ನಾವೆಲ್ಲರೂ ರುಚಿಕರವಾದ ಆಹಾರವನ್ನು ಸೇವಿಸಲು ಇಷ್ಟಪಡುತ್ತೇವೆ. ಈ ರುಚಿಕರ ಆಹಾರಗಳಲ್ಲಿ ಸ್ಯಾಂಡ್‌ವಿಚ್‌ಗಳು ಕೂಡಾ ಒಂದು ಎಂಬುವುದನ್ನು ನಾವು ಮರೆಯುವಂತಿಲ್ಲ. ಬಿಸಿ ಅಥವಾ ತಣ್ಣಗೆ ಮತ್ತು ಹಗಲು ಅಥವಾ ರಾತ್ರಿಯ ಯಾವುದೇ ಸಮಯದಲ್ಲಿ ಇದನ್ನು ಸೇವಿಸಬಹುದು.
ವಿಶ್ವ ಸ್ಯಾಂಡ್‌ವಿಚ್ ದಿನವನ್ನು ಪ್ರತಿ ವರ್ಷ ನವೆಂಬರ್ 3 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಜಾನ್ ಮೊಂಟಾಗು ಸ್ಯಾಂಡ್‌ವಿಚ್‌ನ ಸಂಶೋಧಕ ಎಂದು ಭಾವಿಸಲಾಗಿದೆ. ಸ್ಯಾಂಡ್‌ವಿಚ್‌ಗಳು ಎಲ್ಲರಿಗೂ ಕೈಗೆಟುಕುವ ಆಹಾರದಲ್ಲಿ ಒಂದಾಗಿದೆ. ಆದರೆ ದುಬಾರಿ ಸ್ಯಾಂಡ್‌ವಿಚ್‌ಗಳು ಕೂಡಾ ಇದೆ. ಹತ್ತು ದುಬಾರಿ ಸ್ಯಾಂಡ್‌ವಿಚ್‌ಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

ಕ್ವಿಂಟೆನ್ಶಿಯಲ್ ಗ್ರಿಲ್ಡ್ ಚೀಸ್ ಸ್ಯಾಂಡ್‌ವಿಚ್ - 214 ಡಾಲರ್
ಕ್ವಿಂಟೆನ್ಶಿಯಲ್ ಗ್ರಿಲ್ಡ್ ಚೀಸ್ ಸ್ಯಾಂಡ್‌ವಿಚ್‌ನಲ್ಲಿ ಡೊಮ್ ಪೆರಿಗ್ನಾನ್ ಶಾಂಪೇನ್, ವೈಟ್ ಟ್ರಫಲ್ ಬಟರ್ ಮತ್ತು ಕ್ಯಾಸಿಯೋಕಾವಲ್ಲೊ ಪೊಡೊಲಿಕೊ ಚೀಸ್‌ನಂತಹ ದುಬಾರಿ ಆಹಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಆದ್ದರಿಂದಾಗಿ ಈ ಸ್ಯಾಂಡ್‌ವಿಚ್ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಇದರದ್ದಾಗಿದ್ದು, 214 ಡಾಲರ್ ಅಥವಾ ಸರಿಸುಮಾರು 17,800 ರೂಪಾಯಿ ಆಗಿದೆ.
ಬೇಕನ್ ಬ್ಲಿಂಗ್ ಸ್ಯಾಂಡ್‌ವಿಚ್ - 225 ಡಾಲರ್
ಬೇಕನ್ ಬ್ಲಿಂಗ್ ಸ್ಯಾಂಡ್‌ವಿಚ್ ಅತ್ಯಂತ ದುಬಾರಿ ಬೇಕನ್ ಸ್ಯಾಂಡ್‌ವಿಚ್‌ಗಳಲ್ಲಿ ಒಂದಾಗಿದೆ. ಚೆಲ್ಟೆನ್‌ಹ್ಯಾಮ್‌ನಲ್ಲಿರುವ ಟ್ಯಾಂಗ್‌ಬೆರಿಸ್ ಕೆಫೆಯಲ್ಲಿ ಇದು ಲಭ್ಯವಿದೆ. ಇದರ ಬೆಲೆ 225 ಡಾಲರ್ ಅಥವಾ 18,700 ರೂಪಾಯಿ ಆಗಿದೆ. ಈ ಸ್ಯಾಂಡ್‌ವಿಚ್ ಅನ್ನು ಮೊಟ್ಟೆ, ಅಪರೂಪದ ಬೇಕನ್, ಕಪ್ಪು ಟ್ರಫಲ್ಸ್, ಟ್ರಫಲ್ ಎಣ್ಣೆ, ಕೇಸರಿ ಮೊದಲಾದವುಗಳನ್ನು ಬಳಸಿ ಮಾಡಲಾಗುತ್ತದೆ.
ಡೌಗಿ ಡಾಗ್ - 100 ಡಾಲರ್
ಡೌಗಿ ಡಾಗ್ ಒಂದು ರೀತಿಯ ಸ್ಯಾಂಡ್‌ವಿಚ್ ಆಗಿದ್ದು ಅದು ಬ್ರಾಟ್‌ವರ್ಸ್ಟ್, ಲೂಯಿಸ್ XIII ಕಾಗ್ನ್ಯಾಕ್, ಕೋಬ್ ಬೀಫ್, ಆಲಿವ್ ಎಣ್ಣೆ, ಟ್ರಫಲ್ ಎಣ್ಣೆ, ಪಿಕಾಂಟೆ ಸಾಸ್‌ನಂತಹ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದರ ಬೆಲೆ ಸುಮಾರು 100 ಡಾಲರ್ ಅಥವಾ 8,300 ರೂಪಾಯಿ ಆಗಿದೆ.
ಬರ್ಗರ್ ಕಿಂಗ್ಸ್ ಸ್ಯಾಂಡ್‌ವಿಚ್ - 142 ಡಾಲರ್
ಬರ್ಗರ್ ಕಿಂಗ್, ಅದರ ಬರ್ಗರ್‌ಗಳಿಗೆ ಹೆಸರುವಾಸಿಯಾದ ಜನಪ್ರಿಯ ತ್ವರಿತ ಸೇವಾ ರೆಸ್ಟೋರೆಂಟ್ ಆಗಿದ್ದು, ಅತ್ಯಂತ ದುಬಾರಿ ಸ್ಯಾಂಡ್‌ವಿಚ್‌ಗಳಲ್ಲಿ ಬರ್ಗರ್ ಕಿಂಗ್‌ನ ಸ್ಯಾಂಡ್‌ವಿಚ್ ಕೂಡಾ ಒಂದಾಗಿದೆ. ಇದರ ಬೆಲೆ 142 ಡಾಲರ್ ಅಥವಾ 11,800 ರೂಪಾಯಿ ಆಗಿದೆ. ಈ ಸ್ಯಾಂಡ್‌ವಿಚ್‌ಗೆ ಜಪಾನೀಸ್ ಬೀಫ್, ವೈಟ್ ಟ್ರಫಲ್ಸ್ ಮೊದಲಾದವುಗಳನ್ನು ಬಳಸಲಾಗುತ್ತದೆ.
ವಾನ್ ಎಸ್ಸೆನ್ ಪ್ಲಾಟಿನಂ ಕ್ಲಬ್ ಸ್ಯಾಂಡ್‌ವಿಚ್ - 150 ಡಾಲರ್
ವಾನ್ ಎಸ್ಸೆನ್ ಪ್ಲಾಟಿನಮ್ ಕ್ಲಬ್ ಸ್ಯಾಂಡ್‌ವಿಚ್ ಅತೀ ಅತ್ಯಂತ ಜನಪ್ರಿಯವಾದ ಆದರೆ ದುಬಾರಿ ಸ್ಯಾಂಡ್‌ವಿಚ್‌ಗಳಲ್ಲಿ ಒಂದಾಗಿದೆ. ಇದನ್ನು ಬೆಳಿಗ್ಗೆ ಸೇವಿಸಲಾಗುತ್ತದೆ. ಇದನ್ನು ಹ್ಯಾಮ್, ಪೌಲೆಟ್ ಡಿ ಬ್ರೆಸ್ಸೆ, ಕ್ವಿಲ್ ಮೊಟ್ಟೆ, ಇಟಾಲಿಯನ್ ಟೊಮೆಟೊಗಳಿಂದ ತಯಾರಿಸಲಾಗುತ್ತದೆ. ಇದರ ಬೆಲೆ ಸುಮಾರು 150 ಡಾಲರ್ ಅಥವಾ 12,500 ರೂಪಾಯಿ ಆಗಿದೆ.
ಹಾಟ್ ಡಾಗ್ ಸ್ಯಾಂಡ್‌ವಿಚ್ - 145 ಡಾಲರ್
ಹೆಸರೇ ಸೂಚಿಸುವಂತೆ, ಹಾಟ್ ಡಾಗ್ ಸ್ಯಾಂಡ್‌ವಿಚ್ ಅನ್ನು ಬೀಫ್ ಫ್ರಾಂಕ್, ಮೂಸ್ ಚೀಸ್, ವೈಟ್ ಟ್ರಫಲ್ ಬಟರ್, ಫ್ರೆಂಚ್ ಸಾಸಿವೆ ಮತ್ತು ಹ್ಯಾಂಪ್‌ಶೈರ್ ಬೇಕನ್ ಅನ್ನು ಫೋಕಾಸಿಯಾ ರೋಲ್‌ನಲ್ಲಿ ಬಳಸಿ ತಯಾರಿಸಲಾಗುತ್ತದೆ. ಇದರ ಬೆಲೆ 145 ಡಾಲರ್ ಅಥವಾ 12,000 ರೂಪಾಯಿ ಆಗಿದೆ.
ಬಾರ್ಕ್ಲೇ ಪ್ರೈಮ್ ಚೀಸ್ ಸ್ಟೀಕ್ - 140 ಡಾಲರ್
ಫಿಲಡೆಲ್ಫಿಯಾ ಸ್ಟೀಕ್‌ಹೌಸ್ ಬಾರ್ಕ್ಲೇ ಪ್ರೈಮ್ ವಿಭಿನ್ನವಾದ ಫಿಲ್ಲಿ ಚೀಸ್‌ಸ್ಟೀಕ್ ಸ್ಯಾಂಡ್‌ವಿಚ್ ಅನ್ನು ನೀಡುತ್ತದೆ. ಬಾರ್ಕ್ಲೇ ಪ್ರೈಮ್ ಚೀಸ್ ಸ್ಟೀಕ್‌ನಲ್ಲಿ ವ್ಯಾಗ್ಯೂ ರಿಬೆಯ್, ಫೊಯ್ ಗ್ರಾಸ್, ಈರುಳ್ಳಿ ಮತ್ತು ಟ್ರಫಲ್ ಚೀಸ್ ಇರುತ್ತದೆ. ಇದರ ಬೆಲೆ 140 ಡಾಲರ್ ಅಥವಾ ಸರಿಸುಮಾರು 11,600 ರೂಪಾಯಿ ಆಗಿದೆ.
ಚೀಸ್ ಸ್ಯಾಂಡ್‌ವಿಚ್ - 170 ಡಾಲರ್
ಇದು ಸಾಮಾನ್ಯ ಸ್ಯಾಂಡ್‌ವಿಚ್‌ನಂತೆ ಕಾಣಬಹುದು. ಆದರೆ ಈ ಚೀಸ್ ಸ್ಯಾಂಡ್‌ವಿಚ್ ಮಾತ್ರ ಅತೀ ಜನಪ್ರಿಯವಾಗಿದೆ. ಈ ಸ್ಯಾಂಡ್‌ವಿಚ್‌ಗಾಗಿ ಚೆಡ್ಡಾರ್ ಚೀಸ್, ವೈಟ್ ಟ್ರಫಲ್ಸ್, ಕ್ವಿಲ್ ಮೊಟ್ಟೆ, ಕಪ್ಪು ಟೊಮ್ಯಾಟೊ, ಎಪಿಕ್ಯೂರ್ ಸೇಬು, ತಾಜಾ ಅಂಜೂರದ ಹಣ್ಣು, ವಿನೆಗರ್ ಮತ್ತು ಖಾದ್ಯ ಗೋಲ್ಡ್ ಡಸ್ಟ್ ಬಳಸಲಾಗುತ್ತದೆ. ಇದರ ಬೆಲೆ 170 ಡಾಲರ್ ಅಥವಾ 14,100 ರೂಪಾಯಿ ಆಗಿದೆ. ಇದನ್ನು ವಿಶ್ವದ ಅತ್ಯಂತ ದುಬಾರಿ ಚೀಸ್ ಸ್ಯಾಂಡ್‌ವಿಚ್ ಎಂದು ಪರಿಗಣಿಸಲಾಗಿದೆ.
ಮೆಕ್‌ಡೊನಾಲ್ಡ್ಸ್ ಸ್ಯಾಂಡ್‌ವಿಚ್ - 130 ಡಾಲರ್
ಮೆಕ್‌ಡೊನಾಲ್ಡ್ಸ್ ಅತ್ಯಂತ ದುಬಾರಿ ಸ್ಯಾಂಡ್‌ವಿಚ್‌ಗಳಲ್ಲಿ ಒಂದಾಗಿದ್ದು ಇದರ ಬೆಲೆ 130 ಡಾಲರ್ ಅಥವಾ ಸರಿಸುಮಾರು 10,800 ರೂಪಾಯಿ ಆಗಿದೆ. ವಾಗ್ಯು ಬೀಫ್, ತಾಜಾ ಲೋಬ್ ಫೊಯ್ ಗ್ರಾಸ್, ಬ್ಲ್ಯಾಕ್ ಟ್ರಫಲ್ ಮೇಯನೇಸ್, ಬ್ರೀ ಡಿ ಮೆಕ್ಸ್, ಕೆಂಪು ಮೆಣಸು, ಇಂಗ್ಲಿಷ್ ಪ್ಲಮ್ ಟೊಮೆಟೊಗಳನ್ನು ಇದಕ್ಕೆ ಬಳಸಲಾಗುತ್ತದೆ.
ಬ್ರೆಡ್ಡ್ ವಾಗ್ಯು ಬೀಫ್ ಕಟ್ಲೆಟ್ ಸ್ಯಾಂಡ್‌ವಿಚ್ - 180 ಡಾಲರ್
ಹೆಸರೇ ಸೂಚಿಸುವಂತೆ, ಬ್ರೆಡ್ಡ್ ವಾಗ್ಯು ಬೀಫ್ ಕಟ್ಲೆಟ್ ಸ್ಯಾಂಡ್‌ವಿಚ್ ಅನ್ನು ವ್ಯಾಗ್ಯುಮಾಫಿಯಾದೊಂದಿಗೆ 10 ಹರ್ಬ್ ವೈಟ್ ಟ್ರಫಲ್ ಬೆಣ್ಣೆಯೊಂದಿಗೆ ತಯಾರಿಸಲಾಗುತ್ತದೆ. ಪೆಸಿಫಿಕ್ ಸಮುದ್ರದ ಉಪ್ಪನ್ನು ಇದಕ್ಕೆ ಬಳಸಲಾಗುತ್ತದೆ. ಇದರ ಬೆಲೆ ಸುಮಾರು 180 ಡಾಲರ್ ಅಥವಾ 15,000 ರೂಪಾಯಿ ಆಗಿದೆ.


Click it and Unblock the Notifications