಾರರ ಮುಖವನ್ನು ಸ್ಕ್ಯಾನ್ ಮಾಡಲಾಗುತ್ತದೆ.
ಹಂತ 8: ಇದಾದ ಬಳಿಕ ಡಿವೈಎಸ್ ಪಿಂಚಣಿದಾರರ ಬಳಕೆಗೆ ಸಿದ್ಧವಾಗಿರುತ್ತದೆ.
ಹಂತ 9: ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ, ಪಿಂಚಣಿದಾರರ ಮುಖವನ್ನು ಸ್ಕ್ಯಾನ್ ಮಾಡಿ, ಸರಿಯಾದ ಬೆಳಕು ಇರುವುದು ಮುಖ್ಯವಾಗಿದೆ. ಕೊನೆ ಸಲ್ಲಿಕೆ ಮಾಡಿದರೆ ಎಲ್ಲ ಪ್ರಕ್ರಿಯೆ ಪೂರ್ಣವಾಗಲಿದೆ.
ಸಲ್ಲಿಕೆ ಮಾಡಿದ ಬಳಿಕ ನಿಮಗೆ ಪ್ರಮಾಣ ಐಡಿ ಹಾಗೂ ಪಿಪಿಒ ಸಂಖ್ಯೆಯು ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸಲಿದೆ.
ಈ ಅಂಶಗಳು ನಿಮ್ಮ ಗಮನದಲ್ಲಿರಲಿ
* ಬಳಕೆದಾರರ ಅಥಂಟಿಫಿಕೇಷನ್ ಕೇವಲ ಒಂದು ಬಾರಿ ಮಾಡಲಾಗುವ ಪ್ರಕ್ರಿಯೆ
* ಪಿಂಚಣಿದಾರರು ಕೂಡಾ ಬಳಕೆದಾರರ ಸ್ಥಾನವನ್ನು ಪಡೆಯಬಹುದು.
* ಬಳಕೆದಾರರ ಅಥಂಟಿಫಿಕೇಷನ್ ಸಂಪೂರ್ಣವಾದ ಬಳಿಕ ಪಿಂಚಣಿದಾರರ ಅಥಂಟಿಫಿಕೇಷನ್ ಮಾಡಬೇಕಾಗುತ್ತದೆ.


Click it and Unblock the Notifications