ಪ್ರಸ್ತುತ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುವವರ ಸಂಖ್ಯೆಯು ಅಧಿಕವಾಗುತ್ತಿದೆ. ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಜನರು ಸೋಶಿಯಲ್ ಮೀಡಿಯಾವನ್ನು ಬಳಕೆ ಮಾಡುತ್ತಿದ್ದಾರೆ. ನಗರ ಹಾಗೂ ಸಣ್ಣನ ಹಳ್ಳಿಯ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನವನ್ನು ಸಾಮಾಜಿಕ ಮಾಧ್ಯಮಗಳು ಮಾಡುತ್ತಿದೆ. ಅತ್ಯಂತ ದೂರದ ಗ್ರಾಮೀಣ ಪ್ರದೇಶಗಳನ್ನು ಸಹ ತಲುಪಲಾಗುತ್ತಿದೆ.
ಸಾಮಾಜಿಕ ಮಾಧ್ಯಮಗಳು ಗ್ರಾಮೀಣ ಪ್ರದೇಶಗಳ ಸುಪ್ತ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದೆ. ಇದಕ್ಕೆ ನಮಗೆ ಇರುವ ಉತ್ತಮ ಉದಾಹರಣೆ ಉತ್ತರ ಪ್ರದೇಶ ಮೂಲದ ಯಶೋದಾ ಲೋಧಿ ಆಗಿದ್ದಾರೆ. ತನ್ನ ಕೌಶಲ್ಯದ ಸಹಾಯದಿಂದ, ಈ ಮಹಿಳೆ ಬಡತನವನ್ನು ದೂರಮಾಡಿಕೊಂಡಿದ್ದಾರೆ. ಈಗ ಸರ್ಕಾರಿ ಉದ್ಯೋಗಿಗಳಿಗಿಂತ ಅಧಿಕ ಹಣವನ್ನು ಗಳಿಸುತ್ತಿದ್ದಾರೆ.

ಯಶೋದಾ ಲೋಧಿ ಯಾರು ತಿಳಿಯಿರಿ
ಯಶೋದಾ ಲೋಧಿಯನ್ನು 'ದೆಹತಿ ಮೇಡಂ' ಎಂದು ಕೂಡಾ ಕರೆಯಲಾಗುತ್ತದೆ. ಯಶೋಧ ಲೋಧಿ ಇಂಗ್ಲೀಷ್ ಶಿಕ್ಷಕಿಯಾಗಿದ್ದು ತನ್ನ 'ದೆಹತಿ ಮೇಡಂ' ಯೂಟ್ಯೂಬ್ ಚಾನೆಲ್ ಮೂಲಕ ಇಂಗ್ಲೀಷ್ ತರಗತಿಯನ್ನು ನಡೆಸುತ್ತಾರೆ. ಯಶೋದಾ ಲೋಧಿ ಉತ್ತರ ಪ್ರದೇಶದ ಕೌಶಾಂಬಿ ಪ್ರದೇಶಕ್ಕೆ ಸೇರಿದವರು ಆಗಿದ್ದಾರೆ.
ಫಸ್ಟ್ ಅಪಿಯರೆನ್ಸ್‌ನಲ್ಲಿ ಯಶೋದಾ ಲೋಧಿ ಗ್ರಾಮೀಣ ಪ್ರದೇಶಕ್ಕೆ ಸೇರಿದ ಟಿಪಿಕಲ್ ಭಾರತೀಯ ಮಹಿಳೆ ಎಂಬಂತೆ ಕಾಣುತ್ತಾರೆ. ಭಾರತದ ಹಿಂದೂ ಮಹಿಳೆಯರು ಹೇಗೆ ಸೀರೆಯನ್ನು ತೊಟ್ಟು, ಬಿಂದಿಯನ್ನು ಹಾಕಿರುತ್ತಾರೋ ಹಾಗೆಯೇ ಯಶೋದಾ ಲೋಧಿ ಕೂಡಾ ಕಾಣಿಸಿಕೊಳ್ಳುತ್ತಾರೆ. ಆದರೆ ಇತರೆ ಮಹಿಳೆಯರಿಗಿಂತ ಭಿನ್ನವಾಗಿದ್ದಾರೆ, ಯಶೋದಾ ಲೋಧಿ.
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ, ಯಶೋದಾ ಲೋಧಿ ಇಂಗ್ಲಿಷ್ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವಂತಹ ಸರಳವಾದ ವೀಡಿಯೋವನ್ನು ಪಬ್ಲಿಷ್ ಮಾಡುತ್ತಾರೆ. ಯಶೋದಾ ಲೋಧಿ ತನ್ನಂತೆಯೇ ಇತರರಿಗೆ ಇರುವ ಭಾಷಾ ತಡೆಯನ್ನು ನಿವಾರಿಸಲು ಸಹಾಯ ಮಾಡುತ್ತಿದ್ದಾರೆ. ಸರಳವಾಗಿ ಇಂಗ್ಲೀಷ್ ಭಾಷೆಯನ್ನು ಯಾವ ರೀತಿ ಕಲಿಯಲು ಸಾಧ್ಯವೆಂಬುವುದನ್ನು ತನ್ನ ಯೂಟ್ಯೂಬ್ ಚಾನೆಲ್ ಮೂಲಕ ವಿವರಿಸುತ್ತಾರೆ.
ಯಶೋದಾ ಲೋಧಿ/ ದೇಹತಿ ಮೇಡಮ್‌ರ ಸ್ಪೂರ್ತಿದಾಯಕ ಯಶೋಗಾಥೆ
ಯಶೋದಾ ಲೋಧಿ ಬೆಳೆದದ್ದು ಸಾಧಾರಣ ಮನೆಯಲ್ಲಿ. ಯಶೋದಾ ಲೋಧಿ ತನ್ನ ತಾಯಿಯ ಚಿಕ್ಕಪ್ಪನ ಮನೆಯಲ್ಲಿ ಬೆಳೆದಿದ್ದಾರೆ. ಅಲ್ಲಿ ಯಶೋದಾ ಲೋಧಿ ಹಿಂದಿಯಲ್ಲಿ 12 ನೇ ತರಗತಿಯವರೆಗೆ (ದ್ವಿತೀಯ ಪಿಯುಸಿ) ಶಾಲೆಯಲ್ಲಿ ಓದಿದ್ದಾಳೆ. ಹಿಂದಿ ಮೀಡಿಯಂ ಮೂಲಕ 12ನೇ ಗ್ರೇಡ್ ಅನ್ನು ಕಲಿತ ಬಳಿಕ ಯಶೋದಾ ಲೋಧಿ ಮಕ್ಕಳಿಗೆ ಪಾಠ ಹೇಳಲು ಆರಂಭಿಸಿದ್ದಾರೆ.
ಈ ಅವಧಿಯಲ್ಲಿ ತನ್ನ ಬಾಳ ಸಂಗಾತಿಯನ್ನು ಯಶೋದಾ ಲೋಧಿ ಭೇಟಿಯಾಗಿದ್ದಾರೆ. ಆದರೆ ಅವರ ಸಂಬಂಧಕ್ಕೆ ಕುಟುಂಬವು ಬೆಂಬಲವನ್ನು ನೀಡಿಲ್ಲ. ಯಶೋದಾ ಲೋಧಿಯನ್ನು ಆಕೆಯ ಕಿರಿಯ ಸಹೋದರ ಆಸ್ತಿಯ ಆಸೆಯಿಂದ ಮನೆಯಿಂದಲೇ ಹೊರ ಹಾಕಿದರು. ಆಗ ಪೋಷಕರ ಮನೆಗೆ ಯಶೋದಾ ಲೋಧಿ ಹೋಗಿದ್ದಾರೆ, ಆದರೆ ಇವರ ಪ್ರೇಮ ಸಂಬಂಧವನ್ನು ಪೋಷಕರು ಕೂಡಾ ಒಪ್ಪಿಲ್ಲ.
ಯಾರಿಂದಲೂ ಬೆಂಬಲ ದೊರೆಯದ ಕಾರಣದಿಂದಾಗಿ ಯಶೋದಾ ಲೋಧಿ ತಾನಾಗಿಯೇ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ತನ್ನ ಗೆಳೆಯನೊಂದಿಗೆ ವಿವಾಹವಾಗಿದ್ದಾರೆ. ಆದರೆ ಆಕೆಯ ಪತಿಯ ಮನೆಯವರು ಕೂಡಾ ಈ ಸಂಬಂಧವನ್ನು ಒಪ್ಪಿಲ್ಲ. ಅದಾದ ಬಳಿಕ ಯಶೋದಾ ಹಾಗೂ ಆಕೆಯ ಪತಿ ಪ್ರತ್ಯೇಕವಾಗಿ ವಾಸಿಸಲು ಆರಂಭ ಮಾಡಿದ್ದಾರೆ.
ಯಶೋದಾರ ಪತಿ 8ನೇ ತರಗತಿವರೆಗೆ ಕಲಿತಿದ್ದಾರೆ, ದಿನಕೂಲಿ ಕೆಲಸಗಾರರಾಗಿದ್ದಾರೆ. ಮದುವೆಯಾದ ಎರಡು ವರ್ಷಗಳ ನಂತರ, 2019 ರಲ್ಲಿ ಯಶೋದಾರ ಪತಿಯ ಕಾಲು ಟ್ರ್ಯಾಕ್ಟರ್ ಅಡಿಯಲ್ಲಿ ಸಿಕ್ಕಿಬಿದಿದ್ದು, ಕಾಲು ಕಳೆದುಕೊಂಡಿದ್ದಾರೆ. ಈಗ ಯಶೋದಾರ ಪತಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ಯಶೋದಾಗೆ ಹಣದ ಮೌಲ್ಯದ ಬಗ್ಗೆ ಅರಿವಾಗಿದೆ.
ಯಶೋದಾ ನವೆಂಬರ್ 2021 ರಲ್ಲಿ ಮೊದಲ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿದರು. ಅದಾದ ಬಳಿಕ ಸ್ಪೂರ್ತಿದಾಯಕ ವೀಡಿಯೊಗಳನ್ನು ನೋಡಿದ ನಂತರ ತಾನು ಕೂಡಾ ವೀಡಿಯೊಗಳನ್ನು ಮಾಡಲು ಪ್ರಾರಂಭ ಮಾಡಿದ್ದಾರೆ. ಮಹಿಳೆಯರು ಮನೆಯಿಂದಲೇ ಹೇಗೆ ಕೆಲಸ ಮಾಡಬಹುದು ಮತ್ತು ಹಣ ಸಂಪಾದಿಸಬಹುದು ಎಂಬುದನ್ನು ಸಂದೀಪ್ ಮಹೇಶ್ವರಿ ಚರ್ಚಿಸುತ್ತಿರುವ ವೀಡಿಯೊದಿಂದ ಅವರು ಪ್ರೇರೇಪಿತರಾಗಿ ತಾನು ಕೂಡಾ ವಿಡಿಯೋ ಮಾಡಲು ಆರಂಭಿಸಿದ್ದಾರೆ.
ಯಶೋದಾ ತನ್ನ ಸ್ವಂತ ಲಾಭಕ್ಕಾಗಿ ತಂತ್ರಜ್ಞಾನವನ್ನು ಹೇಗೆ ಬಳಸಬೇಕೆಂದು ಕಲಿತರು. ಯಶೋದಾ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಹಳ್ಳಿಯ ಮಹಿಳೆಯರಿಗೆ ಪ್ರೇರಣೆ ನೀಡುವ ವಿಡಿಯೋವನ್ನು ಮಾಡಿ ಹಾಕಲು ಆರಂಭ ಮಾಡಿದರು. ಇಂಗ್ಲಿಷ್ ಕಲಿಯುವುದು ಮತ್ತು ಮಾತನಾಡುವುದು ಹೇಗೆ ಎಂದು ಇತರರಿಗೆ ವಿಡಿಯೋ ಮೂಲಕ ಕಲಿಸಲು ಆರಂಭ ಮಾಡಿದರು.
ಯಶೋದಾ "ದೇಹತಿ ಮೇಡಮ್" ಎಂದು ಕರೆಯಲ್ಪಟ್ಟರು. ಅಧಿಕ ವಿಡಿಯೋವನ್ನು ಚಿತ್ರೀಕರಿಸುತ್ತಾ ಹೋದಂತೆ ಅವರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದರು. ಪತಿ ಕೂಲಿ ಕಾರ್ಮಿಕನಾಗಿದ್ದಾಗ ಕೇವಲ 300 ರೂಪಾಯಿಯನ್ನು ಮಾತ್ರ ಗಳಿಕೆ ಇತ್ತು. 7 ಅಥವಾ 8 ಜನರಿರುವ ತನ್ನ ಕುಟುಂಬವನ್ನು ಈ ಹಣದಿಂದಲೇ ಸಾಗಿಸಲಾಗುತ್ತಿತ್ತು.
ಯಶೋದಾ ಲೋಧಿ ತಮ್ಮ ಶ್ರಮದಿಂದ ಎಷ್ಟು ದೂರ ಹೋಗಿದ್ದಾರೆ ಸಾಗಿದ್ದಾರೆ ಎಂದರೆ ಈಗ 2 ಲಕ್ಷ ಸದಸ್ಯರನ್ನು ಹೊಂದಿದ್ದಾರೆ. ಮಾಸಿಕವಾಗಿ 70 ಸಾವಿರ ರೂಪಾಯಿಯಿಂದ 80 ಸಾವಿರ ರೂಪಾಯಿವರೆಗೆ ಸಂಪಾದನೆಯನ್ನು ಮಾಡುತ್ತಿದ್ದಾರೆ. ವರದಿಯ ಪ್ರಕಾರ ಈ ಸಂಪಾದನೆಯು ಹಳ್ಳಿಯಲ್ಲಿ ಸರ್ಕಾರಿ ಉದ್ಯೋಗಿಗಳು ಗಳಿಸುವ ಆದಾಯಕ್ಕಿಂತ ಅಧಿಕವಾಗಿದೆ.
More From GoodReturns

ಎಲ್ಲ ಹಣವನ್ನೂ ಒಂದೇ ಬ್ಯಾಂಕ್ನಲ್ಲಿ ಇಡ್ತಿದ್ದೀರಾ? ಒಂದು ತಪ್ಪು ನಿಮ್ಮ ಸಂಪೂರ್ಣ ಉಳಿತಾಯಕ್ಕೆ ಅಪಾಯ!

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!



Click it and Unblock the Notifications