ಭಿಕ್ಷುಕ ಎಂದು ಹೇಳುವಾಗ ನಮ್ಮ ಕಣ್ಣ ಮುಂದೆ, ಹರಿದ ಬಟ್ಟೆ ಹಾಕಿಕೊಂಡು, ಆಹಾರಕ್ಕಾಗಿ ಬೇಡುವ ದೃಶ್ಯ ಬರುತ್ತದೆ. ಸಾಮಾನ್ಯವಾಗಿ ಆರ್ಥಿಕವಾಗಿ ಅತೀ ಕಷ್ಟದ ಸ್ಥಿತಿಯಲ್ಲಿ ಇರುವವವರು ಭಿಕ್ಷೆ ಬೇಡುತ್ತಾರೆ ಎಂಬುವುದು ಎಲ್ಲರ ಬಳಿ ಇರುವ ಮಾಹಿತಿ. ಬಡತನವೇ ಇದಕ್ಕೆ ಪ್ರಮುಖ ಕಾರಣ ಎಂಬ ಮಾಹಿತಿ ಕೂಡಾ ಇದೆ. ಆದರೆ ಭಿಕ್ಷೆ ಬೇಡಿಯೇ ಕೋಟ್ಯಾಂತರ ರೂಪಾಯಿಯನ್ನು ಸಂಪಾದನೆ ಮಾಡಿರುವ ವ್ಯಕ್ತಿಯ ಬಗ್ಗೆ ನಿಮಗೆ ತಿಳಿದಿದೆಯೇ?
ಹೌದು, ಕೆಲವರು ಭಿಕ್ಷೆ ಬೇಡುವುದನ್ನೇ ತಮ್ಮ ಲಾಭದಾಯಕವಾದ ವೃತ್ತಿಯನ್ನಾಗಿಸಿದ್ದಾರೆ!. ಇದರಿಂದಾಗಿ ಭಿಕ್ಷಾಟನೆ ಎಂಬುವುದರ ಪರಿಕಲ್ಪನೆಯೇ ಬದಲಾವಣೆಯಾಗಿದೆ. ಭಿಕ್ಷೆಯನ್ನು ಬೇಡುವ ಮೂಲಕವೇ ವ್ಯಕ್ತಿಯೊಬ್ಬರು ಕೋಟ್ಯಾಂತರ ರೂಪಾಯಿ ಆದಾಯವನ್ನು ಗಳಿಸಿದ್ದಾರೆ. ಮುಂಬೈನ ಭರತ್ ಜೈನ್ ಅಂತಹ ಕೋಟ್ಯಾಧಿಪತಿ ಬಿಲಿಯನೇರ್‌ಗಳಲ್ಲಿ ಒಬ್ಬರಾಗಿದ್ದಾರೆ. ಭರತ್ ಜೈನ್ ವಿಶ್ವದಲ್ಲಿ ಅತೀ ಶ್ರೀಮಂತ ಭಿಕ್ಷುಕ ಎಂದು ಹೇಳಲಾಗುತ್ತದೆ. ಭರತ್ ಜೈನ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ವಿಶ್ವದ ಶ್ರೀಮಂತ ಭಿಕ್ಷುಕ
ವಿಶ್ವದ ಶ್ರೀಮಂತ ಭಿಕ್ಷುಕ ಎನಿಸಿಕೊಂಡಿರುವ ಭರತ್ ಜೈನ್ ಮುಂಬೈ ಹಾಗೂ ಪುಣೆಯಲ್ಲಿ ತಮ್ಮ ಸ್ವಂತ ಮನೆಗಳನ್ನು ಹೊಂದಿದ್ದಾರೆ. ಹಾಗೆಯೇ ಕೋಟ್ಯಾಂತರ ರೂಪಾಯಿ ಮೌಲ್ಯದ ಅಂಗಡಿಗಳನ್ನು ಕೂಡಾ ಹೊಂದಿದ್ದಾರೆ. ಭರತ್ ಜೈನ್ ಸುಮಾರು 1.25 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಹೊಂದಿದ್ದಾರೆ. ತಮ್ಮ ಮಕ್ಕಳನ್ನು ಕಾನ್ವೆಂಟ್ ಸ್ಕೂಲ್‌ಗೆ ಕಳುಹಿಸುತ್ತಾರೆ.
ಕೋಟ್ಯಾಂತರ ರೂಪಾಯಿ ಹಣ, ದೊಡ್ಡ ಬಂಗಲೆ, ಇತರೆ ಐಷಾರಾಮಿ ಜೀವನಕ್ಕೆ ಬೇಕಾದ ಎಲ್ಲ ಸೌಲಭ್ಯಗಳು ಇದ್ದರೂ ಕೂಡಾ ಭರತ್ ಜೈನ್ ಈಗಲೂ ಕೂಡಾ ಭಿಕ್ಷಾಟನೆಯನ್ನು ಮಾಡುತ್ತಾರೆ. ಈವರೆಗೂ ಭಿಕ್ಷೆ ಬೇಡುವ ತನ್ನ ವೃತ್ತಿಯನ್ನು ಬಿಟ್ಟಿಲ್ಲ!. ತನ್ನ ಕುಟುಂಬಸ್ಥರು ಭಿಕ್ಷಾಟನೆ ಮಾಡಬೇಡಿ ಎಂದು ಹೇಳಿದರೂ ಭರತ್ ಜೈನ್ ಈಗಲೂ ಭಿಕ್ಷಾಟನೆ ಮಾಡುತ್ತಾರೆ.
ಭರತ್ ಜೈನ್ ಆದಾಯ
ವಿಶ್ವದ ಶ್ರೀಮಂತ ಭಿಕ್ಷುಕ ಭರತ್ ಜೈನ್ ವಿವಾಹಿತರಾಗಿದ್ದು, ತನ್ನ ಪತ್ನಿ, ಇಬ್ಬರು ಪುತ್ರರು, ಸಹೋದರ ಹಾಗೂ ತನ್ನ ತಂದೆಯೊಂದಿಗೆ ವಾಸವಾಗಿದ್ದಾರೆ. ವರದಿಯ ಪ್ರಕಾರ ಭರತ್ ಜೈನ್ ಮಾಸಿಕವಾಗಿ ಭಿಕ್ಷಾಟನೆ ಮೂಲಕ 75 ಸಾವಿರ ರೂಪಾಯಿ ಆದಾಯವನ್ನು ಗಳಿಸುತ್ತಾರೆ. 2020ರಲ್ಲಿ ಭರತ್ ಜೈನ್ ಒಟ್ಟು ಗಳಿಕೆ 9 ಲಕ್ಷ ರೂಪಾಯಿ ಆಗಿದೆ.
ಭರತ್ ಜೈನ್ ಒಂದು ದಿನದಲ್ಲಿ ಒಟ್ಟಾಗಿ 2500 ರೂಪಾಯಿ ಭಿಕ್ಷೆಯನ್ನು ಬೇಡುತ್ತಾರೆ. ಸಾಮಾನ್ಯ ವ್ಯಕ್ತಿ ಉದ್ಯೋಗವನ್ನು ಮಾಡುವ ಮೂಲಕವೂ ಒಂದು ದಿನದಲ್ಲಿ ಇಷ್ಟು ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗುವುದಿಲ್ಲ. ಸಣ್ಣ ಶಾಪ್‌ಕೀಪರ್‌ಗೂ ಕೂಡಾ ಇಷ್ಟು ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಭರತ್ ಜೈನ್‌ನ ಪಾರೆಲ್‌ನ ಫ್ಲ್ಯಾಟ್‌ನಲ್ಲಿ ಎರಡು ಬೆಡ್‌ರೂಮ್‌ಗಳಿದೆ.
ಥಾಣೆಯಲ್ಲಿ ಎರಡು ಸ್ಟೋರ್‌ಗಳನ್ನು ಕೂಡಾ ಭರತ್ ಜೈನ್ ಹೊಂದಿದ್ದಾರೆ. ಈ ಸ್ಟೋರ್‌ಗಳಿಂದ ಮಾಸಿಕವಾಗಿ 30 ಸಾವಿರ ರೂಪಾಯಿ ಬಾಡಿಗೆಯನ್ನು ಭರತ್ ಜೈನ್ ಪಡೆಯುತ್ತಾರೆ. ಭರತ್ ಜೈನ್ ಕುಟುಂಬವು ಸ್ಟೇಷನರಿ ಸ್ಟೋರ್ ಅನ್ನು ನಡೆಸುತ್ತಿದ್ದು, ಇದರಿಂದವು ಗಳಿಸುತ್ತಾರೆ. ವರದಿ ಪ್ರಕಾರ ಪ್ರಸ್ತುತ ಭರತ್ ಜೈನ್ ನಿವ್ವಳ ಆದಾಯವು 7.5 ಕೋಟಿ ರೂಪಾಯಿ ಆಗಿದೆ. ಸಾಮಾನ್ಯವಾಗಿ ಭರತ್ ಜೈನ್ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ಸಮೀಪ ಮತ್ತು ಮುಂಬೈನ ಅಜಾದ್ ಮೈದಾನದ ಸಮೀಪದ ಭಿಕ್ಷಾಟನೆ ಮಾಡುತ್ತಾರೆ.
ಇನ್ನು ಭರತ್ ಜೈನ್ ಮಾತ್ರವಲ್ಲ ಭಾರತದಲ್ಲಿ ಅನೇಕ ಲಕ್ಷಾಧಿಪತಿಗಳಾಗಿರುವ ಭಿಕ್ಷುಕರಿದ್ದಾರೆ. ಕೋಲ್ಕತ್ತಾ ನಿವಾಸಿಯಾಗಿರುವ ಲಕ್ಷ್ಮಿ 16ನೇ ವಯಸ್ಸಿನಿಂದ ಭಿಕ್ಷುಕಿಯಾಗಿದ್ದಾರೆ. ಅಂದಿನಿಂದ ಭಿಕ್ಷೆ ಬೇಡುತ್ತಾ ಲಕ್ಷಗಟ್ಟಲೆ ಹಣವನ್ನು ಸಂಗ್ರಹ ಮಾಡುತ್ತಿದ್ದಾಳೆ. ಅದೇ ರೀತಿ ಮುಂಬೈ ನಿವಾಸಿ ಗೀತಾ ಚಾರ್ನಿ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾಳೆ. ತನ್ನದೇ ಆದ ಫ್ಲ್ಯಾಟ್ ಹೊಂದಿದ್ದು, ಅಲ್ಲಿ ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದಾಳೆ. ಗೀತಾ ಭಿಕ್ಷಾಟನೆಯಿಂದ ದಿನಕ್ಕೆ ಸುಮಾರು 1,500 ರೂಪಾಯಿ ಸಂಪಾದನೆ ಮಾಡುತ್ತಿದ್ದಾಳೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications