ಶ್ರೀಮಂತರು ಹೃದಯಹೀನರೆ? ಬಹುತೇಕ ಶ್ರೀಮಂತರು ಏಕೆ ದ್ವೀಪಗಳಂತೆ ಬದುಕುತ್ತಿರುತ್ತಾರೆ? ಇಂಥ ಹಲವು ಪ್ರಶ್ನೆಗಳಿಗೆ ಕ್ರಿಸ್ ರಯಾನ್ ಉತ್ತರ ನೀಡಿದ್ದಾರೆ. ಅವರು ಒಂದು ಪುಸ್ತಕ ಬರೆದಿದ್ದಾರೆ. ಅದರ ಹೆಸರು 'Civilized to Death: the price of progress'. ಬಹಳ ಆಸಕ್ತಿಕರವಾದ ವಿಷಯಗಳನ್ನು ಅವರು ತಿಳಿಸಿದ್ದು, ಶ್ರೀಮಂತಿಕೆಯ ಸೈಡ್ ಎಫೆಕ್ಟ್ ಗಳನ್ನು ವಿವರಿಸಿದ್ದಾರೆ.
* ಶ್ರೀಮಂತಿಕೆ ಬಂದಾಕ್ಷಣ ದೊಡ್ಡ ಮನೆ, ದೊಡ್ಡ ಜಾಗ, ದೊಡ್ಡ- ದೊಡ್ಡ ಕಾಂಪೌಂಡ್ ಗಳನ್ನು ನಿರ್ಮಿಸಿಕೊಳ್ಳುವುದನ್ನು ನೋಡುತ್ತೇವೆ. ಅಷ್ಟೇ ಏಕೆ, ದೊಡ್ಡ ಕಾರು ಮತ್ತು ಅದಕ್ಕೆ ಕಪ್ಪು ಗಾಜು ಇರುತ್ತದೆ. ಏಕೆಂದರೆ ಇತರರಿಂದ ನಾವು ಬೇರೆ ಎಂಬ ಭಾವವು ಅವರನ್ನು ಸದಾ ಬೆನ್ನಟ್ಟುತ್ತದೆ. ಆ ಕಾರಣಕ್ಕೆ ಜನರಿಗಿಂತ ಹೆಚ್ಚಾಗಿ ವಸ್ತುಗಳ ಜತೆ ಸಮಯ ಕಳೆಯುವಂತಾಗುತ್ತದೆ.

* ಎದುರಿಗೆ ಇರುವ ವ್ಯಕ್ತಿಗಳ ಭಾವನಾತ್ಮಕ ಸಂಗತಿಗಳು ಮುಖ್ಯ ಎನಿಸುವುದಿಲ್ಲ.
* ಇನ್ನು ಶ್ರೀಮಂತರು ಉಳಿದುಕೊಳ್ಳುವುದು ಬಹುತೇಕ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ. ಅಂಥ ವಾತಾವರಣದಲ್ಲಿ ಒಬ್ಬರು ಮತ್ತೊಬ್ಬರ ಜತೆಗೆ ಮಾತನಾಡುವುದನ್ನು ನೋಡುವುದಕ್ಕೆ ಸಿಗುತ್ತದೆಯೇ?
* ಸಾಮಾನ್ಯ ಜನರು ಬಳಸುವ ವಸ್ತುಗಳು ಹಾಗೂ ಶ್ರೀಮಂತರು ಬಳಸುವ ವಸ್ತುಗಳು ಎಂಬ ವ್ಯತ್ಯಾಸ ಕೂಡ ತುಂಬ ಸ್ಪಷ್ಟವಾಗಿ ಕಾಣುತ್ತದೆ.
* ವಯಸ್ಸಾದವರು ರಸ್ತೆ ದಾಟುತ್ತಿದ್ದರೆ ಸಾಮಾನ್ಯ ಕಾರಿನಲ್ಲಿ ಸಾಗುತ್ತಿರುವವರು ನಿಲ್ಲಿಸುತ್ತಾರೆ. ಆದರೆ ದುಬಾರಿ ಕಾರಿನಲ್ಲಿ ಹೋಗುತ್ತಿರುವವರಿಗೆ ಆ ಯೋಚನೆ ಬರುವುದಿಲ್ಲ ಎನ್ನುತ್ತಾರೆ ರಯಾನ್.
* ಒಂದು ಪೆಗ್ ವೈನ್ ಕುಡಿಯುವುದರಿಂದ ಹೆಚ್ಚು ಹಾನಿಯಾಗಲಿಕ್ಕಿಲ್ಲ. ಆದರೆ ಹನ್ನೆರಡು ಬಾಟಲಿ ವೈನ್ ಇದ್ದರೆ... ಅದೇ ರೀತಿ ನಿಯಮಿತ ಪ್ರಮಾಣದಲ್ಲಿ ಇದ್ದರೆ ಔಷಧ, ಇಲ್ಲದಿದ್ದರೆ ಅಪಾಯಕಾರಿ ರಾಸಾಯನಿಕ ಆಗುತ್ತದೆ. ಹಣವೂ ಅಷ್ಟೇ, ಅಳತೆಗೆ ಮೀರಿದರೆ ಆಪತ್ತು.
* ಹಾಗಂತ ಹಣ ದುಡಿಯುವುದು ತಪ್ಪಲ್ಲ. ಅದನ್ನು ಅಗತ್ಯ ಇರುವವರ ಜತೆಗೆ ಹಂಚಿಕೊಳ್ಳುವುದರಿಂದ ಸಂತೋಷವಾಗಿ ಇರಬಹುದು.
* ಹಣಕ್ಕೂ ಹಾಗೂ ಸಂತೋಷಕ್ಕೂ ಸಂಬಂಧ ಇದೆಯಾ? ಹಣವೇ ಎಲ್ಲ ಆಗಿದ್ದರೆ ಶ್ರೀಮಂತರೆಲ್ಲ ಸಂತೋಷವಾಗಿ ಇರಬೇಕಿತ್ತು. ಇನ್ನು ಅದರಿಂದಲೇ ಆರೋಗ್ಯ, ಆಯುಷ್ಯ್ ಹೆಚ್ಚಾಗಿದೆಯಾ ಎಂದು ಗಮನಿಸಿದರೆ ಅದೂ ಇಲ್ಲ.
* ಶ್ರೀಮಂತರೆಲ್ಲ ಒಂದೇ ಎಂದು ಗೆರೆ ಕೊಯ್ದಂತೆ ಹೇಳಲು ಆಗುವುದಿಲ್ಲ. ಯಾರಿಗೆ ಸಂಪತ್ತನ್ನು ನಿರ್ವಹಿಸುವುದು ಹೇಗೆ ಎಂಬುದು ಗೊತ್ತಿರುತ್ತದೋ ಅಂಥವರಿಗೆ ಸಮಸ್ಯೆ ಆಗುವುದಿಲ್ಲ.
* ಆದರೆ, ಗುಂಪಿನಲ್ಲಿ ಒಬ್ಬರಾಗಿ ಇರುವುದು ಶ್ರೀಮಂತ ವರ್ಗಕ್ಕೆ ಸಾಧ್ಯವಾಗುವುದಿಲ್ಲ. ಗಮನಿಸಿ ನೋಡಿ, ಗುಂಪಿನಿಂದ ಹೊರಬಂದ ಪ್ರಾಣಿ- ಪಕ್ಷಿ ಬೇಟೆಗಾರನ ಪಾಲಿಗೆ ಸುಲಭ ಬೇಟೆ. ಅದರರ್ಥ ಸಾವು. ಭಾವನಾತ್ಮಕವಾಗಿ ಗುಂಪಿನಿಂದ ಹೊರಬಂದ ವ್ಯಕ್ತಿಗೆ ಅದು ಸಾವಿಗೆ ಸಮಾನವಾದದ್ದು. ಶ್ರೀಮಂತಿಕೆ ಎಂಬುದು ಗುಂಪಿನಿಂದ ಬೇರ್ಪಡಿಸುತ್ತದೆ.
* ತುಂಬ ದುಡ್ಡು ಬಂದರೆ ಅದರಿಂದ ವಿಪರೀತ ಖಾಸಗಿತನ ಖರೀದಿ ಮಾಡುತ್ತೀವಿ. ಯಾರಿಗೂ ತಲುಪಲಾರದಂತೆ, ಸಿಗಲಾರದಂತೆ ಆಗುತ್ತೇವೆ.
* ಬಹಳ ವರ್ಷ ಬದುಕಿರಬೇಕು ಅಂದರೆ ಸಂತೋಷವಾಗಿರಬೇಕು. ಸುತ್ತಲೂ ನಮ್ಮವರು ಅಂತಿರಬೇಕು. ಅದು ಕೇವಲ ಹಣದಿಂದಷ್ಟೇ ಸಾಧ್ಯವಿಲ್ಲ. ಸಂಬಂಧ, ಜನಸಂಪರ್ಕವೂ ಮುಖ್ಯ. ಆದರೆ ಅದು ಮುಖ್ಯ ಎಂಬ ಭಾವನೆ ಮೂಡುವುದಿಲ್ಲ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications