ಇನ್ನು ಕೆಲವೇ ದಿನಗಳಲ್ಲಿ 2023ನೇ ವರ್ಷ ಮುಗಿಯಲಿದೆ. ಹಾಗೆಯೇ 2024 ಹೊಸ ವರ್ಷ ಆರಂಭವಾಗಲಿದೆ. ಈ ನಡುವೆ 2023ರ ಕೆಲವು ವಿಶಿಷ್ಟ, ಆಶ್ಚರ್ಯಕರ ವಿಚಾರಗಳನ್ನು ನಾವು ವಿವರಿಸುತ್ತಾ ಬರುತ್ತಿದ್ದೇವೆ. ಈ ವರ್ಷ ಹಲವಾರು ಪ್ರಸಿದ್ಧ ವ್ಯಕ್ತಿಗಳು ಹೊಸದಾಗಿ ಕಾರುಗಳನ್ನು ಖರೀದಿ ಮಾಡಿದ್ದಾರೆ.
ಆಲಿಯಾ ಭಟ್‌ನಿಂದ ಹಿಡಿದು ಶ್ರದ್ಧಾ ಕಪೂರ್‌ವರೆಗೆ ಹಲವು ಬಾಲಿವುಡ್ ನಟಿಯರು ಈ ವರ್ಷ ಐಷಾರಾಮಿ ಕಾರುಗಳನ್ನು ತಮಗೆ ತಾವು ಉಡುಗೊರೆಯಾಗಿ ನೀಡಿದ್ದಾರೆ. 2023 ರಲ್ಲಿ ತಮ್ಮ ಗ್ಯಾರೇಜ್‌ಗೆ ಐಷಾರಾಮಿ ಕಾರುಗಳನ್ನು ತಂದಿರಿಸಿದ ನಟಿಯರ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಆಲಿಯಾ ಭಟ್‌ನ ಕಾರು
ನಟಿ ಆಲಿಯಾ ಭಟ್‌ಗೆ ಈ ವರ್ಷ ಸಾಕಷ್ಟು ಕನಸುಗಳು ನೆರವೇರಿದೆ. ಸಂಜಯ್ ಲೀಲಾ ಬನ್ಸಾಲಿಯವರ 'ಗಂಗೂಬಾಯಿ ಕಥಿಯಾವಾಡಿ' ಚಿತ್ರಕ್ಕಾಗಿ ತನ್ನ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೊತೆಗೆ ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ ಎಲ್‌ಡಬ್ಲ್ಯೂಬಿ ಐಷಾರಾಮಿ ಎಸ್‌ಯುವಿಯನ್ನು ಈ ವರ್ಷವೇ ಖರೀದಿಸಿದ್ದಾರೆ. ಹಾಗೆಯೇ 3 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಕಾರ್ಪಾಥಿಯನ್ ಗ್ರೇ ಮಾಡೆಲ್ ಖರೀದಿಸಿದ್ದಾರೆ.
ಶ್ರದ್ಧಾ ಕಪೂರ್‌ನ ಕಾರು ಖರೀದಿ
ನಟಿ ಶ್ರದ್ಧಾ ಕಪೂರ್ ಅವರು ದಸರಾ 2023 ರ ಶುಭ ಸಂದರ್ಭದಲ್ಲಿ ಅದ್ದೂರಿ, ಐಷಾರಾಮಿ ಕೆಂಪು ಲಂಬೋರ್ಘಿನಿ ಹುರಾಕನ್ ಟೆಕ್ನಿಕಾವನ್ನು ಖರೀದಿಸಿದ್ದಾರೆ. ಸ್ತ್ರೀ ನಟಿ ಈ ವರ್ಷ ಹೆಚ್ಚು ಐಷಾರಾಮಿಯಾಗಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿಯವರ ದೀಪಾವಳಿ ಸಮಾರಂಭದಲ್ಲಿ ತಮ್ಮ ಕೆಂಪು ಲಂಬೋರ್ಘಿನಿಯಲ್ಲಿ ಎಂಟ್ರಿ ನೀಡಿದ್ದಾರೆ. ಇದರ ಮೌಲ್ಯ 4.04 ಕೋಟಿ ರೂಪಾಯಿ ಆಗಿದೆ.
ಪೂಜಾ ಹೆಗ್ಡೆ ಐಷಾರಾಮಿ ಕಾರು
ಪೂಜಾ ಹೆಗ್ಡೆ ಅವರು 4 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಐಷಾರಾಮಿ ಎಸ್‌ಯುವಿಯನ್ನು ಖರೀದಿ ಮಾಡಿದರು. ಅದೇ ಬ್ರಾಂಡ್ ಅನ್ನು ಹೊಂದಿರುವ ಇತರ ಸೆಲೆಬ್ರಿಟಿಗಳೆಂದರೆ ರಣಬೀರ್ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಸೋನಮ್ ಕಪೂರ್.
ಜಾಕ್ವೆಲಿನ್ ಫರ್ನಾಂಡಿಸ್ ಬಳಿಯಿದೆ ಈ ಕಾರು
ಜಾಕ್ವೆಲಿನ್ ಫರ್ನಾಂಡಿಸ್ ಕಾರುಗಳ ದೊಡ್ಡ ಸಂಗ್ರಹ ಹೊಂದಿದ್ದಾರೆ. ಈ ವರ್ಷ ಅವರು ಹೊಸ ಬಿಎಂಡಬ್ಲ್ಯೂ i7 ಎಲೆಕ್ಟ್ರಿಕ್ ಐಷಾರಾಮಿ ಸೆಡಾನ್ ಅನ್ನು 2 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. 'ಕಿಕ್' ನಟಿ ಹಲವಾರು ಸಂದರ್ಭಗಳಲ್ಲಿ ತನ್ನ ಹೊಸ ಕಾರಲ್ಲಿ ಕಂಡುಬರುತ್ತಾರೆ.
ರಾಕುಲ್ ಪ್ರೀತ್ ಸಿಂಗ್ ಕಾರುಗಳು
ರಾಕುಲ್ ಅವರು ಕಪ್ಪು ಶೇಡ್‌ನ ಮರ್ಸಿಡಿಸ್-ಮೇಬ್ಯಾಕ್ ಜಿಎಸ್‌ಎಸ್600 ಎಸ್‌ಯುವಿ ಅನ್ನು ಖರೀದಿಸಿದ್ದಾರೆ. ದೀಪಿಕಾ ಪಡುಕೋಣೆ, ಕೃತಿ ಸನೋನ್, ಅಜಯ್ ದೇವಗನ್ ಮತ್ತು ಅರ್ಜುನ್ ಕಪೂರ್ ಅವರಂತಹ ಸೆಲೆಬ್ರಿಟಿಗಳು ಬೇರೆ ಬೇರೆ ಮಾಡೆಲ್‌ಗಳ ಒಂದೇ ಬ್ರಾಂಡ್ ಅನ್ನು ಹೊಂದಿದ್ದಾರೆ.
ಚಾಹತ್ ಖನ್ನಾ ಕಾರುಗಳ ವಿವರ
ನಟಿ ಚಾಹತ್ ಖನ್ನಾ ಅವರು ಈ ವರ್ಷ ಹೊಸ ಕಪ್ಪು ಕಾರಿನ ಮಾಲೀಕರಾಗಿದ್ದಾರೆ. ಆಡಿ A6 ಅನ್ನು ಖರೀದಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕಾರಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಹೊಸ ಕಾರು ಖರೀದಿಸಿದ ನಂತರ ತಮ್ಮ ಮಗಳೊಂದಿಗೆ ಕೇಕ್ ಕಟ್ ಮಾಡಿಕೊಂಡಿದ್ದಾರೆ.


Click it and Unblock the Notifications