ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್ 2023) ಅದ್ದೂರಿ ಉದ್ಘಾಟನೆಯು ಮಾರ್ಚ್ 4ರಂದು ನಡೆದಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ಸ್ಟಾರ್ ನಟ, ನಟಿಯರು ಪ್ರದರ್ಶನವನ್ನು ನೀಡಿದ್ದಾರೆ. ಕೃತಿ ಸನೊನ್ ಡ್ಯಾನ್ಸ್ ಮಾಡಿದರೆ, ಕಿಯಾರಾ ಅಡ್ವಾಣಿ ಕೂಡಾ ಕಂಡಿದ್ದಾರೆ. ಗಾಯಕ ಎ ಪಿ ದಿಲಾನ್ ಧನಿ ಮೊಳಗಿದೆ. ಮೊದಲ ಪಂದ್ಯ ಗುಜರಾತ್ ಗೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದಿದೆ. ಈ ನಡುವೆ ಮುಂಬೈ ಇಂಡಿಯನ್ಸ್ ಖರೀದಿ ಬಗ್ಗೆ ನಿಮಗೆ ಮಾಹಿತಿ ಇದೆಯೇ?.
ಒಟ್ಟಾಗಿ 20 ಲೀಗ್ ಆಟಗಳು ಮತ್ತು 20 ಪ್ಲೇಆಫ್ ಆಟಗಳನ್ನು ಒಟ್ಟು 23 ದಿನಗಳಲ್ಲಿ ಆಡಲಾಗುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ ಬಳಿಕ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ವಿಶ್ವದ ಅತೀ ದೊಡ್ಡ ಟಿ20 ಲೀಗ್‌ಗಳಲ್ಲಿ ಒಂದಾಗಿದೆ. ಮೊದಲ ಸ್ಥಾನದಲ್ಲಿ ಜನಮನಗೆದ್ದ ಐಪಿಎಲ್ ಇದೆ. ಕೆಲವು ತಂಡಗಳಿಂದ ಒಟ್ಟಾಗಿ 4669.99 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಹಾಗೆಯೇ ಬಿಸಿಸಿಐ 951 ಕೋಟಿ ರೂಪಾಯಿ ಮಾಧ್ಯಮ ಹಕ್ಕನ್ನು ಮಾರಾಟ ಮಾಡುತ್ತದೆ.

ಮುಂಬೈ ಇಂಡಿಯನ್ಸ್ ತಂಡ ಖರೀದಿ
ರಿಲಯನ್ಸ್ ಮಾಲೀಕತ್ವವನ್ನು ಹೊಂದಿರುವ ಮುಕೇಶ್ ಅಂಬಾನಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟಾಪ್ ಉತ್ತಮ ತಂಡವನ್ನು ಪಡೆದುಕೊಂಡಿದ್ದಾರೆ. ಈಗ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ತಂಡವನ್ನು ಖರೀದಿ ಮಾಡುವ ಪ್ರಪೋಸಲ್ ಅನ್ನು ಭಾರತದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಮುಂದಿಟ್ಟಿದ್ದಾರೆ. 912.99 ಕೋಟಿ ರೂಪಾಯಿಗೆ ಡೀಲ್ ಮಾಡಲು ಮುಂದಾಗಿದ್ದು, ವರದಿ ಪ್ರಕಾರ ಇದು ಅದಾನಿ ಗ್ರೂಪ್ ಬಳಿಕ ಎರಡನೇ ಅತೀ ದೊಡ್ಡ ಮೊತ್ತವಾಗಿದೆ.
ಐದು ತಂಡಗಳಾದ ದೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಗೈಂಟ್ಸ್, ಮುಂಬೈ ಇಂಡಿಯನ್ಸ್, ರೋಯಲ್ ಚಾಲೆಂಜರ್ಸ್ ಬೆಂಗಳೂರು, ಯುಪಿ ವಾರಿಯರ್ಸ್ ತಮ್ಮ ತಂಡಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಆಟಗಾರರನ್ನು ಆಯ್ಕೆ ಮಾಡುವಾಗ ಸಾಕಷ್ಟು ಮೊತ್ತವನ್ನು ತೆತ್ತಿದ್ದಾರೆ. ಭಾರತ ಜನಪ್ರಿಯ ಆಟಗಾರ್ತಿ ಸ್ಮೃತಿ ಮಂದಾನ ಅತೀ ದುಬಾರಿ ಬಿಡ್ಡಿಂಗ್‌ಗೆ ಒಳಗಾಗಿ, 3.40 ಕೋಟಿ ರೂಪಾಯಿಗೆ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ.
ಡಬ್ಲ್ಯೂಪಿಎಲ್ 2023ರಲ್ಲಿ ಯಾವುದು ದುಬಾರಿ ತಂಡ?
ಅಹಮದಾಬಾದ್ ತಂಡವು ಅತೀ ದುಬಾರಿ ತಂಡವಾಗಿದೆ. ಅದಾನಿ ಸ್ಪೋರ್ಟ್ಸ್‌ಲೈನ್ ಬರೋಬ್ಬರಿ 1289 ಕೋಟಿ ರೂಪಾಯಿಗೆ ತಂಡವನ್ನು ಖರೀದಿ ಮಾಡಿದೆ. 912.99 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮುಕೇಶ್ ಅಂಬಾನಿ ಖರೀದಿ ಮಾಡಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?



Click it and Unblock the Notifications