ನಿವೃತ್ತಿ ನಿಧಿಯನ್ನು ಒದಗಿಸುವ ಸಂಸ್ಥೆಯಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ನಿವೃತ್ತಿ ಬಳಿಕ ಅಧಿಕ ಪಿಂಚಣಿಯನ್ನು ಪಡೆಯುವ ಪ್ರಕ್ರಿಯೆಯ ಮಾರ್ಗಸೂಚಿಯನ್ನು ಜಾರಿ ಮಾಡಿದೆ. ಈ ಮಾರ್ಗಸೂಚಿ ಪ್ರಕಾರ ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ.
ಉದ್ಯೋಗಿಗಳ ಪಿಂಚಣಿ (ತಿದ್ಧುಪಡಿ) ಯೋಜನೆ, 2014ರ ಬಗ್ಗೆ ಸುಪ್ರೀಂ ಕೋರ್ಟ್ ನವೆಂಬರ್ 4, 2022ರಲ್ಲಿ ನೀಡಿದ ತೀರ್ಪನ್ನು ಎಲ್ಲ ಎಲ್ಲ ಕಚೇರಿಗಳು ಜಾರಿ ಮಾಡಲು ಇಪಿಎಫ್‌ಒ ಸೂಚನೆ ನೀಡಿದೆ. ಅಧಿಕ ಪಿಂಚಣಿಯನ್ನು ಪಡೆಯಲು ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿಯನ್ನು ಕೂಡಾ ನೀಡಿದೆ.
ಸುಪ್ರೀಂ ಕೋರ್ಟ್ ಇಪಿಎಸ್ ಅಡಿಯಲ್ಲಿ ಅಧಿಕ ಪಿಂಚಣಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಖ ಮಾರ್ಚ್ 3, 2023 ಆಗಿದೆ. ಅಸ್ತಿತ್ವದಲ್ಲಿರುವ ಉದ್ಯೋಗಿಗಳು ಮತ್ತು ಸೆಪ್ಟೆಂಬರ್ 1, 2014 ರಂತೆ ಇಪಿಎಸ್ ಸದಸ್ಯರಾಗಿದ್ದವರು 1995 ರ ಉದ್ಯೋಗಿಗಳ ಪಿಂಚಣಿ ಯೋಜನೆಯಲ್ಲಿ (ಇಪಿಎಸ್) ನಿಗದಿತ ಮೊತ್ತಕ್ಕಿಂತ ಅಧಿಕ ವೇತನದ ಆಧಾರದಲ್ಲಿ ಹೆಚ್ಚಿನ ಪಿಂಚಣಿಯನ್ನು ಪಡೆಯಬಹುದು ಎಂದು ಇಪಿಎಫ್‌ಒ ಆದೇಶ ತಿಳಿಸಿದೆ. ಯಾರು ಅರ್ಜಿ ಸಲ್ಲಿಸಬಹುದು, ಹೇಗೆ ಅರ್ಜಿ ಸಲ್ಲಿಸುವುದು ಇತರೆ ಮಾಹಿತಿ ಇಲ್ಲಿದೆ, ಮುಂದೆ ಓದಿ...

ಪಿಂಚಣಿ: ಯಾರು ಅರ್ಜಿ ಸಲ್ಲಿಸಬಹುದು?
ಸೆಪ್ಟೆಂಬರ್ 1, 2014ರಿಂದ ಇಪಿಎಸ್ ಸದಸ್ಯರಾಗಿರುವವರು ತನ್ನ ಮೂಲ ವೇತನದಿಂದ ಶೇಕಡ 8.33ರಷ್ಟು ಇಪಿಎಫ್‌ಗೆ ಕೊಡುಗೆ ನೀಡಬೇಕಾಗುತ್ತದೆ. ಯಾರು ಈ ಇಪಿಎಸ್ ಸದಸ್ಯರಾಗಬಹುದು ಎಂಬ ಬಗ್ಗೆ ಇಪಿಎಫ್‌ಒ ಮಾಹಿತಿ ನೀಡಿದೆ.
* ರೂ 5,000 ಅಥವಾ 6,500 ರ ವೇತನದ ಮಿತಿಯನ್ನು ಮೀರಿದ ಸಂಬಳದ ಮೇಲೆ ಕೊಡುಗೆ ನೀಡಿದ ಉದ್ಯೋಗಿಗಳು ಮತ್ತು ಉದ್ಯೋಗದಾತರು
* ಇಪಿಎಸ್ 1995 ರ ಸದಸ್ಯರಾಗಿದ್ದಾಗ ಪೂರ್ವ ತಿದ್ದುಪಡಿ ಯೋಜನೆಯ ಪ್ಯಾರಾ 11 (3) ಗೆ ನಿಬಂಧನೆ ಅಡಿಯಲ್ಲಿ ಜಂಟಿ ಆಯ್ಕೆಯನ್ನು ಚಲಾಯಿಸದವರು
* 01.09.2014 ಕ್ಕಿಂತ ಮೊದಲು ಇಪಿಎಫ್‌ಒ ಸದಸ್ಯರಾಗಿರುವವರು ಮತ್ತು 01.09.2014 ರಂದು ಅಥವಾ ನಂತರ ಸದಸ್ಯರಾಗಿ ಮುಂದುವರೆದವರು ಈ ಅರ್ಜಿ ಸಲ್ಲಿಸಬಹುದು.
ಗಮನಿಸಿ: ಆಗಸ್ಟ್ 31, 2014ರಿಂದ ಯಾರು ಇಪಿಎಫ್‌ನ ಸದಸ್ಯರು ಆಗಿರುತ್ತಾರೋ, ಇಪಿಎಸ್ ಅಡಿಯಲ್ಲಿ ಅಧಿಕ ಪಿಂಚಣಿಯನ್ನು ಪಡೆಯುತ್ತಿಲ್ಲವೋ, ಅವರು ಮಾರ್ಚ್ 3, 2023ಕ್ಕೂ ಮುನ್ನ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಆಯ್ಕೆ ಹೊಂದಿದ್ದಾರೆ.
ಅರ್ಹ ಉದ್ಯೋಗಿಗಳು ಅರ್ಜಿ ಸಲ್ಲಿಬಹುದು
1. ನಿಗದಿತ ಫಾರ್ಮ್, ವಿಧಾನದಲ್ಲಿ ಅರ್ಜಿ ಸಲ್ಲಿಸಬಹುದು
2. ಜಾಯಿಂಟ್ ಆಯ್ಕೆಯು ಡಿಸ್ಕ್ಲೈಮರ್ ಮತ್ತು ಡಿಕ್ಲೆರೇಷನ್ ಅನ್ನು ಹೊಂದಿರುತ್ತದೆ.
3. ಪ್ರಾವಿಡೆಂಟ್ ಫಂಡ್‌ನಿಂದ ಪಿಂಚಣಿ ನಿಧಿಗೆ ಷೇರುಗಳ ಅಗತ್ಯವಿದ್ದರೆ, ಫಂಡ್‌ಗೆ ಯಾವುದೇ ರಿ-ಡೆಪಾಸಿಟ್ ಮಾಡಬೇಕಾದರೆ, ಜಂಟಿ ಆಯ್ಕೆ ಮಾಡಬಹುದು.
4. ನಿಮ್ಮ ಇಪಿಎಫ್‌ಒ ಪ್ರಾವಿಡೆಂಟ್ ಫಂಡ್ ಖಾತೆಯಿಂದ ಪಿಂಚಣಿ ಖಾತೆಗೆ ಹಣ ವರ್ಗಾವಣೆ ಮಾಡಬಹುದು.
5. ಇಪಿಎಫ್ ಯೋಜನೆ 1952 ರ ಪ್ಯಾರಾ 60 ರ ಅಡಿಯಲ್ಲಿ ಘೋಷಿಸಲಾದ ದರದಲ್ಲಿ ಬಡ್ಡಿಯೊಂದಿಗೆ ಠೇವಣಿ ಇಡಬೇಕು.
6. ಅರ್ಹರು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.


Click it and Unblock the Notifications