ಎಲ್‌ವಿಎಂಎಚ್‌ನ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಇತ್ತೀಚೆಗೆ ಟೆಸ್ಲಾ ಮುಖ್ಯಸ್ಥ, ಟ್ವಿಟ್ಟರ್ ಮಾಲಿಕ ಎಲಾನ್ ಮಸ್ಕ್ ಅನ್ನು ಫೋರ್ಬ್ಸ್‌ನ ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಕೆಳಗಿಳಿಸಿದ್ದಾರೆ. ವಿಶ್ವದ ಮೊದಲ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಆದರೆ ಈಗ ವಿಶ್ವದ ಅತೀ ಶ್ರೀಮಂತ ವ್ಯಕ್ತಿಯ ಪುತ್ರಿ ಡೆಲ್ಫೀನ್ ಅರ್ನಾಲ್ಟ್ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ.
ಫ್ರೆಂಚ್ ಮಹಿಳಾ ಉದ್ಯಮಿ ಡೆಲ್ಫೀನ್ ಅರ್ನಾಲ್ಟ್ ಸುಮಾರು 204 ಬಿಲಿಯನ್ ಡಾಲರ್ ಮೌಲ್ಯದ ಆದಾಯವನ್ನು ಹೊಂದಿರುವ ವಿಶ್ವದ ಅತೀ ಶ್ರೀಮಂತ ಕುಟುಂಬದ ಸದಸ್ಯೆಯಾಗಿದ್ದಾರೆ. 47 ವರ್ಷದ ಡೆಲ್ಫೀನ್ ಅರ್ನಾಲ್ಟ್ ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾದ ಎಲ್‌ವಿಎಂಎಚ್‌ನ ಸಿಇಒ ಬರ್ನಾರ್ಡ್ ಅರ್ನಾಲ್ಟ್‌ರ ಪುತ್ರಿಯಾಗಿದ್ದಾರೆ. ಹಾಗೆಯೇ ಬರ್ನಾರ್ಡ್ ಅರ್ನಾಲ್ಟ್‌ರ ಏಕೈಕ ಪುತ್ರಿಯಾಗಿದ್ದಾರೆ.
ಡೆಲ್ಫೀನ್ ಅರ್ನಾಲ್ಟ್ ಎಲ್‌ವಿಎಂಎಚ್ ಗ್ರೂಪ್‌ನ ಲೂಯಿಸ್ ವಿಟಾನ್‌ನ ಡೈರೆಕ್ಟರ್ ಆಗಿದ್ದಾರೆ. ಹಾಗೆಯೇ ಲೂಯಿಸ್ ವಿಟಾನ್ ವಿಶ್ವದ ಅತೀ ಐಷಾರಾಮಿ ಬ್ರಾಂಡ್ ಆಗಿದೆ. ಡೆಲ್ಫೀನ್ ಅರ್ನಾಲ್ಟ್ ಪ್ರಸ್ತುತ ಹೊಸದಾಗಿ ಅತೀ ಜನಪ್ರಿಯವಾದ ಫ್ಯಾಷನ್ ಬ್ರಾಂಡ್ ಡಿಯಾರ್‌ನ ಮುಖ್ಯಸ್ಥರಾಗಿದ್ದಾರೆ. ಡೆಲ್ಫೀನ್ ಅರ್ನಾಲ್ಟ್ ಯಾರು, ಎಲ್ಲಿ ಶಿಕ್ಷಣ ಪಡೆದಿದ್ದಾರೆ, ಮೊದಲಾದವುಗಳ ಮಾಹಿತಿ ಇಲ್ಲಿದೆ ಮುಂದೆ ಓದಿ....
ಬರ್ನಾರ್ಡ್ ಅರ್ನಾಲ್ಟ್‌ನ ಪುತ್ರಿ ಡೆಲ್ಫೀನ್ ಶಿಕ್ಷಣ
ಡೆಲ್ಫೀನ್ ಅರ್ನಾಲ್ಟ್ ಫ್ರೆಂಚ್‌ನ ಬಿಲಿಯನೇರ್ ಆಗಿದ್ದಾರೆ. ಫ್ಯಾಷನ್ ಬ್ರಾಂಡ್ ಆದ ಎಲ್‌ವಿಎಂಎಚ್ ಗ್ರೂಪ್‌ನ ಬರ್ನಾರ್ಡ್ ಅರ್ನಾಲ್ಟ್‌ನ ಪ್ರಥಮ ಪುತ್ರಿಯಾಗಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ಮೊದಲ ಪತ್ನಿ ಅನ್ನೆ ದೆವಾರಿನ್ ಮಗಳು ಡೆಲ್ಫೀನ್ ಅರ್ನಾಲ್ಟ್ ಆಗಿದ್ದಾರೆ. ನಾಲ್ಕು ತಮ್ಮಂದಿರು ಇದ್ದಾರೆ. ಇನ್ನು ಡೆಲ್ಫೀನ್ ಅರ್ನಾಲ್ಟ್ ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್‌ನಲ್ಲಿ (ಎಲ್‌ಎಸ್‌ಇ) ಶಿಕ್ಷಣವನ್ನು ಪಡೆದಿದ್ದಾರೆ. ಹಾಗೆಯೇ ಇಡಿಎಚ್‌ಇಸಿ ಬ್ಯುಸಿನೆಸ್ ಸ್ಕೂಲ್‌ನಲ್ಲಿಯು ಶಿಕ್ಷಣ ಪಡೆದಿದ್ದಾರೆ.
ಡೆಲ್ಫೀನ್ ಅರ್ನಾಲ್ಟ್ ವೃತ್ತಿ ಜೀವನ
ಡೆಲ್ಫೀನ್ ಅರ್ನಾಲ್ಟ್ ತನ್ನ ವೃತ್ತಿ ಜೀವನವನ್ನು ಮ್ಯಾಕ್‌ಕಿನ್ಸಿ & ಕಂಪನಿಯಲ್ಲಿ ಆರಂಭ ಮಾಡಿದ್ದಾರೆ. 2000ರಲ್ಲಿ ಎಲ್‌ವಿಎಂಎಚ್‌ಗೆ ಸೇರ್ಪಡೆಯಾಗಿದ್ದಾರೆ. 2003ರಲ್ಲಿ ಡೆಲ್ಫೀನ್ ಅರ್ನಾಲ್ಟ್ ಎಲ್‌ವಿಎಂಎಚ್ ಗ್ರೂಪ್‌ನ ಮ್ಯಾನೆಜ್‌ಮೆಂಟ್ ಬೋರ್ಡ್‌ಗೆ ಸೇರ್ಪಡೆಯಾಗಿದ್ದಾರೆ. ಹಾಗೆಯೇ ಈ ಬೋರ್ಡ್‌ನಲ್ಲಿ ಅತೀ ಸಣ್ಣ ವಯಸ್ಸಿನ ವ್ಯಕ್ತಿ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಸ್ಥಾನಕ್ಕೆ ಏರಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. 2013ರಲ್ಲಿ ಲೂಯಿಸ್ ವಿಟಾನ್‌ಗೆ ಸೇರ್ಪಡೆಯಾಗುವುದಕ್ಕೂ ಮುನ್ನ ಡೆಲ್ಫೀನ್ ಅರ್ನಾಲ್ಟ್ ಕ್ರಿಶ್ಚಿಯನ್ ಡಿಯಾರ್‌ನಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಎಲ್‌ವಿಎಂಎಚ್ ಹೊರತುಪಡಿಸಿ ಡೆಲ್ಫೀನ್ ಅರ್ನಾಲ್ಟ್ ಮಾಯ್ಟ್ ಹೆನ್ನೆಸ್ಸಿ, ಎಂ6, ಫೆರಾರಿ ಮೊದಲಾದ ಸಂಸ್ಥೆಯ ಬೋರ್ಡ್‌ನಲ್ಲಿದ್ದಾರೆ.
ಡೆಲ್ಫೀನ್ ಅರ್ನಾಲ್ಟ್ ವೈಯಕ್ತಿಕ ಜೀವನ
ವೈಯಕ್ತಿಕ ಜೀವನ 2005ರಲ್ಲಿ ಇಟಾಲಿಯನ್ ವೈನ್‌ನ ಅಲೆಕ್ಸಾಡ್ರೋ ವಾಲ್ಲಾರಿನೋ ಗಾನ್ಸಿಯರನ್ನು ವಿವಾಹವಾಗಿದ್ದು, 2010ರವರೆಗೂ ವೈವಾಗಿಕ ಜೀವನವನ್ನು ನಡೆಸಿದ್ದಾರೆ. ಪ್ರಸ್ತುತ ಫ್ರೆಂಚ್ ಉದ್ಯಮಿ ಟೈಕಾನ್ ಎಕ್ಸಿವಿಯರ್ ನೀಲ್ ಜೊತೆ ಸಂಬಂಧವನ್ನು ಹೊಂದಿದ್ದಾರೆ. ಈ ದಂಪತಿಗೆ 10 ವರ್ಷದ ಪುತ್ರಿ ಎಲಿಸಾ ಹಾಗೂ ಆರು ವರ್ಷದ ಪುತ್ರ ಜೋಸೆಫ್ ಇದ್ದಾರೆ.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications