ಪ್ರಮುಖ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್‌ಬಿಐ) ಅದಾನಿ ಗ್ರೂಪ್ ಬರೋಬ್ಬರಿ 14,000 ಕೋಟಿ ರೂಪಾಯಿ ಸಾಲವನ್ನು ಕೇಳಿದೆ. ಅದಾನಿ ಗ್ರೂಪ್ ಭಾರೀ ಪ್ರಮಾಣದ ಸಾಲವನ್ನು ಬ್ಯಾಂಕ್‌ನಿಂದ ಕೇಳಲು ಪ್ರಮುಖ ಕಾರಣವೇನು ಎಂದು ನಾವಿಲ್ಲಿ ವಿವರಿಸಿದ್ದೇವೆ.
ಅದಾನಿ ಗ್ರೂಪ್ ಪ್ರಮುಖವಾಗಿ ಗುಜರಾತ್‌ನ ಮುಂದ್ರಾದಲ್ಲಿ ಹೊಸ ಘಟಕವನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಸುಮಾರು 14,000 ಕೋಟಿ ರೂಪಾಯಿ ಸಾಲಕ್ಕಾಗಿ ಎಸ್‌ಬಿಐ ಅನ್ನು ಸಂಪರ್ಕ ಮಾಡಿದೆ. ಕಲ್ಲಿದ್ದಲಿನಿಂದ ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಅನ್ನು ಉತ್ಪಾದನೆ ಮಾಡುವ ಉದ್ದೇಶವನ್ನು ಅದಾನಿ ಗ್ರೂಪ್ ಹೊಂದಿದೆ.
ಈ ಯೋಜನೆಯ ಒಟ್ಟು ಬಜೆಟ್ ಸುಮಾರು 19,000 ಕೋಟಿ ರೂಪಾಯಿ ಆಗಿದೆ. ಈ ಪೈಕಿ 14,000 ಕೋಟಿ ರೂಪಾಯಿಯನ್ನು ಅದಾನಿ ಗ್ರೂಪ್ ಎಸ್‌ಬಿಐನಿಂದ ಸಾಲ ಪಡೆಯಲು ಮುಂದಾಗಿದೆ. ಇದಕ್ಕಾಗಿ ಎಸ್‌ಬಿಐ ಅನ್ನು ಸಂಪರ್ಕ ಕೂಡಾ ಮಾಡಿದೆ.

ಇತ್ತೀಚೆಗೆ 6,071 ಕೋಟಿ ರೂಪಾಯಿ ಸಾಲ ಪಡೆದ ಸಂಸ್ಥೆ
ಜೂನ್ 26 ರಂದು ಗುಜರಾತ್‌ನ ಮುಂದ್ರಾದಲ್ಲಿ ಅದಾನಿ ಗ್ರೂಪ್ ಹೊಸ ತಾಮ್ರದ ಸಂಸ್ಕರಣಾ ಘಟಕ ಆರಂಭ ಮಾಡಲು ಸಾಲವನ್ನು ಪಡೆದಿದೆ. 6,071 ಕೋಟಿ ರೂಪಾಯಿ ಸಾಲವನ್ನು ಪಡೆದುಕೊಂಡಿದೆ. ಇದಾದ ಕೆಲವೇ ದಿನಗಳಲ್ಲಿ ಈಗ ಅದಾನಿ ಗ್ರೂಪ್ ಪಿವಿಸಿ ಸ್ಥಾವರಕ್ಕಾಗಿ 14,000 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಿದೆ. 6,071 ಕೋಟಿ ರೂಪಾಯಿ ಸಾಲವನ್ನು ಈ ಅದಾನಿ ಗ್ರೂಪ್‌ನ ಅಂಗಸಂಸ್ಥೆಗಳಲ್ಲಿ ಒಂದಾಗಿ ಕಚ್ ಕಾಪರ್ ಲಿಮಿಟೆಡ್ ಪಡೆದುಕೊಂಡಿದೆ.
ಇನ್ನು ಮಾರ್ಚ್‌ನಲ್ಲಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ 12,770 ಕೋಟಿ ಸಾಲವನ್ನು ಪಡೆದುಕೊಂಡಿದೆ. ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಯೋಜನೆಗಾಗಿ ಎಸ್‌ಬಿಐನಿಂದ ಅದಾನಿ ಗ್ರೂಪ್ ಈ ಸಾಲವನ್ನು ಪಡೆದುಕೊಂಡಿದೆ. ಈ ಸಾಲವನ್ನು ಅದಾನಿ ಗ್ರೂಪ್‌ನ ಇನ್ನೊಂದು ಅಂಗಸಂಸ್ಥೆಯಾದ ನವಿ ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಪ್ರೈವೆಟ್ ಲಿಮಿಟೆಡ್ (ಎನ್‌ಎಂಐಎಎಲ್) ತೆಗೆದುಕೊಂಡಿದೆ.
ಈ ಸಾಲವನ್ನು ಎಸ್‌ಬಿಐ ಅಂಡರ್‌ರೈಟ್ ಮಾಡಿ ಇತರೆ ಸಾಲಗಾರರಿಗೆ ಮಾರಾಟ ಮಾಡಿದೆ. ಬ್ಯಾಂಕ್ ಪಿವಿಸಿ ಯೋಜನೆಯಲ್ಲಿಯೂ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಯೋಜನೆಯಂತೆ ಸಾಲವನ್ನು ಅಂಡರ್‌ರೈಟ್ ಮಾಡುವ ಸಾಧ್ಯತೆ ಇದೆ. ಒಟ್ಟು ಮೊತ್ತದಲ್ಲಿ ಕೇವಲ 5,000 ಕೋಟಿಯನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆ ಇದೆ.


Click it and Unblock the Notifications