ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ನಾವು ರೆಸ್ಟೋರೆಂಟ್‌ಗಳ ವಿಚಾರಕ್ಕೆ ಬಂದಾಗ ಸೇವಾ ಶುಲ್ಕದ ಬಗ್ಗೆ ಗಮನ ಹರಿಯುತ್ತದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಸೇವಾ ಶುಲ್ಕವು ಅತೀ ಹೆಚ್ಚು ಸುದ್ದಿಯಾಗುತ್ತಿರುವುದೂ ಹೌದು. ಭಾರತ ಸೇರಿದಂತೆ ಹವಲಾರು ದೇಶಗಳಲ್ಲಿ ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ. ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜೊತೆಗೆ ಭಾರತದ ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.
ಆದರೆ ರೆಸ್ಟೋರೆಂಟ್‌ಗಳು ಪಾಲಿಸುವ ಈ ಕ್ರಮವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಸೇವಾ ಶುಲ್ಕದ ಬಗ್ಗೆ ಹಲವಾರು ಗ್ರಾಹಕರುಗಳು ದೂರಗಳನ್ನು ಕೂಡಾ ಸಲ್ಲಿಸುತ್ತಾ ಬಂದಿದ್ದಾರೆ. ಬಹುತೇಕ ರೆಸ್ಟೋರೆಂಟ್‌ಗಳು ಬಿಲ್‌ನಲ್ಲಿಯೇ ಸೇವಾ ಶುಲ್ಕವನ್ನು ಸೇರ್ಪಡೆ ಮಾಡಿರುತ್ತದೆ. ಆದರೆ ಹಲವಾರು ಗ್ರಾಹಕರಿಗೆ ಈ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ನಮಗೆ ಇಷ್ಟವಿದ್ದರೆ ಮಾತ್ರ ನಾವು ಸೇವಾ ಶುಲ್ಕವನ್ನು ನೀಡಬಹುದು ಎಂಬುವುದು ಹಲವಾರು ಗ್ರಾಹಕರಿಗೆ ತಿಳಿದಿಲ್ಲ.

ನಾವು ರೆಸ್ಟೋರೆಂಟ್‌ಗೆ ಹೋದಾಗ ಕೊನೆಯಲ್ಲಿ ನೀಡಲಾಗುವ ಬಿಲ್‌ನಲ್ಲಿ ಸೇವಾ ಶುಲ್ಕವನ್ನು ಸೇರ್ಪಡೆ ಮಾಡಿದ್ದರೆ, ನಾವು ಸೇವಾ ಶುಲ್ಕ ವಿಧಿಸಿರುವ ರೆಸ್ಟೋರೆಂಟ್ ವಿರುದ್ಧ ದೂರು ದಾಖಲು ಮಾಡುವ ಹಕ್ಕು ನಮಗಿದೆ ಎಂದು ಗ್ರಾಹಕರ ಹಕ್ಕು ಹೇಳುತ್ತದೆ. ಅಂದರೆ ಸರಳವಾಗಿ ಹೇಳುವುದಾದರೆ ನಮಗೆ ರೆಸ್ಟೋರೆಂಟ್‌ನ ಸೇವೆ ಇಷ್ಟವಾದರೆ ಮಾತ್ರ ನಮ್ಮ ಇಷ್ಟಕ್ಕೆ ಅನುಸಾರವಾಗಿ ನಾವು ಸೇವಾ ಶುಲ್ಕವನ್ನು ನೀಡಬಹುದಾಗಿದೆಯೇ ಹೊರತು ಇದು ಕಡ್ಡಾಯವೇನಲ್ಲ.
2022ರಿಂದ ಈ ನಿಯಮವು ಜಾರಿಗೆ ಬಂದಿದ್ದು, ಅದಾದ ಬಳಿಕ ಹಲವಾರು ರೆಸ್ಟೋರೆಂಟ್‌ಗಳ ವಿರುದ್ಧ ದೂರು ದಾಖಲು ಮಾಡಲಾಗಿದೆ. 2022ರ ಆದೇಶದ ಪ್ರಕಾರವಾಗಿ ಯಾವುದೇ ರೆಸ್ಟೋರೆಂಟ್‌ಗಳು ಗ್ರಾಹಕರು ಸೇವಾ ಶುಲ್ಕವನ್ನು ಪಾವತಿ ಮಾಡಬೇಕು ಎಂದು ಒತ್ತಡ ಹೇರುವಂತಿಲ್ಲ ಎಂದು ಇತ್ತೀಚೆಗೆ ಗ್ರಾಹಕರ ಫಾರಮ್ ಹೇಳಿದೆ. 2023ರ ಏಪ್ರಿಲ್ 12ರಂದು ದೆಹಲಿ ಹೈಕೋರ್ಟ್ ಕೂಡಾ ಇದೇ ಆದೇಶವನ್ನು ನೀಡಿದೆ.
ಸೇವಾ ಶುಲ್ಕ ಎಂದರೇನು?
ಸಾಮಾನ್ಯವಾಗಿ ಯಾವುದೇ ರೆಸ್ಟೋರೆಂಟ್‌ನ ಬಿಲ್‌ನಲ್ಲಿ ನಾವು ಆರ್ಡರ್ ಮಾಡಿದಂತಹ ಆಹಾರ, ಪಾನೀಯದ ದರ, ಜಿಎಸ್‌ಟಿಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಆದರೆ ಅದಕ್ಕೆ ಹೆಚ್ಚುವರಿಯಾಗಿ ಶೇಕಡ 5-10ರಷ್ಟು ಸೇವಾ ಶುಲ್ಕವನ್ನು ಹಲವಾರು ರೆಸ್ಟೋರೆಂಟ್‌ಗಳಲ್ಲಿ ಬಿಲ್‌ನಲ್ಲಿಯೇ ನಮೂದಿಸಲಾಗುತ್ತದೆ. ಇದರ ಬಗ್ಗೆ ಗ್ರಾಹಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಂತೆ ಸಿಸಿಪಿಎ ಈ ಬಗ್ಗೆ ಹೊಸದಾದ ಮಾರ್ಗಸೂಚಿಯನ್ನು ರೆಸ್ಟೋರೆಂಟ್‌ಗಳಿಗೆ ಜಾರಿ ಮಾಡಿದೆ.
ಕೇಂದ್ರ ಗ್ರಾಹಕರ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅದಾದ ಬಳಿಕ ಸೇವಾ ಶುಲ್ಕವು ಸರ್ಕಾರದಿಂದ ಹೇರಲಾಗುವ ಶುಲ್ಕವಲ್ಲ. ಈ ಶುಲ್ಕವನ್ನು ಜುಲೈ 4, 2022ರಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧ ಮಾಡಲಾಗುತ್ತದೆ ಎಂದು ಆದೇಶವನ್ನು ಹೊರಡಿಸಿದೆ. ಆದರೂ ರೆಸ್ಟೋರೆಂಟ್‌ಗಳು ನಮ್ಮ ಬಿಲ್‌ನಲ್ಲಿ ಸೇವಾ ಶುಲ್ಕವನ್ನು ವಿಧಿಸಿದರೆ ನಾವು ಮಾಡುವುದೇನು?, ಇಲ್ಲಿದೆ ವಿವರ....
ಸೇವಾ ಶುಲ್ಕಕ್ಕೆ ಇರುವ ಮಾರ್ಗಸೂಚಿಗಳು
* ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರದ ಬಿಲ್‌ನಲ್ಲಿ ಸೇವಾ ಶುಲ್ಕವನ್ನು ಸೇರ್ಪಡೆ ಮಾಡುವಂತಿಲ್ಲ.
* ಸೇವಾ ಶುಲ್ಕವನ್ನು ಬೇರೆ ಯಾವುದೇ ಇತರೆ ಶುಲ್ಕದ ಹೆಸರಿನಲ್ಲಿ ಸಂಗ್ರಹ ಮಾಡುವಂತಿಲ್ಲ.
* ಸೇವಾ ಶುಲ್ಕವನ್ನು ಪಾವತಿ ಮಾಡುವುದು ಗ್ರಾಹಕರ ಸ್ವಇಚ್ಚೆಯಾಗಿದೆ.
* ಸೇವಾ ಶುಲ್ಕದ ಆಧಾರದಲ್ಲಿ ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಬೇರೆ ಬೇರೆ ರೀತಿಯ ಸೇವೆಯನ್ನು ನೀಡುವಂತಿಲ್ಲ.
* ಬಿಲ್‌ನಲ್ಲಿ ಆಹಾರದ ಜೊತೆಗೆಯೇ ಸೇವಾ ಶುಲ್ಕವನ್ನು ವಿಧಿಸಿ, ಕೊನೆಯಲ್ಲಿ ತೆರಿಗೆ ಸೇರಿಸುವಂತಿಲ್ಲ.
ಬಿಲ್‌ನಲ್ಲಿ ರೆಸ್ಟೋರೆಂಟ್‌ನ ಸೇವಾ ಶುಲ್ಕವಿದ್ದರೆ ಏನು ಮಾಡುವುದು?
ಕೇಂದ್ರ ಗ್ರಾಹಕರ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ರೆಗ್ಯೂಲೇಷನ್ ಪ್ರಕಾರ ರೆಸ್ಟೋರೆಂಟ್‌ಗಳಲ್ಲಿ ಅಥವಾ ಹೊಟೇಲ್‌ಗಳಲ್ಲಿ ಸೇವಾ ಶುಲ್ಕವನ್ನು ವಿಧಿಸಿದ್ದರೆ ನೀವು ಈ ಕೆಳಗೆ ತಿಳಿಸಲಾದ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
* ರೆಸ್ಟೋರೆಂಟ್, ಹೊಟೇಲ್‌ಗಳಲ್ಲಿ ಸೇವಾ ಶುಲ್ಕವನ್ನು ಬಿಲ್‌ನಲ್ಲಿ ಹಾಕಿದ್ದರೆ, ನೀವು ಈ ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ, ಅದನ್ನು ಬಿಲ್‌ನಿಂದ ತೆಗೆಯಿರಿ ಎಂದು ರೆಸ್ಟೋರೆಂಟ್, ಹೊಟೇಲ್‌ಗಳಿಗೆ ಮೊದಲು ಹೇಳಿ.
* ನೀವು ಹೇಳಿದರೂ ಈ ಶುಲ್ಕವನ್ನು ತೆಗೆಯುವುದಿಲ್ಲ ಎಂದಾದರೆ, ಅಥವಾ ಎಲ್ಲ ಗ್ರಾಹಕರಿಗೆ ಶುಲ್ಕ ವಿಧಿಸಲಾಗುತ್ತಿದೆ ಎಂದಾದರೆ ನೀವು ದೂರು ದಾಖಲು ಮಾಡಬಹುದು. 1915 ಕರೆ ಮಾಡಿ ಅಥವಾ ಎನ್‌ಸಿಎಚ್ ಮೊಬೈಲ್ ಆಪ್ ಮೂಲಕ ನೀವು ರೆಸ್ಟೋರೆಂಟ್ ವಿರುದ್ಧ ರಾಷ್ಟ್ರೀಯ ಗ್ರಾಹಕರ ಸಹಾಯವಾಣಿ (ಎನ್‌ಸಿಎಚ್) ಮೂಲಕ ದೂರು ನೀಡಬಹುದು.
* ಆಯೋಗವನ್ನು ಕೂಡಾ ಸಂಪರ್ಕ ಮಾಡಬಹುದು. ಇ-ದಾಖಿಲ್ ಸೈಟ್ (www.e-daakhil.nic.in) ಮೂಲಕ ಆನ್‌ಲೈನ್ ದೂರು ಸಲ್ಲಿಸಬಹುದು.
* ಜಿಲ್ಲಾಧಿಕಾರಿಗೆ ದೂರು ನೀಡಬಹುದು. [email protected] ಗೆ ಇಮೇಲ್ ಮಾಡುವ ಮೂಲಕ ನೇರವಾಗಿ ಸಿಸಿಪಿಎಗೆ ದೂರು ಸಲ್ಲಿಸಬಹುದು.
More From GoodReturns

ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ಎಲ್ಲ ಹಣವನ್ನೂ ಒಂದೇ ಬ್ಯಾಂಕ್ನಲ್ಲಿ ಇಡ್ತಿದ್ದೀರಾ? ಒಂದು ತಪ್ಪು ನಿಮ್ಮ ಸಂಪೂರ್ಣ ಉಳಿತಾಯಕ್ಕೆ ಅಪಾಯ!

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications