ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರಿಟೇಲ್ ಡಿಜಿಟಲ್ ರೂಪಾಯಿಯನ್ನು ಡಿಸೆಂಬರ್ 1ರಿಂದ ಪ್ರಾಯೋಗಿಕವಾಗಿ ಆರಂಭ ಮಾಡುತ್ತದೆ. ಇದು ನಮ್ಮ ಮೊಬೈಲ್‌ನಲ್ಲೇ ಇರುವ ವ್ಯಾಲೆಟ್ ಆಗಿದ್ದು, ಇದನ್ನು ನಾವು ಕ್ಯೂಆರ್ ಕೋಡ್ ಮೂಲಕ ಬಳಕೆ ಮಾಡಬಹುದು. ಆದರೆ ನಾವು ಬ್ಯಾಂಕ್‌ನಲ್ಲಿಡುವ ಮೊತ್ತಕ್ಕೆ ಬಡ್ಡಿದರ ಲಭ್ಯವಾಗುವಂತೆ ಇ-ರುಪೀಗೂ ಬಡ್ಡಿದರ ಲಭ್ಯವಾಗುತ್ತದೆಯೇ? ಈ ಬಗ್ಗೆ ಇಲ್ಲಿದೆ ಮಾಹಿತಿ
ಪ್ರಮುಖವಾಗಿ ಎಂಟು ಬ್ಯಾಂಕ್‌ಗಳಲ್ಲಿ ಇ-ರುಪೀ ಪ್ರಾಯೋಗಿಕವಾಗಿ ಆರಂಭ ಮಾಡಲಾಗುತ್ತದೆ. ಹಂತ ಹಂತವಾಗಿ ಇದರ ಪ್ರಯೋಗವನ್ನು ವಿಸ್ತರಣೆ ಮಾಡಲಾಗುತ್ತದೆ. ಈ ಡಿಜಿಟಲ್ ಕರೆನ್ಸಿಯ ವಹಿವಾಟನ್ನು ನಡೆಸಲು ಸಾಧ್ಯವಾಗುವ ಡಿಜಿಟಲ್ ವ್ಯಾಲೆಟ್ ಅನ್ನು ಬ್ಯಾಂಕ್‌ಗಳೇ ರಚಿಸುತ್ತದೆ.
ಮೊದಲು ಪ್ರಮುಖವಾಗಿ ನಾಲ್ಕು ನಗರಗಳಲ್ಲಿ ಈ ರಿಟೇಲ್ ಡಿಜಿಟಲ್ ರೂಪಾಯಿ ಪ್ರಾಯೋಗಿಕವಾಗಿ ಆರಂಭ ಮಾಡಲಾಗುತ್ತದೆ. ನವದೆಹಲಿ, ಬೆಂಗಳೂರು, ಮುಂಬೈ, ಭುವನೇಶ್ವರದಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಮೊದಲು ಆರಂಭ ಮಾಡಲಾಗುತ್ತದೆ. ಬಳಿಕ ಅಹಮದಾಬಾದ್, ಗಾಂಗ್ಟಾಕ್, ಗುವಾಹಟಿ, ಹೈದಾರಾಬಾದ್, ಇಂದೋರ್, ಕೊಚ್ಚಿ, ಲಕ್ನೋ, ಪಾಟ್ನಾ, ಶಿಮ್ಲಾದಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಆರಂಭ ಮಾಡಲಾಗುತ್ತದೆ. ಬಳಿಕ ಇನ್ನಷ್ಟು ಪ್ರದೇಶ, ಬ್ಯಾಂಕ್‌ಗಳಿಗೆ ವಿಸ್ತರಣೆ ಮಾಡಲಾಗುತ್ತದೆ. ನಾವು ಇ-ರುಪೀಯಲ್ಲಿ ಬಡ್ಡಿದರವನ್ನು ಪಡೆಯಬಹುದೇ, ಇ-ರುಪೀ ಬಳಕೆಗೆ ಇಂಟರ್‌ನೆಟ್ ಬೇಕೇ?, ಇಂಟರ್‌ನೆಟ್ ಇಲ್ಲದೆಯೇ ಇ-ರುಪೀ ಬಳಸಬಹುದೇ, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಕರೆನ್ಸಿ ನೋಟಿನ ಡಿಜಿಟಲ್ ಆವೃತ್ತಿ
ಡಿಜಿಟಲ್ ರಿಟೇಲ್ ರೂಪಾಯಿ ಡಿಜಿಟಲ್ ಟೋಕನ್ ರೂಪದಲ್ಲಿ ಲಭ್ಯವಾಗುತ್ತದೆ. ಇದು ಕರೆನ್ಸಿ ನೋಟಿನ ಡಿಜಿಟಲ್ ಆವೃತ್ತಿಯಾಗಿದೆ. ಕೇಂದ್ರ ಬ್ಯಾಂಕ್ ಈ ಡಿಜಿಟಲ್ ರೂಪಾಯಿಯನ್ನು ಅಥವಾ ಡಿಜಿಟಲ್ ಕರೆನ್ಸಿಯನ್ನು ಒದಗಿಸುತ್ತದೆ. ಇದು ರೂಪಾಯಿ, ನೋಟಿನ ಬದಲಾಗಿ ಬಳಕೆ ಮಾಡಲಾಗುವ, ಕರೆನ್ಸಿಯ ಡಿಜಿಟಲ್ ಆವೃತ್ತಿ.
ಡಿಜಿಟಲ್ ಕರೆನ್ಸಿ ಎಲ್ಲಿ, ಹೇಗೆ ಬಳಕೆ?
ನೀವು ಯುಪಿಐ ಅನ್ನು ಬಳಕೆ ಮಾಡಬೇಕಾದರೆ ಯುಪಿಐ ಐಡಿ ಹಾಗೂ ಕ್ಯೂಆರ್ ಅನ್ನು ಹೊಂದಿರಬೇಕಾಗುತ್ತದೆ. ನಗದಿನಂತೆ ನೀವು ಕೂಡಾ ಡಿಜಿಟಲ್ ಕರೆನ್ಸಿಯ ಭಾಗವಾಗಿರಬೇಕು. ಅಂದರೆ ಡಿಜಿಟಲ್ ರೂಪಾಯಿ ವ್ಯಾಲೆಟ್ ಹೊಂದಿರಬೇಕು. ಈ ವ್ಯಾಲೆಟ್ ಮೂಲಕವೇ ಡಿಜಿಟಲ್ ಕರೆನ್ಸಿ ವಹಿವಾಟು ನಡೆಸಲಾಗುತ್ತದೆ. ನೀವು ಇ-ರುಪೀ ವಹಿವಾಟು ನಡೆಸಲು ಡಿಜಿಟಲ್ ರೂಪಾಯಿ ಕ್ಯೂಆರ್ ಕೋಡ್ ಅನ್ನು ಹೊಂದಿರಬೇಕು.
ಇ-ರುಪೀಯ ಪ್ರಯೋಜನವೇನು?
* ಡಿಜಿಟಲ್ ಇಕಾನಮಿಗೆ ಡಿಜಿಟಲ್ ಕರೆನ್ಸಿ ಅಥವಾ ಇ-ರುಪೀ ಸಹಾಯಕ
* ಮೊಬೈಲ್ ವ್ಯಾಲೆಟ್ ಮೂಲಕವೇ ನೀವು ವಹಿವಾಟು ನಡೆಸಬಹುದು
* ಡಿಜಿಟಲ್ ರೂಪಾಯಿಯನ್ನು ನಾವು ಶೀಘ್ರವಾಗಿ ಬ್ಯಾಂಕ್‌ನ ಹಣ ಅಥವಾ ನಗದಾಗಿ ಪರಿವರ್ತನೆ ಮಾಡಬಹುದು.
* ಹಣವನ್ನು ವರ್ಗಾವಣೆ ಮಾಡುವಾಗ ತಗುಲುವ ವೆಚ್ಚ ಕಡಿಮೆಯಾಗುತ್ತದೆ.
ಇಂಟರ್‌ನೆಟ್ ಬೇಕೇ?
ನೀವು ಸಾಮಾನ್ಯವಾಗಿ ಯುಪಿಐ ವಹಿವಾಟು ನಡೆಸಲು ಇಂಟರ್‌ನೆಟ್ ಹೊಂದಿರುವುದು ಅಗತ್ಯವಾಗಿದೆ. ಆದರೆ ಇತ್ತೀಚೆಗೆ ಇಂಟರ್‌ನೆಟ್ ಇಲ್ಲದೆಯೇ ಫೀಚರ್ ಫೋನ್ ಮೂಲಕ ಯುಪಿಐ ವಹಿವಾಟನ್ನು ನಡೆಸಬಹುದು. ಹಾಗೆಯೇ ಇ-ರುಪೀ ವಹಿವಾಟು ನಡೆಸಲು ನಿಮಗೆ ಯಾವುದೇ ಇಂಟರ್‌ನೆಟ್ ಅಗತ್ಯವಿಲ್ಲ. ನೀವು ಇಂಟರ್‌ನೆಟ್ ಇಲ್ಲದೆಯೇ ಇ-ರುಪೀ ಅಥವಾ ಡಿಜಿಟಲ್ ಕರೆನ್ಸಿ ವಹಿವಾಟು ನಡೆಸಬಹುದು.
ಡಿಜಿಟಲ್ ರೂಪಾಯಿಗೆ ಬಡ್ಡಿದರವಿದೆಯೇ?
ಸಾಮಾನ್ಯವಾಗಿ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಮೊತ್ತಕ್ಕೆ ಬಡ್ಡಿದರ ಲಭ್ಯವಾಗುತ್ತದೆ. ಡಿಜಿಟಲ್ ರುಪೀಗೂ ಬಡ್ಡಿದರ ಲಭ್ಯವಾಗುತ್ತದೆಯೇ? ಇಲ್ಲ ಡಿಜಿಟಲ್ ರುಪೀಗೆ ಯಾವುದೇ ಬಡ್ಡಿದರ ಲಭ್ಯವಾಗುವುದಿಲ್ಲ. ಇದು ನಾವು ನಗದನ್ನು ನಮ್ಮ ಪಾಕೆಟ್‌ನಲ್ಲಿ ಯಾವುದೇ ಬಡ್ಡಿದರ ಪಡೆಯದೆಯೇ ಇಟ್ಟುಕೊಳ್ಳುವಂತೆ. ನಿಮ್ಮ ಹಣವನ್ನು ನೀವು ಸುರಕ್ಷಿತವಾಗಿರಿಸುವ ಪರ್ಸ್ ಇ ವ್ಯಾಲೆಟ್ ಎಂದರೆ ತಪ್ಪಾಗಲಾರದು.
More From GoodReturns

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Bank Holidays: ಮಾರ್ಚ್ನಲ್ಲಿ ಬ್ಯಾಂಕ್‌ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications