World's largest home: ಇದು ವಿಶ್ವದ ಅತಿ ದೊಡ್ಡ ಮನೆ, ಆಂಟಿಲಿಯಾ ಮೀರಿಸುವ ಈ ವಿಲಾಸದಲ್ಲಿದೆ 170 ಕೊಠಡಿ!

ಭಾರತದಲ್ಲಿ ವಿಶ್ವದ ಅತಿದೊಡ್ಡ ವಸತಿ ಕಟ್ಟಡವೊಂದಿದ್ದು, ಇದು ಮುಂಬೈನಲ್ಲಿರುವ ಮುಕೇಶ್ ಅಂಬಾನಿಯ ಪ್ರಸಿದ್ಧ ಆಂಟಿಲಿಯಾಕ್ಕಿಂತ ದೊಡ್ಡದಾಗಿದೆ ಎಂದರೆ ನಂಬಲೇಬೇಕು. ಹೌದು ಭಾರತದ ವಡೋದರದಲ್ಲಿರುವ ಗುಜರಾತಿ ಗಾಯಕ್ವಾಡ್ ಕುಟುಂಬದ ಒಡೆತನದಲ್ಲಿರುವ ರಾಜಮನೆತನದ ನಿವಾಸವಾಗಿದೆ. ಇದೇ ಲಕ್ಷ್ಮಿ ವಿಲಾಸ್ ಅರಮನೆ.

ದೇಶದ ಅಪರೂಪದ ಮತ್ತು ಅತ್ಯಂತ ಸೊಗಸಾದ ಹೆಗ್ಗುರುತುಗಳಲ್ಲಿ ಲಕ್ಷ್ಮಿ ವಿಲಾಸ್ ಅರಮನೆಯೂ ಒಂದಾಗಿದೆ. ಇದರೊಂದಿಗೆ ಈ ಅರಮನೆ ಬಹು- ವರ್ಣದ ಅಮೃತಶಿಲೆ, ವಿವಿಧ ಕಲಾಕೃತಿಗಳು ಮತ್ತು ಕಾರಂಜಿಗಳೊಂದಿಗೆ ಐತಿಹಾಸಿಕ ವೈಭವಕ್ಕೆ ಮತ್ತು ಅದ್ಭುತ ವಾಸ್ತುಶಿಲ್ಪಕ್ಕೆ ಭವ್ಯವಾದ ಉದಾಹರಣೆಯಾಗಿದೆ.

 ಇದು ವಿಶ್ವದ ಅತಿ ದೊಡ್ಡ ಮನೆ, ಈ ವಿಲಾಸದಲ್ಲಿದೆ 170 ಕೊಠಡಿ!

ವರದಿಗಳ ಪ್ರಕಾರ, ಅರಮನೆಯು ಸುಮಾರು 700 ಎಕರೆ ಪ್ರದೇಶದಲ್ಲಿ ಹರಡಿರುವ ಗ್ರೇಟ್ ಬ್ರಿಟನ್‌ನ ಬಕಿಂಗ್‌ಹ್ಯಾಮ್ ಅರಮನೆಗಿಂತ ಸುಮಾರು ನಾಲ್ಕು ಪಟ್ಟು ದೊಡ್ಡದಾಗಿದೆ. ಲಕ್ಷ್ಮಿ ವಿಲಾಸ್ ಅರಮನೆಯು ಭವ್ಯವಾದ ವಾಸ್ತುಶಿಲ್ಪದ ಅದ್ಭುತ ಸ್ಥಳವಾಗಿದೆ.

ಇಂಡೋ- ಸಾರ್ಸೆನಿಕ್ ವಾಸ್ತುಶಿಲ್ಪದ ಪ್ರವರ್ಧಮಾನದ ವೇಳೆಯಲ್ಲಿ 1880 ರಲ್ಲಿ ಮಹಾರಾಜ ಸಯಾಜಿರಾವ್ ಗಾಯಕ್‌ವಾಡ್ III ಕಟ್ಟಿಸಿದ್ದು, ಇದನ್ನು ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಮೇಜರ್ ಚಾರ್ಲ್ಸ್ ಮಾಂಟ್ ಮತ್ತು ಆರ್‌ಎಫ್ ಚಿಸೋಲ್ಮ್ ವಿನ್ಯಾಸಗೊಳಿಸಿದರು.

ಆ ಕಾಲದಲ್ಲಿ ಇದು ವಿಶ್ವದ ಅತಿದೊಡ್ಡ ಖಾಸಗಿ ವಾಸಸ್ಥಾನವಾಗಿತ್ತು. ಈ ವಾಸ್ತುಶಿಲ್ಪದ ಅದ್ಭುತಗಳಿಂದ ಕೂಡಿದ ಲಕ್ಷ್ಮೀ ವಿಲಾಸ ಅರಮನೆ 180,000 ಪೌಂಡ್‌ಗಳಲ್ಲಿ ನಿರ್ಮಾಣವಾಗಿದ್ದು, ಇದು ಈಗಲೂ ಎಚ್‌ಆರ್‌ಎಚ್‌ ಸಮರ್ಜಿತ್ ಸಿಂಗ್ ಗಾಯಕ್ವಾಡ್, ಪತ್ನಿ ರಾಧಿಕರಾಜೆ ಗಾಯಕ್ವಾಡ್ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಾರೆ.

ಲಕ್ಷ್ಮಿ ವಿಲಾಸ್ ಅರಮನೆಯ ಬಗ್ಗೆ ಕುತೂಹಲಕಾರಿ ಅಂಶಗಳು:

ಲಕ್ಷ್ಮಿ ವಿಲಾಸ ಅರಮನೆಯನ್ನು ನಿರ್ಮಿಸುವ ಮೊದಲು ಮಹಾರಾಜ ಗಾಯಕ್ವಾಡ್‌ಗಳು ನಜರ್‌ಬಾಗ್ ಅರಮನೆ ಅಥವಾ ಸರ್ಕಾರವಾಡ ಎಂದು ಕರೆಯಲ್ಪಡುವ ಅರಮನೆಯಲ್ಲಿ ವಾಸಿಸುತ್ತಿದ್ದರು. ಆ ಕಾಲದ ಅತ್ಯಂತ ಪ್ರಸಿದ್ಧ ವಾಸ್ತುಶಿಲ್ಪಿ ಮೇಜರ್ ಚಾರ್ಲ್ಸ್ ಮಾಂಟ್ ಅವರನ್ನು ಅರಮನೆ ನಿರ್ಮಾಣಕ್ಕಾಗಿ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ III ಅವರು ಹಡಗಿನಲ್ಲಿ ಕರೆ ತಂದಿದ್ದರು.

ಇದೇ ರೀತಿಯ ಅರಮನೆಗಳನ್ನು ಭಾರತದಲ್ಲಿ ಮೇಜರ್ ಚಾರ್ಲ್ಸ್ ಮಾಂಟ್ ಅವರು ಕೊಲ್ಲಾಪುರ ಮತ್ತು ದರ್ಭಾಂಗದಲ್ಲಯೂ ನಿರ್ಮಿಸಿದ್ದಾರೆ. ಆದರೆ ವಾಸ್ತುಶಿಲ್ಪಿ ಚಾರ್ಲ್ಸ್ ಮಾಂಟ್ ಅವರ ಜೀವನದಲ್ಲಿ "ಲಕ್ಷ್ಮಿ ವಿಲಾಸ್" ಬಹು ದೊಡ್ಡ ಪ್ರಾಜೆಕ್ಟ್ ಆಗಿತ್ತು. ವಿಪರ್ಯಾಸವೆಂದರೆ ಅರಮನೆಯ ಅರ್ಧದಷ್ಟು ನಿರ್ಮಾಣದ ಪ್ರಯತ್ನದಲ್ಲಿ ಅವರು ತಮ್ಮ ಮಾನಸಿಕ ಸಮಸ್ಯೆಯಿಂದ ತಮ್ಮ ಜೀವವನ್ನೇ ಕಳೆದುಕೊಂಡರು. ಇದಾದ ಬಳಿಕ ಅರಮನೆ ನಿರ್ಮಾಣಕ್ಕಾಗಿ ವಾಸ್ತುಶಿಲ್ಪಿ ರಾಬರ್ಟ್ ಫೆಲೋಸ್ ಚಿಸೋಲ್ಮ್ ಅವರನ್ನು ನೇಮಿಸಲಾಯಿತು.

ಲಕ್ಷ್ಮಿ ವಿಲಾಸ ಅರಮನೆಯ ವಿಶೇಷತೆ:

700 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಲಕ್ಷ್ಮಿ ವಿಲಾಸ, ನಾಲ್ಕು ಅಂತಸ್ತನ್ನು ಒಳಗೊಂಡಿದ್ದು, ಮಹಾರಾಜ ಮತ್ತು ಮಹಾರಾಣಿ ಅಂದರೆ ಕೇವಲ ಇಬ್ಬರಿಗಾಗಿಯೇ 170 ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು 1800 ರ ದಶಕದಲ್ಲಿ ನಿರ್ಮಿಸಲಾಗಿದ್ದರೂ, ಇಂದಿಗೂ ಪ್ರಸ್ತುತ ಎನಿಸುವಂತ, ಹಾಗೂ ಅರಮನೆಯಲ್ಲಿ ಕಲ್ಪಿಸಬಹುದಾದ ಎಲ್ಲಾ ಸಮಕಾಲೀನ ಅನುಕೂಲತೆಗಳನ್ನು ಹೊಂದಿತ್ತು.

ಅರಮನೆಯು ಆಂತರಿಕ ದೂರವಾಣಿಗಳು, ಒಳಾಂಗಣದಲ್ಲಿ ಎಲಿವೇಟರ್‌ಗಳು ಮತ್ತು ತಡೆರಹಿತ ವಿದ್ಯುತ್ ಸರಬರಾಜು ಸೇರಿದಂತೆ ಆಧುನಿಕ ಸೌಕರ್ಯಗಳನ್ನು ಹೊಂದಿತ್ತು. ಸೊಂಗಾಧ್ ಕ್ವಾರಿಗಳಿಂದ ಪಡೆದ ಚಿನ್ನದ ಕಲ್ಲುಗಳಿಂದ ರಚಿಸಲಾದ ಅರಮನೆಯ ಮುಂಭಾಗವನ್ನು ಅದ್ಭುತವಾದ ಚಿನ್ನದ ಹೊಳಪನ್ನು ನೀಡುತ್ತದೆ.

ಅರಮನೆಯ ಒಳಭಾಗವು ಮತ್ತಷ್ಟು ಸುಂದರವಾಗಿದ್ದು, ಮರಗಳು ಮತ್ತು ಕಾರಂಜಿಗಳಿಂದ ಅಲಂಕರಿಸಲ್ಪಟ್ಟ ಎರಡು ವಿಸ್ತಾರವಾದ ಅಂಗಳಗಳು ಬೇಸಿಗೆಯ ಮಧ್ಯಾಹ್ನದಲ್ಲೂ ನಮ್ಮನ್ನು ತಂಪಾಗಿರಿಸುತ್ತದೆ. ಅದ್ದೂರಿ ಇಂಟೀರಿಯರ್‌ಗಳಲ್ಲಿದ್ದು, ಇದು ದುಬಾರಿ ಅಮೃತಶಿಲೆ ಮತ್ತು ಮೊಸಾಯಿಕ್‌ಗಳಿಂದ ಮಾಡಲಾಗಿದ್ದು, ಅದನ್ನು ಇಂದಿಗೂ ಉತ್ತಮವಾಗಿ ನಿರ್ವಹಿಸಲಾಗಿದೆ.

ಹೆಸರಾಂತ ಕಲಾವಿದ ರಾಜಾ ರವಿ ವರ್ಮಾ ಅವರ ಕಲೆ, ಶಸ್ತ್ರಾಸ್ತ್ರಗಳು ಮತ್ತು ವರ್ಣಚಿತ್ರಗಳ ಭವ್ಯವಾದ ಸಂಗ್ರಹವನ್ನು ಒಳಗೊಂಡಿವೆ. ಮೋತಿ ಬಾಗ್ ಕ್ರಿಕೆಟ್ ಗ್ರೌಂಡ್, ಬರೋಡಾ ಕ್ರಿಕೆಟ್ ಅಸೋಸಿಯೇಷನ್ ​​ಕಚೇರಿಗಳು ಮತ್ತು ಒಳಾಂಗಣ ಟೆನಿಸ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್‌ನಂತಹ ಕ್ರೀಡಾ ಸೌಲಭ್ಯಗಳು ಅದರ ಭವ್ಯತೆಯನ್ನು ಹೆಚ್ಚಿಸುತ್ತವೆ.

ಅರಮನೆಯು ಒಂದು ಸಣ್ಣ ಮೃಗಾಲಯ ಮತ್ತು ರೈಲ್ವೆ ರಾಜಮನೆತನದ ಮಕ್ಕಳನ್ನು ಸಾಗಿಸುವ ಟ್ರ್ಯಾಕ್ ಅನ್ನು ಸಹ ಹೊಂದಿತ್ತು. ಈ ಅರಮನೆಯನ್ನು ನಿರ್ಮಾಣಕ್ಕೆ 12 ವರ್ಷಗಳನ್ನು ತೆಗೆದುಕೊಂಡಿದ್ದು, ಸಾರ್ವಜನಿಕರು ಅರಮನೆಯ ಒಂದು ಪ್ರದೇಶಕ್ಕೆ ಭೇಟಿ ನೀಡಬಹುದಾಗಿದೆ. ಇಲ್ಲಿ ವಸ್ತುಸಂಗ್ರಹಾಲಯವೂ ಇದ್ದು, ಸಾರ್ವಜನಿಕರು 150-200 ರೂಪಾಯಿ ಟಿಕೆಟ್ ದರ ನೀಡಿ ಅರಮನೆಯ ಸೌಂದರ್ಯ ಆಸ್ಪಾದಿಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+