ಭವಿಷ್ಯ ನಿಧಿ (ಪಿಎಫ್) ಡೆಪಾಸಿಟ್‌ಗಳ ಮೇಲಿನ ಬಡ್ಡಿದರವನ್ನು ಶೇಕಡ 8.15 ಕ್ಕೆ ಹೆಚ್ಚಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಕೇಂದ್ರೀಯ ಟ್ರಸ್ಟಿಗಳ (ಸಿಬಿಟಿ) ಶಿಫಾರಸನ್ನು ಸರ್ಕಾರ ಅಳವಡಿಸಿಕೊಂಡಿದೆ. ಘೋಷಣೆಯಾದಾಗಿನಿಂದ, ಹೆಚ್ಚಿದ ಬಡ್ಡಿ ಮೊತ್ತವನ್ನು ತಮ್ಮ ಖಾತೆಗೆ ಯಾವಾಗ ಜಮಾ ಮಾಡಲಾಗುತ್ತದೆ ಎಂದು ತಿಳಿಯಲು ಇಪಿಎಫ್ ಸದಸ್ಯರು ಉತ್ಸುಕರಾಗಿದ್ದಾರೆ.
ಇಪಿಎಫ್ ಖಾತೆಯಲ್ಲಿ ಬಡ್ಡಿಯನ್ನು ಮಾಸಿಕವಾಗಿ ಲೆಕ್ಕಹಾಕಲಾಗುತ್ತದೆ. ಆದರೂ ಕೂಡಾ ವರ್ಷದ ಕೊನೆಯಲ್ಲಿ ಈ ಬಡ್ಡಿದರವನ್ನು ನಿಮ್ಮ ಪಿಎಫ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಬಡ್ಡಿದಯನ್ನು ಒಟ್ಟುಗೂಡಿಸಲಾಗುತ್ತದೆ. ಒಂದು ತಿಂಗಳ ಬಡ್ಡಿಯನ್ನು ಮುಂದಿನ ತಿಂಗಳ ಬಾಕಿಗೆ ಸೇರ್ಪಡೆ ಮಾಡಲಾಗುತ್ತದೆ.

ಪಿಎಫ್ ಬಡ್ಡಿದರ ಯಾವಾಗ ಜಮೆಯಾಗುತ್ತದೆ?
ಈ ನಡುವೆ ಯಾವಾಗ ಪಿಎಫ್ ಬಡ್ಡಿದರ ಜಮೆಯಾಗಲಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಟ್ವಿಟ್ಟರ್ ಬಳಕೆದಾರರು ಕೂಡಾ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಇಪಿಎಫ್‌ಒ ಪ್ರತಿಕ್ರಿಯೆಯನ್ನು ನೀಡಿದೆ. "ಪ್ರಕ್ರಿಯೆಯು ನಡೆಯುತ್ತಿದೆ. ಶೀಘ್ರದಲ್ಲೇ ಪಿಎಫ್ ಜಮೆ ಮಾಡಲಾಗುತ್ತದೆ. ಬಡ್ಡಿಯನ್ನು ಮಾಸಿಕವಾಗಿ ಸೇರಿಸಿ ಪೂರ್ಣವಾಗಿ ಪಾವತಿಸಲಾಗುತ್ತದೆ. ಬಡ್ಡಿದರ ನಷ್ಟವೇನು ಆಗುವುದಿಲ್ಲ. ದಯವಿಟ್ಟು ತಾಳ್ಮೆಯನ್ನು ಕಾಪಾಡಿಕೊಳ್ಳಿ," ಎಂದು ತಿಳಿಸಿದ್ದಾರೆ.
ಮೊತ್ತವು ಕ್ರೆಡಿಟ್ ಆದ ನಂತರ, ಗ್ರಾಹಕರು ತಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ಇಪಿಎಫ್‌ಒ ಅಧಿಕೃತ ವೆಬ್‌ಸೈಟ್, ಮಿಸ್ಡ್ ಕಾಲ್‌ಗಳು, ಎಸ್‌ಎಂಎಸ್ ಅಥವಾ ಉಮಂಗ್ ಆಪ್ ಮೂಲಕವೂ ವಿವಿಧ ವಿಧಾನಗಳನ್ನು ಬಳಸಿಕೊಂಡು ಪರಿಶೀಲಿಸಬಹುದು.
ಆನ್‌ಲೈನ್‌ನಲ್ಲಿ ಇಪಿಎಫ್‌ಒ ಬ್ಯಾಲೆನ್ಸ್ ಪರಿಶೀಲಿಸಿ
ಹಂತ 1: ಇಪಿಎಫ್‌ಒನ ಅಧಿಕೃತ ಪೋರ್ಟಲ್ epfindia.gov.in ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ, Services ಅನ್ನು ಕ್ಲಿಕ್ ಮಾಡಿ, ನಂತರ For Employers ಎಂಬುವುದನ್ನು ಕ್ಲಿಕ್ ಮಾಡಿ.
ಹಂತ 3: ಹೊಸ ಪುಟದಲ್ಲಿ, Services ಅನ್ನು ನೋಡಿ, Member Passbook ಲಿಂಕ್ ಕ್ಲಿಕ್ ಮಾಡಿ, ನಂತರ ಲಾಗಿನ್ ಪುಟವು ನಿಮಗೆ ಕಾಣಿಸುತ್ತದೆ.
ಹಂತ 4: ನಿಮ್ಮ ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್), ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ ಖಾತೆಗೆ ಲಾಗಿನ್ ಮಾಡಿ. submit ಕ್ಲಿಕ್ ಮಾಡಿ.
ಹಂತ 5: ಖಾತೆಯ ವಿವರಗಳು ಮತ್ತು ಕ್ರೆಡಿಟ್ ಆಗಿರುವ ಬಡ್ಡಿಯನ್ನು ಪರಿಶೀಲಿಸಿ.
ಉಮಾಂಗ್ ಆಪ್‌ನಲ್ಲಿ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ
ಹಂತ 1: ಉಮಾಂಗ್ ಪೋರ್ಟಲ್‌ನಲ್ಲಿ https://web.umang.gov.in/landing/ ಕ್ಲಿಕ್ ಮಾಡಿ.
ಹಂತ 2: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಗಾಗಿ ಹುಡುಕಿ, view passbook ಮೇಲೆ ಕ್ಲಿಕ್ ಮಾಡಿ
ಹಂತ 3: ಮುಂದುವರಿಯಲು, ನಿಮ್ಮ ಇಪಿಎಫ್‌ನ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ನಮೂದಿಸಿ
ಹಂತ 4: receive OTP ಮೇಲೆ ಕ್ಲಿಕ್ ಮಾಡಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿನ್ನು ನಮೂದಿಸಿ
ಹಂತ 5: ಅದಾದ ಬಳಿಕ member ID ಆಯ್ಕೆ ಮಾಡಿ, ಇ-ಪಾಸ್‌ಬುಕ್ ಅನ್ನು ಡೌನ್‌ಲೋಡ್ ಮಾಡಿ.
ಹಂತ 6: ಇ-ಪಾಸ್‌ಬುಕ್ ವಿವರಗಳು ಮತ್ತು ಇಪಿಎಫ್ ಬ್ಯಾಲೆನ್ಸ್ ಮಾಹಿತಿ ನಿಮಗೆ ಲಭ್ಯವಾಗುತ್ತದೆ.
ಎಸ್‌ಎಂಎಸ್ ಮೂಲಕ ಇಪಿಎಫ್‌ಒ ಬ್ಯಾಲೆನ್ಸ್ ಪರಿಶೀಲಿಸಲು, ಗ್ರಾಹಕರು "ಇಪಿಎಫ್‌ಒಎಚ್‌ಒ ಯುಎಎನ್ ಇಎನ್‌ಜಿ" ಎಂದು ಟೈಪ್ ಮಾಡಬೇಕು ಮತ್ತು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899 ಗೆ ಸಂದೇಶವನ್ನು ಕಳುಹಿಸಬೇಕು.


Click it and Unblock the Notifications