ಯುಪಿಐ ಅಥವಾ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಇತ್ತೀಚಿನ ಪಾವತಿ ವಿಧಾನವಾಗಿದೆ. ಈ ಯುಪಿಐ ದೇಶದಲ್ಲಿ ಸಂಪೂರ್ಣವಾಗಿ ಪಾವತಿ ವ್ಯವಸ್ಥೆಯನ್ನೇ ಬದಲಾವಣೆ ಮಾಡಿದೆ. ಡಿಜಿಟಲ್ ಕ್ರಾಂತಿಯನ್ನು ಮಾಡಿದೆ ಎಂದು ಹೇಳಿದರೂ ತಪ್ಪಲ್ಲ. ಆದರೆ ಯುಪಿಐನಲ್ಲಿ ಎಷ್ಟು ವಹಿವಾಟು ಮಿತಿ ಇದೆ ಎಂದು ನಿಮಗೆ ತಿಳಿದಿದೆಯೇ?.
ಯುಪಿಐ ಡೆವಲಪರ್ ಎನ್‌ಪಿಸಿಐ ಪ್ರಕಾರ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಎಂಬುದು ಆರ್‌ಬಿಐ ನಿಯಂತ್ರಿತ ಘಟಕವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. UPI ಅನ್ನು IMPS ಅಡಿಯಲ್ಲಿ ಅಭಿವೃದ್ದಿಪಡಿಸಲಾಗಿದೆ. ಯಾವುದೇ ಎರಡು ಬ್ಯಾಂಕ್ ಖಾತೆಗಳ ನಡುವೆ ತಕ್ಷಣವೇ ಹಣವನ್ನು ವರ್ಗಾವಣೆ ಮಾಡಲು ಈ ಪಾವತಿ ವ್ಯವಸ್ಥೆ ಸಹಕಾರಿಯಾಗಿದೆ.
ಆದರೆ ಐಎಂಪಿಎಸ್‌ಗಿಂತ ಯುಪಿಐ ವಿಧಾನ ಹೇಗೆ ಭಿನ್ನ, ಯುಪಿಐ ಪಾವತಿ ಮೋಡ್ ಬಳಕೆ ಹೇಗೆ, ಅದರ ವಿಧಾನ ಯಾವುದು, ಪಾವತಿಗೆ ಎಷ್ಟು ಮಿತಿ ಇದೆ, ವ್ಯಾಪಾರಿಗಳಿಗೆ ಪಾವತಿ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಐಎಂಪಿಎಸ್‌ಗಿಂತ ಹೇಗೆ ಭಿನ್ನ?
ಐಎಂಪಿಎಸ್‌ಗಿಂತ ಇನ್‌ಫ್ರಾದಲ್ಲಿ ನಿರ್ಮಿಸಲಾಗಿದ್ದರೂ, ಯುಪಿಐ ಪ್ರಯೋಜನಗಳು ಈ ಕೆಳಗಿನಂತಿದೆ.
1. P2P ಪುಲ್ ಫನ್ಕಷನಾಲಿಟಿಯನ್ನು ಒದಗಿಸುತ್ತದೆ
2. ವ್ಯಾಪಾರಿ ಪಾವತಿಯನ್ನು ಸರಳ ಮಾಡುತ್ತದೆ
3. ಹಣ ವರ್ಗಾವಣೆಗಾಗಿ ಏಕ APP
4. ಒಂದೇ ಕ್ಲಿಕ್‌ನಲ್ಲಿ ಹಣ ವರ್ಗಾವಣೆ
ಯುಪಿಐ ಪಾವತಿ ಹಣ ವರ್ಗಾವಣೆ ಮಿತಿ
ಪ್ರಸ್ತುತ, ಪ್ರತಿ ಯುಪಿಐ ವಹಿವಾಟಿನ ಗರಿಷ್ಠ ಮಿತಿ 2 ಲಕ್ಷ ರೂಪಾಯಿ ಆಗಿದೆ. ಇದರರ್ಥ ನೀವು ಯುಪಿಐ ಮೂಲಕ ಎರಡು ಲಕ್ಷ ರೂಪಾಯಿಗಿಂತ ಅಧಿಕ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಾಗದು. ನೀವು ಪಾವತಿ ಮಾಡಿದ ಸಂದರ್ಭದಲ್ಲಿ ಹಣ ನಿಮ್ಮ ಖಾತೆಯಿಂದ ಕಡಿತವಾಗಿ ವರ್ಗಾವಣೆ ಮಾಡಿದ ಖಾತೆಗೆ ಜಮೆ ಆಗದಿದ್ದರೆ ಆ ಹಣವು ರಿಫಂಡ್ ಆಗುತ್ತದೆ. ಅದು ರಿಫಂಡ್ ಆಗದಿದ್ದರೆ ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಸಂಪರ್ಕ ಮಾಡಬಹುದು.
ಯುಪಿಐ ಪಾವತಿ ಮೋಡ್ ಬಳಕೆ ಹೇಗೆ, ಯುಪಿಐ-ಪಿನ್ ಎಂದರೇನು?
ಯುಪಿಐ ಮೂಲಕ ವಹಿವಾಟು ನಡೆಸಲು, ನೀವು ಮೊದಲ ಬಾರಿಗೆ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿದಾಗ ನೀವು ಯುಪಿಐ ಪಿನ್ ಅಥವಾ ವೈಯಕ್ತಿಕ ಗುರುತಿನ ಸಂಖ್ಯೆಯನ್ನು ಹೊಂದಿಸಬೇಕಾಗುತ್ತದೆ. ಇದು 4-6 ಅಂಕಿಗಳ ಪಾಸ್ ಕೋಡ್ ಆಗಿದೆ. ನೀವು ಆನ್‌ಲೈನ್ ವಹಿವಾಟನ್ನು ಕೈಗೊಳ್ಳಲು ಬಯಸುವ ಪ್ರತಿಯೊಂದು ಸಂದರ್ಭದಲ್ಲೂ ಈ ಪಿನ್ ಹಾಕಬೇಕಾಗುತ್ತದೆ. ಈ ಪಿನ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಸುರಕ್ಷಿತವಲ್ಲ. ನಾವು ಹಲವಾರು ಬಾರಿ ತಪ್ಪಾದ ಪಿನ್ ಅನ್ನು ಹಾಕಿದರೆ ಭದ್ರತೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಯುಪಿಐ ಪಾವತಿಯನ್ನು ನಿರ್ಬಂಧ ಮಾಡಲಾಗುತ್ತದೆ.
ಆನ್‌ಲೈನ್ ಮೂಲಕ ವ್ಯಾಪಾರಿಗಳಿಗೆ ಪಾವತಿ ಹೇಗೆ?
ನೀವು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿದಾಗ, ನೀವು ಯುಪಿಐ ಅನ್ನು ಪಾವತಿ ಆಯ್ಕೆಯನ್ನಾಗಿಸಿದರೆ ನೀವು ಯುಪಿಐ ಪಾವತಿ ಮಾಡಬಹುದು. ನೀವು ಯುಪಿಐ ಪಾವತಿ ಆಯ್ಕೆ ಕ್ಲಿಕ್ ಮಾಡಿದಾಗ ಪೇಮೆಂಟ್ ಅಡ್ರೆಸ್ ಅನ್ನು ನಮೂದಿಸಬೇಕಾಗುತ್ತದೆ. ಉದಾಹರಣೆಗೆ xyz@upi. ಒಮ್ಮೆ ನಮೂದಿಸಿದ ನಂತರ, ನಿಮ್ಮ ಆಪ್‌ನಲ್ಲಿ ರಿಕ್ವೆಸ್ಟ್ ಬರಲಿದೆ. ನಿಮ್ಮ ಯುಪಿಐ ಪಿನ್ ನಮೂದಿಸಿದ ಬಳಿಕ ಪಾವತಿ ಪೂರ್ಣವಾಗಲಿದೆ. ಅಲ್ಲದೆ, ಬ್ಯಾಂಕ್ ಸಮಯ ಅಥವಾ ಕೆಲಸದ ಸಮಯದ ಮಿತಿ ಯುಪಿಐಗೆ ಇಲ್ಲ. ಇದು 24*7 ಸೇವೆಯಾಗಿದೆ.
ಹಣ ಸ್ವೀಕರಿಸಲು ಫಲಾನುಭವಿಯು ಯುಪಿಐ ಹೊಂದಿರಬೇಕೇ?
ವರ್ಚುವಲ್ ಐಡಿ ವಹಿವಾಟಿನ ಸಂದರ್ಭದಲ್ಲಿ, ಫಲಾನುಭವಿಯು ವರ್ಚುವಲ್ ಐಡಿಯನ್ನು ಹೊಂದಿರಬೇಕು. ಯುಪಿಐನೊಂದಿಗೆ ನೋಂದಾಯಿಸಿಕೊಳ್ಳಬೇಕು. ಆದರೆ ಖಾತೆ + ಐಎಫ್‌ಎಸ್‌ಸಿ ಅಥವಾ ಆಧಾರ್ ಸಂಖ್ಯೆ ಇದ್ದರೆ ಫಲಾನುಭವಿಯು ಯುಪಿಐಗೆ ನೋಂದಾಯಿಸಬೇಕಾಗಿಲ್ಲ. ಯುಪಿಐ ಮೂಲಕ ಹಣವನ್ನು ವರ್ಗಾಯಿಸಲು ಫಲಾನುಭವಿಯ ನೋಂದಣಿ ಅಗತ್ಯವಿಲ್ಲ.


Click it and Unblock the Notifications