ಭಾರತೀಯ ಬಿಲಿಯನೇರ್ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವು ಇಡೀ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಅಂಬಾನಿ ಕುಟುಂಬದ ಆಂಟಿಲಿಯಾ ಐಷಾರಾಮಿಯಾಗಿದ್ದು, ಅತೀ ದುಬಾರಿಯಾಗಿದೆ. ಆದರೆ ವಿಶ್ವದ ಅತೀ ದೊಡ್ಡ ಮನೆ ಅಂಬಾನಿಯದ್ದಲ್ಲ ಎಂಬುವುದು ನಿಮಗೆ ತಿಳಿದಿದೆಯೇ?
ಹೌದು, ಮುಕೇಶ್ ಅಂಬಾನಿಯ ಮನೆ ಅತೀ ದೊಡ್ಡ ಮನೆ ಎಂಬುವುದು ನಾವೆಲ್ಲರೂ ನಂಬಿರುವ ವಿಚಾರ. ಭಾರತದಲ್ಲಿ ನೋಡಿದಾಗ ಅದುವೇ ಅತೀ ದೊಡ್ಡ ಮನೆ, ದುಬಾರಿ ಮನೆಯಾಗಿದೆ. ಆದರೆ ನಿಜವಾಗಿ ವಿಶ್ವದಲ್ಲಿರುವ ಅತಿದೊಡ್ಡ ಮನೆ ಭಾರತದಲ್ಲಿ ಯಾರಿಗೂ ಸೇರಿದಲ್ಲ. ಬ್ರೂನಿಯ ಸುಲ್ತಾನ್‌ಗೆ ಸೇರಿದ ಮನೆ ಇದಾಗಿದೆ. ಈ ಮನೆಯನ್ನು ಇಸ್ತಾನಾ ನೂರುಲ್ ಇಮಾನ್ ಎಂದು ಕರೆಯಲಾಗುತ್ತದೆ.

ಇಸ್ತಾನಾ ನೂರುಲ್ ಇಮಾನ್ ಬಗ್ಗೆ ತಿಳಿಯಿರಿ
ಇಸ್ತಾನಾ ನೂರುಲ್ ಇಮಾನ್ ಅರಮನೆಯು ಬ್ರೂನಿಯ ಸುಲ್ತಾನ್ ಹಸ್ಸಾನಲ್ ಬೊಲ್ಕಿಯಾ ಅವರ ಅಧಿಕೃತ ನಿವಾಸ ಆಗಿದೆ. ಅವರು ಬ್ರೂನಿಯ ಪ್ರಧಾನ ಮಂತ್ರಿಯೂ ಆಗಿದ್ದಾರೆ. ಬೊಲ್ಕಿಯಾ ಅವರು ದೇಶದ ಸುಲ್ತಾನ್ ಪಟ್ಟವನ್ನು ಅಲಂಕರಿಸಿದಾಗಿನಿಂದ ಹಲವಾರು ದಶಕಗಳಿಂದ ಈ ವಿಶ್ವದ ಅತೀ ದೊಡ್ಡ ಮನೆಯಲ್ಲಿ ವಾಸಿಸುತ್ತಿದ್ದಾರೆ.
ವಿಶ್ವದ ಅತೀ ದೊಡ್ಡ ಮನೆ ವಿಸ್ತೀರ್ಣವೆಷ್ಟು?
ಮುಕೇಶ್ ಅಂಬಾನಿಯ ಆಂಟಿಲಿಯಾ ಸುಮಾರು 4 ಲಕ್ಷ ಚದರ ಅಡಿಯಷ್ಟಿದ್ದರೆ, ಗುಜರಾತ್‌ನ ಲಕ್ಷ್ಮಿ ವಿಲಾಸ್ ಅರಮನೆಯು ಸುಮಾರು 8 ಲಕ್ಷ ಚದರ ಅಡಿ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಆದರೆ ಬ್ರೂನಿಯ ಸುಲ್ತಾನನ ಅರಮನೆ ಇಸ್ತಾನಾ ನೂರುಲ್ ಇಮಾನ್ ಸುಮಾರು 2.2 ಮಿಲಿಯನ್ ಚದರ ಅಡಿ ಗಾತ್ರವನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಮನೆಯಾಗಿದೆ.
ಹೆಸರು ಇಸ್ತಾನಾ ನೂರುಲ್ ಇಮಾನ್ ಎಂದರೆ ಬೆಳಕು ಮತ್ತು ನಂಬಿಕೆಯ ಅರಮನೆ ಎಂದಾಗಿದೆ. ಬೃಹತ್ ಆದ, ಅಲಂಕಾರ ಮಾಡಿದ ಗೋಲ್ಡನ್ ಗುಮ್ಮಟಗಳು ಮತ್ತು ಬೃಹತ್ ಗಾಜಿನ ಬಾಗಿಲುಗಳನ್ನು ಈ ಮನೆಯು ಒಳಗೊಂಡಿದೆ. ಬಕಿಂಗ್ಹ್ಯಾಮ್ ಅರಮನೆ, ಲೌವ್ರೆ ಮತ್ತು ಫರ್ಬಿಡನ್ ಸಿಟಿಯನ್ನು ಸೋಲಿಸಿ ಬ್ರೂನಿ ಅರಮನೆಯು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವದ ಅತಿದೊಡ್ಡ ಅರಮನೆಯಾಗಿ ಕಾಣಿಸಿಕೊಂಡಿದೆ.
ಬ್ರೂನಿಯ ಸುಲ್ತಾನ್ ಹಸ್ಸಾನಲ್ ಬೊಲ್ಕಿಯಾ ಅವರು 1960 ರ ದಶಕದಿಂದಲೂ ಅರಮನೆಯಲ್ಲಿ ನೆಲೆಸಿದ್ದಾರೆ. ಇಲ್ಲಿ ಹಸ್ಸಾನಲ್ ಬೊಲ್ಕಿಯಾ ಬರೋಬ್ಬರಿ 7000 ಐಷಾರಾಮಿ ವಾಹನಗಳ ವಿಸ್ತಾರವಾದ ಕಾರು ಸಂಗ್ರಹವನ್ನು ಹೊಂದಿದ್ದಾರೆ. ಈ ಕಾರುಗಳ ಮೌಲ್ಯ 5 ಬಿಲಿಯನ್ ಯುಎಸ್ ಡಾಲರ್ ಆಗಿದ್ದು, ಭಾರತೀಯ ಕರೆನ್ಸಿಯಲ್ಲಿ 41,600 ಕೋಟಿ ರೂಪಾಯಿ ಆಗಿದೆ.
ಇಸ್ತಾನಾ ನೂರುಲ್ ಇಮಾನ್ ಮೌಲ್ಯವು ಸುಮಾರು 11,600 ಕೋಟಿ ರೂಪಾಯಿಗಳಾಗಿದ್ದರೆ, ಬ್ರೂನಿ ಸುಲ್ತಾನನ ಒಟ್ಟಾರೆ ನಿವ್ವಳ ಮೌಲ್ಯವು ವಿಕಿಪೀಡಿಯಾದ ಪ್ರಕಾರ ಸುಮಾರು 2.49 ಲಕ್ಷ ಕೋಟಿ ರೂಪಾಯಿಯಾಗಿದೆ.


Click it and Unblock the Notifications