ಸೆಲೆಬ್ರಿಟಿ ಜೋಡಿಯಾಗಿದ್ದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ - ತಮ್ಮ 14 ವರ್ಷಗಳ ದಾಂಪತ್ಯವನ್ನು ವಿಚ್ಚೇದನದಲ್ಲಿ ಕೊನೆಗೊಳಿಸಿದ್ದಾರೆ. ಶೋಯೆಬ್ ಮಲಿಕ್ ಸಹ ಪಾಕ್ ನಟಿ ಸನಾ ಜಾವೇದ್ ಅವರೊಂದಿಗೆ ಮೂರನೇ ವಿವಾಹವಾಗಿದ್ದಾರೆ.
ಈ ಮಧ್ಯೆ, ಶೋಯೆಬ್ ಮಲಿಕ್‌ನಿಂದ ಸಾನಿಯಾ ಮಿರ್ಜಾ ಜೀವನಾಂಶವಾಗಿ ಪಡೆದ ಮೊತ್ತದ ಬಗ್ಗೆ ಈಗ ಸಾಕಷ್ಟು ಚರ್ಚೆ ನಡೆಯುತ್ತಿದೆ. ಶೋಯೆಬ್ ಪಾಕಿಸ್ತಾನದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಶೋಯೆಬ್ ಮಲಿಕ್ ಅವರ ಒಟ್ಟು ನಿವ್ವಳ ಮೌಲ್ಯ $28 ಮಿಲಿಯನ್ ಅಂದರೆ ಸರಿಸುಮಾರು 232 ಕೋಟಿ ರೂಪಾಯಿ ಆಗಿದೆ.

ಶೋಯೆಬ್ ಸಾನಿಯಾಗೆ ನೀಡಲಿರುವ ಜೀವನಾಂಶದ ಮೊತ್ತದ ಬಗ್ಗೆ ಅನೇಕ ಮಂದಿ ಕುತೂಹಲಕೊಂಡಿದ್ದು, ಈ ಬಗ್ಗೆ ಇನ್ನು ಮಾಹಿತಿಗಳು ಹೊರಬಿದ್ದಿಲ್ಲ. ಹಾಗಿದ್ರೆ ಕಾನೂನು ಇತಿಹಾಸದಲ್ಲಿ ಅತ್ಯಂತ ದುಬಾರಿ ವಿಚ್ಛೇದನಗಳ ಪಟ್ಟಿ ನೋಡೋಣ.
ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ ಮೆಲಿಂಡಾ 27 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ 2021 ರಲ್ಲಿ ವಿಚ್ಛೇದನವನ್ನು ಘೋಷಿಸಿದರು. ಈ ವಿಚ್ಛೇದನವು ಅತ್ಯಂತ ದುಬಾರಿ ವಿಚ್ಛೇದನವಾಗಿದ್ದು, ಮೆಲಿಂಡಾ $ 76 ಬಿಲಿಯನ್ ಅಂದರೆ 60,66,04,45,00,000 ರೂಪಾಯಿ ಪರಿಹಾರವನ್ನು ಪಡೆದುಕೊಂಡಿದ್ದಾರೆ.
ಜೆಫ್ ಬೆಜೋಸ್ ಮತ್ತು ಮ್ಯಾಕೆಂಜಿ ಸ್ಕಾಟ್
ಅಮೆಜಾನ್ ಮಾಲೀಕ ಜೆಫ್ ಬೆಜೋಸ್ ಅವರ ಪತ್ನಿ ಮ್ಯಾಕೆಂಜಿ ಸ್ಕಾಟ್ ತಮ್ಮ ದಾಂಪತ್ಯವನ್ನು 2019 ರಲ್ಲಿ ಕೊನೆಗೊಳಿಸಿ ಅದೇ ವರ್ಷ ವಿಚ್ಛೇದನವನ್ನು ಪಡೆದುಕೊಂಡರು. ಡಿವೋರ್ಸ್‌ನ ಇತ್ಯರ್ಥದ ಭಾಗವಾಗಿ ಮ್ಯಾಕೆಂಜಿಯು ಅಮೆಜಾನ್‌ನಲ್ಲಿ $36 ಶತಕೋಟಿ (Rs 29,91,54,06,00,000) ಗಿಂತ ಹೆಚ್ಚಿನ ಮೌಲ್ಯದ 4 ಪ್ರತಿಶತ ಪಾಲನ್ನು ಪಡೆದುಕೊಂಡರು.
ಅಲೆಕ್ ಎನ್. ವೈಲ್ಡೆನ್‌ಸ್ಟೈನ್ ಮತ್ತು ಜೋಸ್ಲಿನ್ ವೈಲ್ಡೆನ್‌ಸ್ಟೈನ್
ಬಿಲಿಯನೇರ್ ಉದ್ಯಮಿ, ಆರ್ಟ್ ಡೀಲರ್, ರೇಸ್ ಹಾರ್ಸ್ ಗಳ ಮಾಲೀಕ ಮತ್ತು ಬ್ರೀಡರ್ ಆಗಿರುವ ಅಲೆಕ್ ವೈಲ್ಡೆನ್‌ಸ್ಟೈನ್ 1999 ರಲ್ಲಿ ತಮ್ಮ ಪತ್ನಿ ಜೋಸೆಲಿನ್ ವೈಲ್ಡೆನ್‌ಸ್ಟೈನ್‌ರಿಂದ ವಿಚ್ಛೇದನ ಪಡೆದರು. ಈ ವೇಳೆ $3.8 ಬಿಲಿಯನ್ ಅಂದರೆ 3,15,77,37,30,000 ರೂಪಾಯಿ ಪರಿಹಾರ ನೀಡಲಾಯಿತು.
ಕಿಮ್ ಕಾರ್ಡಶಿಯಾನ್ ಮತ್ತು ಕಾನ್ಯೆ ವೆಸ್ಟ್
ಹಾಲಿವುಡ್ ತಾರೆ ಕಿಮ್ ಕಾರ್ಡಶಿಯಾನ್ ಮತ್ತು ಕಾನ್ಯೆ ವೆಸ್ಟ್ ಅವರ $2.7 ಬಿಲಿಯನ್ (Rs 2,24,36,54,10,000) ವಿಚ್ಛೇದನದ ಜೊತೆಗೆ ಪ್ರತಿ ತಿಂಗಳು ಮಕ್ಕಳ ಪಾಲನೆಗಾಗಿ ವೆಸ್ಟ್ $200,000 (Rs 1,66,19,820) ಪಡೆದುಕೊಂಡಿದ್ದಾರೆ.
ರೂಪರ್ಟ್ ಮುರ್ಡೋಕ್ ಮತ್ತು ಅನ್ನಾ
ಆಸ್ಟ್ರೇಲಿಯಾದ ಅಮೆರಿಕನ್ ಉದ್ಯಮಿ ಅನ್ನಾದಿಂದ 1999 ರಲ್ಲಿ ರೂಪರ್ಟ್ ಮುರ್ಡೋಕ್ ವಿಚ್ಛೇದನ ಪಡೆದರು. 1.7 ಬಿಲಿಯನ್ ಡಾಲರ್ ಪರಿಹಾರ (ರೂ. 1,41,26,84,70,000) ಎಂದು ಅಂದಾಜಿಸಲಾಗಿದೆ.


Click it and Unblock the Notifications