ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ತನ್ನ ಮುಂಬೈನ ಅಂಟಿಲಿಯಾದಲ್ಲಿ ತನ್ನ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕ ಮೆರ್ಚೆಂಟ್ ಅವರ ನಿಶ್ಚಿತಾರ್ಥವನ್ನು ನಡೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ರಣ್‌ಬೀರಿ ಕಪೂರ್, ಅಲಿಯಾ ಭಟ್, ಜಾನ್ವಿ ಕಪೂರ್, ರಣ್‌ಬೀರ್ ಸಿಂಗ್, ಅಯನ್ ಮುಖರ್ಜಿ ಮೊದಲಾದ ಸೆಲೆಬ್ರೆಟಿಗಳು ಭಾಗಿಯಾಗಿದ್ದಾರೆ.
ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ತನ್ನ ಬಾಲ್ಯದ ಸ್ನೇಹಿತೆ ರಾಧಿಕ ಮರ್ಚೆಂಟ್‌ರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಹಿಂದೆ ರಾಧಿಕ ಮೆರ್ಚೆಂಟ್‌ಗಾಗಿ ಮುಕೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಅರಂಗೇತ್ರಂ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಸುದ್ದಿಯಾಗಿದ್ದರು.
ಈಗ ಅನಂತ್ ಹಾಗೂ ರಾಧಿಕ ಮರ್ಚೆಂಟ್ ನಿಶ್ಚಿತಾರ್ಥ ನಡೆದಿದ್ದು, ಜೋಡಿ ಶೀಘ್ರವೇ ವಿವಾಹ ಬಾಂಧವ್ಯಕ್ಕೆ ಒಳಗಾಗಲಿದ್ದಾರೆ. ಆದರೆ ಈ ರಾಧಿಕ ಮೆರ್ಚೆಂಟ್ ಯಾರು, ಹುಟ್ಟಿದ್ದು ಯಾವಾಗ, ಉದ್ಯೋಗವೇನು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ರಾಧಿಕ ಮೆರ್ಚೆಂಟ್ ಜನನ
ರಾಧಿಕ ಮೆರ್ಚೆಂಟ್ ವ್ಯಾಪಾರ ಹಾಗೂ ಕ್ಲಾಸಿಕಲ್ ಡ್ಯಾನ್ಸ್ ಎರಡರಲ್ಲೂ ಹಿಡಿತವನ್ನು ಹೊಂದಿರುವ ಬಹು ಪ್ರತಿಭೆ ಹೊಂದಿರುವ ಯುವತಿ. ಡಿಸೆಂಬರ್ 18, 1994ರಲ್ಲಿ ಮುಂಬೈನಲ್ಲಿ ಜನಿಸಿದ ರಾಧಿಕ ಮರ್ಚೆಂಟ್, ವಿರೇನ್ ಹಾಗೂ ಶೈಲಾ ಮರ್ಚೆಂಟ್‌ರ ಪುತ್ರಿಯಾಗಿದ್ದಾರೆ. ಆಕೆಯ ತಂದೆ ಭಾರತದ ಪ್ರಮುಖ ಫಾರ್ಮಾ ಕಂಪನಿಗಳಲ್ಲಿ ಒಂದಾದ ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ಆಗಿದ್ದಾರೆ. ಹಾಗೆಯೇ ಭಾರತದ ಶ್ರೀಮಂತ ಬಿಲಿಯನೇರ್ ಕೂಡಾ ಆಗಿದ್ದಾರೆ.
ರಾಧಿಕ ಮರ್ಚೆಂಟ್ ಶೈಕ್ಷಣಿಕ ಜೀವನ
ರಾಧಿಕ ಮರ್ಚೆಂಟ್ ಮುಂಬೈನ್ ಟಾಪ್ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮಾಡಿದ್ದಾರೆ. ಕೆಥೆಡ್ರೆಲ್ ಆಂಡ್ ಜಾನ್ ಕೋನನ್ ಸ್ಕೋರ್, ಎಕೋಲ್ ಮೋಡೈಲ್ ವರ್ಲ್ಡ್ ಸ್ಕೂಲ್, ಬಿಡಿ ಸೋಮಾನಿ ಇಂಟರ್ ನ್ಯಾಷನಲ್ ಸ್ಕೂಲ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಶಾಲೆಗಳಲ್ಲಿ ವಿಧ್ಯಾಭ್ಯಾಸವನ್ನು ಪಡೆದಿದ್ದಾರೆ. ತನ್ನ ಡಿಪ್ಲೋಮಾವನ್ನು ಬಿಡಿ ಸೋಮಾನಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ರಾಧಿಕ ಮರ್ಚೆಂಟ್ ಪಡೆದಿದ್ದಾರೆ. ಬಳಿಕ 2017ರಲ್ಲಿ ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ರಾಜಕೀಯ ವಿಜ್ಞಾನ (political science) ಪದವಿ ಪಡೆದಿದ್ದಾರೆ.
ರಾಧಿಕ ಮರ್ಚೆಂಟ್ ವೃತ್ತಿ ಜೀವನ
ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ರಾಜಕೀಯ ವಿಜ್ಞಾನದಲ್ಲಿ (political science) ತನ್ನ ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಬಳಿಕ ರಾಧಿಕ ಮರ್ಚೆಂಟ್ ಭಾರತಕ್ಕೆ ವಾಪಾಸ್ ಬಂದು ತನ್ನ ವೃತ್ತಿ ಜೀವನ ಆರಂಭಿಸಿದ್ದಾರೆ. ಇಂಡಿಯಾ ಫಸ್ಟ್ ಆರ್ಗನೈಜೇಷನ್ ಹಾಗೂ ದೇಸಾಯಿ & ದಿವಾಂಜಿ ಸಂಸ್ಥೆಯಲ್ಲಿ ಇಂಟರ್ನ್ ಆಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಬಳಿಕ ಮುಂಬೈ ಮೂಲಕ ರಿಯಲ್ ಎಸ್ಟೇಟ್ ಸಂಸ್ಥೆಯಾದ ಇಸ್ಪ್ರವಾದಲ್ಲಿ ಕಿರಿಯ ಸೇಲ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಣೆ ಆರಂಭಿಸಿದ್ದಾರೆ. ಇನ್ನು ರಾಧಿಕ ಭರತನಾಟ್ಯ ಕಲಾವಿದೆ ಕೂಡಾ ಹೌದು. ಸುಮಾರು ಎಂಟು ವರ್ಷಗಳ ಕಾಲ ತನ್ನ ಗುರು ಭಾವನ ಠಾಕರ್ ಬಳಿ ಮುಂಬೈನ ಶ್ರೀ ನಿಭಾ ಆರ್ಟ್ಸ್ ಡ್ಯಾನ್ಸ್ ಅಕಾಡೆಮಿಯಲ್ಲಿ ಭರತನಾಟ್ಯ ಕಲಿತಿದ್ದಾರೆ. ಮೇ ತಿಂಗಳಿನಲ್ಲಿ ಅರಂಗೇತ್ರಂ ಕಾರ್ಯಕ್ರಮದಲ್ಲಿ ಭರತನಾಟ್ಯ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ರಾಧಿಕ ಪ್ರಾಣಿಗಳ ಕಲ್ಯಾಣಕ್ಕೂ ಹೆಚ್ಚಿನ ಒತ್ತು ನೀಡಿದ್ದಾರೆ. ಟ್ರಕ್ಕಿಂಗ್, ಸ್ವಿಮ್ಮಿಂಗ್, ಓದುವ ಹವ್ಯಾಸವನ್ನು ಹೊಂದಿದ್ದಾರೆ.


Click it and Unblock the Notifications