ಈ ಹಿಂದೆ ಪ್ರಕಟವಾದ ವರದಿ ಪ್ರಕಾರ ಭಾರತದಲ್ಲಿ ಹೊಸದಾಗಿ ಬಿಲಿಯನೇರ್‌ಗಳು ಸೇರ್ಪಡೆಯಾಗಿದ್ದಾರೆ. ಒಟ್ಟಾಗಿ ಭಾರತದಲ್ಲಿ 187 ಬಿಲಿಯನೇರ್‌ಗಳು ಇದ್ದಾರೆ. ಆದರೆ ವಿಶ್ವದಲ್ಲಿ ಎಷ್ಟು ಬಿಲಿಯನೇರ್‌ಗಳು ಇದ್ದಾರೆ ನಿಮಗೆ ತಿಳಿದಿದೆಯೇ?. ಪೋರ್ಬ್ಸ್ ತನ್ನ ಒಟ್ಟು ಬಿಲಿಯನೇರ್‌ಗಳ ಪಟ್ಟಿಯನ್ನು ಏಪ್ರಿಲ್ 4ರಂದು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ ವಿಶ್ವದಲ್ಲಿ 2023ರಲ್ಲಿ ಒಟ್ಟಾಗಿ 2,640 ಬಿಲಿಯನೇರ್‌ಗಳು ಇದ್ದಾರೆ. ಈ ಭೂಮಿಯಲ್ಲಿ 2022ರಲ್ಲಿ ಒಟ್ಟಾಗಿ 2,668 ಬಿಲಿಯನೇರ್‌ಗಳು ಇದ್ದರೆ, ಆದರೆ ಈ ಸಂಖ್ಯೆಯು 2023ರ ವೇಳೆಗೆ ಸುಮಾರು 2,640ಕ್ಕೆ ಇಳಿಕೆಯಾಗಿದೆ.
ಈ ನಡುವೆ ಈ ಎಲ್ಲ ಬಿಲಯನೇರ್‌ಗಳು ಒಟ್ಟು ಆದಾಯ ಎಷ್ಟಿರಬಹುದು ಎಂಬ ಕುತೂಹಲ ನಿಮಗೆ ಉಂಟಾಗಬಹುದು. ಈ ಬಗ್ಗೆಯೂ ಮಾಹಿತಿ ಇಲ್ಲಿದೆ. ವಿಶ್ವದಲ್ಲಿರುವ ಒಟ್ಟು 2,640 ಬಿಲಿಯನೇರ್‌ಗಳ ನಿವ್ವಳ ಆದಾಯವು 2023ರಲ್ಲಿ ಸುಮಾರು 500 ಬಿಲಿಯನ್ ಡಾಲರ್ ಇಳಿಕೆ ಕಂಡಿದೆ. ಒಟ್ಟಾಗಿ ಆದಾಯವು ಸುಮಾರು 12.2 ಟ್ರಿಲಿಯನ್ ಡಾಲರ್ ಆಗಿದೆ. ಪೋರ್ಬ್ಸ್‌ನ ಬಿಲಿಯನೇರ್ ಪಟ್ಟಿಯನ್ನು ನಾವು ನೋಡಿದಾಗ 2022ರಲ್ಲಿ ಶ್ರೀಮಂತರಾಗಿದ್ದವರ ಪೈಕಿ ಒಟ್ಟು ಅರ್ಧದಷ್ಟು ಮಂದಿ ತಮ್ಮ ಭಾರೀ ಆದಾಯವನ್ನು ಕಳೆದುಕೊಂಡಿದ್ದಾರೆ. ಆ ಪೈಕಿ ನಮ್ಮ ದೇಶದ ಗೌತಮ್ ಅದಾನಿ ಕೂಡಾ ಒಬ್ಬರಾಗಿದ್ದಾರೆ.

ಇನ್ನು ಹಲವಾರು ಮಂದಿ ತಮ್ಮ ಬಿಲಿಯನೇರ್ ಪಟ್ಟವನ್ನೇ ಕಳೆದುಕೊಂಡಿದ್ದಾರೆ. ಒಟ್ಟಾಗಿ ವಿಶ್ವದಲ್ಲಿ ಸುಮಾರು 254 ಮಂದಿ ತಮ್ಮ ಬಿಲಿಯನೇರ್ ಪಟ್ಟವನ್ನು ಕಳೆದುಕೊಂಡಿದ್ದಾರೆ. ವಿಶ್ವದಲ್ಲಿ ಈ ವರ್ಷ ಖಾಸಗಿ ವಲಯವಾಗಲಿ, ಸಾರ್ವಜನಿಕ ವಲಯವಾಗಲಿ ಭಾರೀ ಏರಿಳಿತ ಕಂಡು ಬಂದಿದೆ. ಹಲವಾರು ಮಂದಿ ಶ್ರೀಮಂತರು ತಮ್ಮ ಆದಾಯದಲ್ಲಿ ನಷ್ಟ ಕಂಡಿದ್ದಾರೆ. ವಿಶ್ವದಲ್ಲೇ ಅತೀ ಶ್ರೀಮಂತ ವ್ಯಕ್ತಿ ಅನಿಸಿಕೊಂಡಿದ್ದ ಎಲಾನ್ ಮಸ್ಕ್ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಕಳೆದ ವರ್ಷವೇ ತನ್ನ ನಿವ್ವಳ ಆದಾಯದಲ್ಲಿ ನಷ್ಟ ಕಂಡ ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಸುಮಾರು 44 ಬಿಲಿಯನ್ ಡಾಲರ್‌ಗೆ ಖರೀದಿ ಮಾಡುವುದಾಗಿ ಘೋಷಣೆ ಮಾಡಿ, ಎಲ್ಲ ಡೀಲ್‌ಗಳು ಮುಗಿಯುವಷ್ಟರಲ್ಲಿ ಎಲಾನ್ ಮಸ್ಕ್‌ನ ಎಲೆಕ್ಟ್ರೀಕ್ ಕಾರು ತಯಾರಕ ಸಂಸ್ಥೆಯಾದ ಟೆಸ್ಲಾದ ಷೇರುಗಳು ಸುಮಾರು ಶೇಕಡ 50ರಷ್ಟು ಕುಸಿತವನ್ನು ಕಂಡಿದೆ. ವಿಶ್ವದ ಮೊಲದ ಶ್ರೀಮಂತ ವ್ಯಕ್ತಿ ಸ್ಥಾನಕ್ಕೆ ಏರಿದ ಬರ್ನಾರ್ಡ್ ಅರ್ನಾಲ್ಟ್ ಎಲ್‌ವಿಎಂಎಚ್ ಸಿಇಒ ಆಗಿದ್ದಾರೆ.
ಯಾವ ದೇಶದಲ್ಲಿ ಹೆಚ್ಚು ಬಿಲಿಯನೇರ್‌ಗಳು?
ಪೋರ್ಬ್ಸ್‌ನ ವರದಿ ಪ್ರಕಾರ ಯುಎಸ್‌ನಲ್ಲಿ ಈಗಲೂ ಅತೀ ಹೆಚ್ಚು ಬಿಲಿಯನೇರ್‌ಗಳು ಇದ್ದಾರೆ. 2023ರಲ್ಲಿನ 2,640 ಬಿಲಿಯನೇರ್‌ಗಳ ಪೈಕಿ 735 ಮಂದಿ ಯುಎಸ್‌ಗೆ ಸೇರಿದವರಾಗಿದ್ದಾರೆ. ಹಾಗೆಯೇ ವಿಶ್ವದ ಬಿಲಿಯನೇರ್‌ಗಳ ಒಟ್ಟು ನಿವ್ವಳ ಆದಾಯ 12.2 ಟ್ರಿಲಿಯನ್ ಡಾಲರ್ ಪೈಕಿ 4.5 ಟ್ರಿಲಿಯನ್ ಡಾಲರ್ ಈ ಯುಎಸ್‌ನ 735 ಮಂದಿ ಬಿಲಿಯನೇರ್‌ಗಳ ಆದಾಯವಾಗಿದೆ.
ಇನ್ನು ಯುಎಸ್‌ನ ನಂತರದ ಸ್ಥಾನದಲ್ಲಿ ಚೀನಾ (ಹಾಂಗ್‌ಕಾಂಗ್, ಮೌ ಸೇರಿದಂತೆ) ದೇಶವಿದೆ. ಚೀನಾದಲ್ಲಿ ಒಟ್ಟಾಗಿ 562 ಬಿಲಿಯನೇರ್‌ಗಳು ಇದ್ದು, ಅವರ ಒಟ್ಟು ನಿವ್ವಳ ಆದಾಯ 2 ಟ್ರಿಲಿಯನ್ ಡಾಲರ್ ಆಗಿದೆ. ಅದಾದ ಬಳಿಕ ಅತೀ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಪೋರ್ಬ್ಸ್ ಪಟ್ಟಿ ಪ್ರಕಾರ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಒಟ್ಟು 169 ಮಂದಿ ಭಾರತೀಯರಾಗಿದ್ದು, ಅವರ ನಿವ್ವಳ ಆದಾಯ 675 ಬಿಲಿಯನ್ ಡಾಲರ್ ಆಗಿದೆ. ಮಾರ್ಚ್ 10, 2023ರವರೆಗಿನ ಸ್ಟಾಕ್ ಮಾರುಕಟ್ಟೆ ಲೆಕ್ಕಾಚಾರದಲ್ಲಿ ಪೋರ್ಬ್ಸ್ ಈ ಬಿಲಿಯನೇರ್‌ಗಳ ಪಟ್ಟಿಯನ್ನು ಮಾಡಿದೆ.


Click it and Unblock the Notifications