ಪೋರ್ಬ್ಸ್ 2023ರಲ್ಲಿ ವಿಶ್ವದ ಬಿಲಿಯನೇರ್‌ಗಳು ಎಷ್ಟಿದ್ದಾರೆ ಎಂಬ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಪೋರ್ಬ್ಸ್ ತನ್ನ ಒಟ್ಟು ಬಿಲಿಯನೇರ್‌ಗಳ ಪಟ್ಟಿಯನ್ನು ಏಪ್ರಿಲ್ 4ರಂದು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ ವಿಶ್ವದಲ್ಲಿ 2023ರಲ್ಲಿ ಒಟ್ಟಾಗಿ 2,640 ಬಿಲಿಯನೇರ್‌ಗಳು ಇದ್ದಾರೆ. ಈ ಭೂಮಿಯಲ್ಲಿ 2022ರಲ್ಲಿ ಒಟ್ಟಾಗಿ 2,668 ಬಿಲಿಯನೇರ್‌ಗಳು ಇದ್ದರೆ, ಆದರೆ ಈ ಸಂಖ್ಯೆಯು 2023ರ ವೇಳೆಗೆ ಸುಮಾರು 2,640ಕ್ಕೆ ಇಳಿಕೆಯಾಗಿದೆ. ಆದರೆ ಈ ಪೈಕಿ ಅತೀ ಕಿರಿಯ ವಯಸ್ಸಿನ ಬಿಲಿಯನೇರ್ ಯಾರು, ಅತೀ ಹಿರಿಯ ಬಿಲಿಯನೇರ್ ಯಾರು ಎಂಬ ಮಾಹಿತಿ ನಿಮಗಿದೆಯೇ?
ಪೋರ್ಬ್ಸ್‌ನ ಪಟ್ಟಿ ಪ್ರಕಾರ ವಿಶ್ವದಲ್ಲಿರುವ 2,640 ಬಿಲಿಯನೇರ್‌ಗಳ ಸರಾಸರಿ ವಯಸ್ಸು 65 ವರ್ಷವಾಗಿದೆ. ಈ ಪೈಕಿ ಪಟ್ಟಿಯಲ್ಲಿರುವ ಅತೀ ಹಿರಿಯ ಬಿಲಿಯನೇರ್ 101 ವರ್ಷದ ಉದ್ಯಮಿ ಜಾರ್ಜ್ ಜೋಸೆಫ್ ಆಗಿದ್ದಾರೆ. ಆದರೆ ಹಿರಿ ವಯಸ್ಸಿಗಿಂತ ತನ್ನ ಕಿರಿ ವಯಸ್ಸಿನಲ್ಲೇ ಅತೀ ಹೆಚ್ಚು ಸಂಪಾದನೆ ಮಾಡುವುದು ಮುಖ್ಯವಾಗುತ್ತದೆ. ಈ ರೀತಿ ನೋಡಿದಾಗ ಪೋರ್ಬ್ಸ್‌ನ ಬಿಲಿಯನೇರ್‌ಗ ಪಟ್ಟಿಯಲ್ಲಿ ವಿಶ್ವದಾದ್ಯಂತ ಸುಮಾರು ಮೂರು ಕೋಮಾ ಹಾಕುವಷ್ಟು ಮೊತ್ತವನ್ನು ಆದಾಯವನ್ನಾಗಿ ಹೊಂದಿರುವ 30 ವರ್ಷಕ್ಕಿಂತ ಕಿರಿಯ ವಯಸ್ಸಿನವರು ಒಟ್ಟಾಗಿ 15 ಮಂದಿ ಇದ್ದಾರೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಿಲಿಯನೇರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಬೆನ್ ಫ್ರಾನ್ಸಿಸ್: ಪೋರ್ಬ್ಸ್ 2023ರ ಕಿರಿಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಬೆನ್ ಫ್ರಾನ್ಸಿಸ್ ಕೂಡಾ ಇದ್ದು, ಅವರ ನಿವ್ವಳ ಆದಾಯ 1.2 ಬಿಲಿಯನ್ ಡಾಲರ್ ಆಗಿದೆ. 2012ರಲ್ಲಿ ತನ್ನ 19ನೇ ವಯಸ್ಸಿನಲ್ಲಿ ಬೆನ್ ಫ್ರಾನ್ಸಿಸ್ ತನ್ನ ಸ್ಪೋರ್ಟ್ಸ್ ಬಟ್ಟೆಗಳ ಸಂಸ್ಥೆ ಜಿಮ್‌ಶಾರ್ಕ್ ಅನ್ನು ಆರಂಭಿಸಿದ್ದಾರೆ. ಈ ಸಂದರ್ಭದಲ್ಲೇ ತನ್ನ ಶೈಕ್ಷಣಿಕ ಜೀವನದಲ್ಲಿ ತೊಡಗಿಕೊಳ್ಳುವ ಜೊತೆ ಫಿಜ್ಜಾ ಡೆಲಿವರಿ ಕಾರ್ಯವನ್ನು ಮಾಡಿದ್ದಾರೆ. ಮೊದಲಾಗಿ ಯುನೈಟೆಡ್ ಕಿಂಗ್‌ಡಮ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ತನ್ನ ಪೋಷಕರ ಗ್ಯಾರೇಜ್‌ನಲ್ಲಿ ಕಾರ್ಯ ನಿರ್ವಹಣೆ ಆರಂಭ ಮಾಡಿದರೆ. ಬಳಿಕ ಜಿಮ್‌ಶಾರ್ಕ್ ಆರಂಭಿಸಿದ್ದರು, ಈ ಸಂಸ್ಥೆ 2021 ರಲ್ಲಿ 500 ಮಿಲಿಯನ್ ಡಾಲರ್‌ಗಿಂತಲೂ ಅಧಿಕ ಆದಾಯವನ್ನು ಗಳಿಸಿದೆ.
ಪಾಲ್ಮರ್ ಲಕ್ಕಿ: ಯುಎಸ್ ಪ್ರಜೆಯಾದ ಪಾಲ್ಮರ್ ಲಕ್ಕಿ ಸುಮಾರು 1.7 ಬಿಲಿಯನ್ ಡಾಲರ್ ಆದಾಯವನ್ನು ಹೊಂದಿದ್ದಾರೆ. ಸಣ್ಣ ವಯಸ್ಸಿನಲ್ಲೇ ಪಾಲ್ಮರ್ ಲಕ್ಕಿ ವಿಆರ್ ಹೆಡ್‌ಸೆಟ್ ತಯಾರಕ ಸಂಸ್ಥೆ ಒಕೊಲಸ್ ಅನ್ನು ಆರಂಭಿಸಿದ್ದಾರೆ. ಅದನ್ನು 2014 ರಲ್ಲಿ 2 ಬಿಲಿಯನ್ ಡಾಲರ್‌ಗೆ ಫೇಸ್‌ಬುಕ್ ಸಂಸ್ಥೆಗೆ ಮಾರಾಟ ಮಾಡಿದ್ದಾರೆ. ಪ್ರಸ್ತುತ ರಕ್ಷಣಾ ತಂತ್ರಜ್ಞಾನ ಕಂಪನಿ ಆಂಡೂರಿಲ್ ಅನ್ನು ಹೊಂದಿದ್ದಾರೆ. ಇದು ಡಿಒಡಿಗೆ ಡ್ರೋನ್‌ಗಳು ಮತ್ತು ಕಣ್ಗಾವಲು ತಂತ್ರಜ್ಞಾನಗಳನ್ನು ಒದಗಿಸುತ್ತದೆ. ಡಿಸೆಂಬರ್‌ನಲ್ಲಿ ಸಂಸ್ಥೆಯ ನಿವ್ವಳ ಆದಾಯ ಡಿಸೆಂಬರ್‌ನಲ್ಲಿ 8.5 ಬಿಲಿಯನ್ ಡಾಲರ್ ಆಗಿದೆ.
ಮಾರ್ಕ್ ಮ್ಯಾಟೆಸ್ಚಿಟ್ಜ್: ಜನಪ್ರಿಯ ಎನರ್ಜಿ ಡ್ರಿಕ್ ಸಂಸ್ಥೆಯಾದ ರೆಡ್ ಬುಲ್‌ನ ಸಹ ಸಂಸ್ಥಾಪಕ ಡೈಟ್ರಿಚ್ ಮಾಟೆಸ್ಚಿಟ್ಜ್ ಮರಣದ ನಂತರ ಅಕ್ಟೋಬರ್‌ನಲ್ಲಿ ಅವರ ಪುತ್ರ ಮಾರ್ಕ್ ಮ್ಯಾಟೆಸ್ಚಿಟ್ಜ್ ರೆಡ್ ಬುಲ್‌ನ ಶೇಕಡ 49ರಷ್ಟು ಪಾಲಿದಾರಿಕೆಯನ್ನು ಪಡೆದುಕೊಂಡಿದ್ದಾರೆ. ಸಂಸ್ಥೆಯಲ್ಲಿ ಷೇರುದಾರನಾಗಿ ಕಾರ್ಯನಿರ್ವಹಣೆ ಮೇಲೆ ಸರಿಯಾದ ಗಮನ ಹರಿಸುವ ನಿಟ್ಟಿನಲ್ಲಿ ಆರ್ಗಾನಿಕ್ಸ್ ಸಂಸ್ಥೆಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದರು. 30 ನೇ ವಯಸ್ಸಿನಲ್ಲಿ, ಮಾರ್ಕ್ ಮ್ಯಾಟೆಸ್ಚಿಟ್ಜ್ ನಿವ್ವಳ ಆದಾಯ 34.7 ಬಿಲಿಯನ್ ಡಾಲರ್ ಆಗಿದೆ.
ಮೈಕಲ್ ಸ್ಟ್ರನಾಡ್: ಉಕ್ರೇನ್ ಸೈನ್ಯಕ್ಕೆ ಮದ್ದುಗುಂಡುಗಳು, ಉಪಕರಣಗಳು ಮತ್ತು ಮಿಲಿಟರಿ ಸಾಧನಗಳನ್ನು ಒದಗಿಸುವ ಅತಿದೊಡ್ಡ ಪೂರೈಕೆದಾರರಲ್ಲಿ ಜೆಕೊಸ್ಲೊವಾಕ್ ಗ್ರೂಪ್ ಕೂಡಾ ಒಂದಾಗಿದೆ. ತನ್ನ ತಂದೆ ಆರಂಭ ಮಾಡಿದ ಈ ಸಂಸ್ಥೆಯ ನಿರ್ವಹಣೆಯನ್ನು ಸಂಪೂರ್ಣವಾಗಿ 2018 ರಲ್ಲಿ ಮೈಕಲ್ ಸ್ಟ್ರನಾಡ್ ವಹಿಸಿಕೊಂಡರು. 2022 ರ ಮೊದಲಾರ್ಧದಲ್ಲಿ ಸಂಸ್ಥೆಯಲ್ಲಿ ಮೂರು ಪಟ್ಟು ಹೆಚ್ಚು ಮಾರಾಟ ಕಂಡು ಬಂದಿದ್ದು, ನಿವ್ವಳ ಆದಾಯ 620 ಮಿಲಿಯನ್ ಡಾಲರ್ ದಾಟಿದೆ.
ಕ್ಲೆಮೆಂಟೆ ಡೆಲ್ ವೆಚಿಯೊ: ಲಿಯೊನಾರ್ಡೊ ಡೆಲ್ ವೆಚಿಯೊ ಜೂನ್ 2022 ರಲ್ಲಿ ನಿಧನರಾದರು. ಅದಾದ ಬಳಿಕ ಕ್ಲೆಮೆಂಟೆ ಡೆಲ್ ವೆಚಿಯೊ ಉತ್ತರಾಧಿಕಾರಿಯಾಗಿದ್ದಾರೆ. ಸನ್‌ಗ್ಲಾಸ್, ರೇ-ಬಾನ್, ಓಕ್ಲಿಯಂತಹ ಸಂಸ್ಥೆಗಳನ್ನು ಕ್ಲೆಮೆಂಟೆ ನಿರ್ವಹಣೆ ಮಾಡುತ್ತಿದ್ದಾರೆ. ಫೋರ್ಬ್ಸ್ ಪ್ರಕಾರ, ಇಟ್ಲೇಯ 18 ವರ್ಷದ ಯುವಕ 3.5 ಬಿಲಿಯನ್ ಡಾಲರ್ ನಿವ್ವಳ ಆದಾಯವನ್ನು ಹೊಂದಿದ್ದಾರೆ.
ಜಂಗ್-ಮಿನ್ ಕಿಮ್: ತಂದೆ ಕಿಮ್ ಜಂಗ್-ಜು ನಿಧನರಾದ ಬಳಿಕ ಜಂಗ್-ಮಿನ್ ಮತ್ತು ಅವರ ಕಿರಿಯ ಸಹೋದರಿ ಕಿಮ್ ಜಂಗ್-ಯೌನ್ ತಮ್ಮ ಕುಟುಂಬದ ಮೂರನೇ ಒಂದು ಭಾಗದಷ್ಟು ಸಂಪತ್ತಿನ ಪಾಲುದಾರಿಕೆಯನ್ನು ಹೊಂದಿದ್ದಾರೆ. ಇದರಲ್ಲಿ ಗೇಮ್ ಡೆವಲಪರ್ ನೆಕ್ಸಾನ್‌ನಲ್ಲಿ ಶೇಕಡ 15ರಷ್ಟು ಪಾಲು ಕೂಡಾ ಸೇರಿದೆ. ಈಕೆಯ ನಿಖರವಾದ ವಯಸ್ಸು ತಿಳಿದಿಲ್ಲ, ಆದರೆ ವರದಿ ಪ್ರಕಾರ ಆಕೆಗೆ 21 ವರ್ಷವಾಗಿದ್ದಿ, 1.7 ಬಿಲಿಯನ್ ಡಾಲರ್ ನಿವ್ವಳ ಆದಾಯವನ್ನು ಹೊಂದಿದ್ದಾರೆ.


Click it and Unblock the Notifications