Digital Gold: ಹಬ್ಬದ ಸೀಸನ್‌ಗಳಲ್ಲಿ ಡಿಜಿಟಲ್‌ ಗೋಲ್ಡ್ ಹೂಡಿಕೆ ಏಕೆ ಹೆಚ್ಚಳ?

ಚಿನ್ನಕ್ಕೆ ವಿಶೇಷವಾದ ಸ್ಥಾನವನ್ನು ಭಾರತದಲ್ಲಿ ನೀಡಲಾಗುತ್ತದೆ. ಅದರಲ್ಲೂ ಹಬ್ಬ ಹರಿದಿನ ಬಂದಾಗ ಚಿನ್ನವನ್ನು ಖರೀದಿ ಮಾಡುವುದು ಪವಿತ್ರ ಎಂಬ ನಂಬಿಕೆ ಭಾರತದಲ್ಲಿದೆ. ಶುಭ ಸಮಾರಂಭಗಳಲ್ಲಿ ಚಿನ್ನವನ್ನು ಖರೀದಿಸುವುದು ಭಾರತೀಯ ಸಂಪ್ರದಾಯದ ಒಂದು ಭಾಗವಾಗಿದೆ.

ಇತ್ತೀಚೆಗೆ ಹಬ್ಬದ ಸಮಯದಲ್ಲಿ ಡಿಜಿಟಲ್‌ ಗೋಲ್ಡ್‌ನ ಹೂಡಿಕೆಗಳಿಗೆ ಬಹು ಬೇಡಿಕೆ ಇದ್ದು, ಪ್ರಮುಖವಾಗಿ ಆಚರಣೆ ಹಾಗೂ ಸಂಪ್ರದಾಯಗಳೇ ಇದಕ್ಕೆ ಕಾರಣವಾಗಿದೆ. ಹಾಗೆಯೇ ಚಿನ್ನದಂತಹ ಅಮೂಲ್ಯವಾದ ಲೋಹದ ಖರೀದಿ ಅಥವಾ ಹೂಡಿಕೆ ಮೂಲಕ ವಿಶೇಷ ದಿನವನ್ನು ಆಚರಿಸಲಾಗುತ್ತದೆ.

 ಹಬ್ಬದ ಸೀಸನ್‌ಗಳಲ್ಲಿ ಡಿಜಿಟಲ್‌ ಗೋಲ್ಡ್ ಹೂಡಿಕೆ ಏಕೆ ಹೆಚ್ಚಳ?

ಡಿಜಿಟಲ್‌ ಚಿನ್ನ ಅಂದರೆ ಏನು?

ಡಿಜಿಟಲ್‌ ಚಿನ್ನ ಅಂದರೆ ಆನ್‌ಲೈನ್‌ ಮೂಲಕ ಚಿನ್ನವನ್ನು ಖರೀದಿಸುವ ವಿನೂತನ ಮಾರ್ಗವಾಗಿದೆ. ಹಳದಿ ಲೋಹವನ್ನು ಅದರ ಭೌತಿಕ ರೂಪದಲ್ಲಿ ಖರೀದಿಸಲು ಇದು ಪರ್ಯಾಯ ವ್ಯವಸ್ಥೆಯಾಗಿದೆ. ಬಳಕೆದಾರರು ಡಿಜಿಟಲ್‌ ಚಿನ್ನವನ್ನು ಖರೀದಿಸಬಹುದು, ಅಲ್ಲಿ ಅದಕ್ಕೆ ಸಮಾನವಾದ ಮೊತ್ತವನ್ನು ವಿಮೆ ಮಾಡಿದ ಲಾಕರ್‌ನಲ್ಲಿ ಭೌತಿಕ ಚಿನ್ನವಾಗಿ ಇರಿಸಲಾಗುತ್ತದೆ. ಒಬ್ಬರು ಖರೀಸಬಹುದಾದ ಅತ್ಯಂತ ಕಡಿಮೆ ಮೊತ್ತ ಅಂದರೆ ಅದು ಒಂದು ರೂಪಾಯಿ ಕೂಡ ಆಗಬಹುದು.

ಹಬ್ಬದ ಸೀಸನ್‌ಗಳಲ್ಲಿ ಡಿಜಿಟಲ್‌ ಚಿನ್ನ ಹೂಡಿಕೆ ಹೆಚ್ಚಾಗುವ ಕುರಿತಂತೆ CASHe ಸಿಒಒ ಹಾಗೂ ಸಿಟಿಒ ಆಗಿರುವ ಯಶೋರಾಜ್‌ ತ್ಯಾಗಿ ಹೇಳುವ ಪ್ರಕಾರ, ಇದು ಅತ್ಯಂತ ಸರಳ ಹಾಗೂ ಬಳಕೆದಾರ ಸ್ನೇಹಿ ವ್ಯವಸ್ಥೆಯಾಗಿದ್ದು, ಜನರಿಗೆ ಭೌತಿಕ ನಿರ್ವಹಣೆಯ ತೊಂದರೆಗಳಿಲ್ಲದೆ ಚಿನ್ನ ಖರೀದಿ, ವಿನಿಮಯ ಮಾಡಿಕೊಳ್ಳುವುದಕ್ಕೆ ಅನುಕೂಲ ಕಲ್ಪಿಸುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಹಬ್ಬಗಳ ಸಂದರ್ಭದಲ್ಲಿ ಹೆಚ್ಚು ಖರ್ಚು-ವೆಚ್ಚದ ನಡುವೆ ಚಿನ್ನ ಖರೀದಿಯಂಥ ಹೂಡಿಕೆಗೆ ಆದ್ಯತೆ ನೀಡುವ ಮೂಲಕ ಆರ್ಥಿಕ ಸ್ಥಿರತೆಯನ್ನು ಕಂಡುಕೊಳ್ಳಬಹುದು.

ಡಿಜಿಟಲ್‌ ಚಿನ್ನ ಹೂಡಿಕೆ ಅನುಕೂಲತೆಗಳು

ಡಿಜಿಟಲ್‌ ಚಿನ್ನ ಹೂಡಿಕೆಯು ಹಲವಾರು ಅನುಕೂಲಗಳನ್ನು ಹೊಂದಿದ್ದು, ಅವುಗಳೆಂದರೆ 24 ಕ್ಯಾರೆಟ್ ಪರಿಶುದ್ಧತೆ ಗ್ಯಾರಂಟಿ, ಕನಿಷ್ಠ ಶುಲ್ಕ, ಡಿಜಿಟಲ್‌ ಪೇಮೆಂಟ್‌ ಆಪ್‌ ಮೂಲಕ ಸುಲಭ ಖರೀದಿ ಹಾಗೂ ಅತ್ಯಂತ ಸುಭದ್ರವಾಗಿ ಬ್ಯಾಂಕ್‌ ಕೊಠಡಿಯಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ. ಇದಲ್ಲದೆ, ಡಿಜಿಟಲ್ ಚಿನ್ನವು ಭಾಗಶಃ ಮಾಲೀಕತ್ವವನ್ನು ಅನುಮತಿಸುತ್ತದೆ.

ಅಂದರೆ ನೀವು ಸಣ್ಣ ಪ್ರಮಾಣದ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಹೆಚ್ಚಿನ ಲಿಕ್ವಿಡಿಟಿ ನೀಡುವುದಲ್ಲದೆ ಕೈಗೆಟಕುವ ಮತ್ತು ಅನುಕೂಲಕರ ರೀತಿಯಲ್ಲಿರುತ್ತದೆ ಎನ್ನುತ್ತಾರೆ ಯಶೋರಾಜ್‌ ತ್ಯಾಗಿ. ಭೌತಿಕ ಚಿನ್ನದಂತೆ ಯಾವುದೇ ಮೇಕಿಂಗ್‌ ಚಾರ್ಜ್‌ ಇದರಲ್ಲಿ ಇರುವುದಿಲ್ಲ. ಒಟ್ಟಾರೆ ಇದು ವೆಚ್ಚ ಮಾಡುವ ಹಣಕ್ಕೆ ಚಿನ್ನ ಖರೀದಿಸುವುದಕ್ಕೆ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.

ಡಿಜಿಟಲ್‌ ಚಿನ್ನ ಹೂಡಿಕೆಗಳು: ಹೂಡಿಕೆದಾರರಿಗೆ ಉತ್ತಮ ಉಡುಗೊರೆ ಆಯ್ಕೆಗಳು

ಚಿನ್ನದ ಇಟಿಎಫ್‌ಗಳು, ಗೋಲ್ಡ್‌ ಮ್ಯೂಚುವಲ್‌ ಫಂಡ್‌ಗಳು, ಗೋಲ್ಡ್‌ ಫ್ಯೂಚರ್ಸ್‌ ಕಾಂಟ್ರಾಕ್ಟ್‌ಗಳು ಮತ್ತು ಸವರನ್‌ ಗೋಲ್ಡ್‌ ಬಾಂಡ್‌ಗಳು (ಎಸ್‌ಜಿಬಿ) ಸೇರಿದಂತೆ ಡಿಜಿಟಲ್‌ ಚಿನ್ನದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಹಲವಾರು ಆಯ್ಕೆಗಳನ್ನು ಹೊಂದಿದ್ದಾರೆ. ಯಶೋರಾಜ್‌ ತ್ಯಾಗಿ ಪ್ರಕಾರ, ಡಿಜಿಟಲ್‌ ಚಿನ್ನದ ಹೂಡಿಕೆಯಲ್ಲಿ ಉಡುಗೊರೆ ನೀಡುವಾಗ, ಪರಿಗಣಿಸುವುದಕ್ಕೆ ಕೆಲವೊಂದು ಆಯ್ಕೆಗಳಿವೆ.

ಮೊದಲನೆಯದಾಗಿ, ನಿಗದಿತ ಪ್ಲಾಟ್‌ಫಾರ್ಮ್‌ಗಳ ಮೂಲಕ ಸ್ವೀಕರಿಸುವವರು ಡಿಜಿಟಲ್ ಚಿನ್ನಕ್ಕಾಗಿ ರಿಡೀಮ್ ಮಾಡಬಹುದಾದ ಭೌತಿಕ ಚಿನ್ನದ ವೋಚರ್‌ಗಳನ್ನು ಉಡುಗೊರೆಯಾಗಿ ನೀಡುವುದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ಎರಡನೆಯದಾಗಿ, ನೀವು ಡಿಜಿಟಲ್ ಚಿನ್ನದ ವ್ಯಾಲೆಟ್‌ಗಳನ್ನು ಆರಿಸಿಕೊಳ್ಳಬಹುದು. ಇದು ಸ್ವೀಕರಿಸುವವರಿಗೆ ತಮ್ಮ ಡಿಜಿಟಲ್ ಗೋಲ್ಡ್‌ನ ಹೋಲ್ಡಿಗ್ಸ್‌ಗಳನ್ನು ನೇರವಾಗಿ ಹೊಂದಲು ಮತ್ತು ನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ. ಕೊನೆಯದಾಗಿ, ಸ್ವೀಕರಿಸುವವರ ಪರವಾಗಿ ನೀವು ಡಿಜಿಟಲ್ ಗೋಲ್ಡ್‌ನ ನೇರ ಖರೀದಿಯನ್ನು ಮಾಡಬಹುದು ಎನ್ನುವುದು ತ್ಯಾಗಿ ಅವರ ಸಲಹೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+