ಈ ವರ್ಷ ಅಂದರೆ 2023 ಕೊನೆಯಾಗುತ್ತಿದೆ. ಇನ್ನು 2024 ವರ್ಷ ಆರಂಭವಾಗಲು ಇನ್ನು ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿದೆ. ಹೊಸ ವರ್ಷಕ್ಕಾಗಿ ನೀವು ಈಗಾಗಲೇ ತಯಾರಿಯನ್ನು ಮಾಡುತ್ತಿದ್ದೀರಾ?. ಹಾಗಾದರೆ ನಿಮಗೆ ಇಲ್ಲಿ ಕೆಲವು ಪ್ರವಾಸಿ ತಾಣಗಳ ಪರಿಚಯವನ್ನು ನಾವು ಮಾಡುತ್ತೇವೆ ನೋಡಿ.
ಆದರೆ ಭಯಪಡಬೇಡಿ, ಬಜೆಟ್ ಸ್ನೇಹಿ ಪ್ರವಾಸಿ ಸ್ಥಳಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡಿದ್ದೇವೆ. 2024 ರ ಆಗಮನವಾಗುವಾಗ ನಾವು ಬ್ಯಾಂಕ್‌ನಲ್ಲಿಟ್ಟಿರುವ ಹಣವನ್ನೆಲ್ಲ ಖಾಲಿ ಮಾಡಬೇಕಾಗಿಲ್ಲ. ಸಾಲವನ್ನು ಕೂಡಾ ಪಡೆಯಬೇಕಾದ ಸ್ಥಿತಿ ಬಾರದು. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಬೀಚ್‌ಗಳಿಗೆ ಬೆಸ್ಟ್ ಪ್ಲೇಸ್‌ಗಳಿವು
ಗೋವಾ: ಈ ಕರಾವಳಿ ಪ್ರದೇಶವಾದ ಗೋವಾದಲ್ಲಿ ನಾವು ಕಡಿಮೆ ಖರ್ಚಿನಲ್ಲಿ ಬಜೆಟ್ ಸ್ನೇಹಿ ಹೊಸ ವರ್ಷವನ್ನು ಆಚರಣೆ ಮಾಡಬಹುದಾಗಿದೆ. ಲೈವ್ ಸಾಂಗ್, ಡಿಜೆಗಳು, ಪಾರ್ಟಿಗಳನ್ನು ನಾವು ಬೀಚ್‌ನಲ್ಲಿ ಕಾಣಬಹುದು. ಅದಕ್ಕಾಗಿ ಬೇರೆ ಬೇರೆ ಪ್ಯಾಕೇಜ್‌ಗಳು ಲಭ್ಯವಿರುತ್ತದೆ.
ಗೋಕರ್ಣ, ಕರ್ನಾಟಕ: ಗೋವಾದಂತೆಯೇ ಕರ್ನಾಟಕದಲ್ಲಿಯೂ ಬೀಚ್‌ಗಳಿದೆ. ಅದು ಕೂಡಾ ಕಡಿಮೆ ದರದಲ್ಲಿ ನೀವು ಎಂಜಾಯ್ ಮಾಡಬಹುದು. ಗೋಕರ್ಣದಲ್ಲಿ ಏಕಾಂತ ಕಡಲತೀರಗಳು, ಕೈಗೆಟುಕುವ ಅತಿಥಿಗೃಹಗಳು ಮತ್ತು ಪಾರ್ಟಿಗಳನ್ನು ಮಾಡಬಹುದಾಗಿದೆ.
ಪಾಂಡಿಚೇರಿ: ಈ ಫ್ರೆಂಚ್ ವಸಾಹತುಶಾಹಿ ಪಟ್ಟಣವು ಯುರೋಪಿಯನ್ ಮೋಡಿ ಮತ್ತು ಭಾರತೀಯ ನೋಟದ ಮಿಶ್ರಣವನ್ನು ಹೊಂದಿದೆ. ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳು, ಬಜೆಟ್ ಸ್ನೇಹಿ ಆಗಿದೆ.
ಪ್ರಕೃತಿ ಪ್ರಿಯರಿಗೆ ಇಲ್ಲಿದೆ ಆಯ್ಕೆ
ವಯನಾಡ್, ಕೇರಳ: ಟ್ರೆಕ್ಕಿಂಗ್, ಜಲಪಾತಗಳು ಮತ್ತು ವನ್ಯಜೀವಿ ಅಭಯಾರಣ್ಯವಿರುವ ವಯನಾಡು ಹಚ್ಚ ಹಸಿರಿನಿ ಪ್ರದೇಶವಾಗಿದೆ. ಬಜೆಟ್ ಸ್ನೇಹಿ ಹೋಂಸ್ಟೇಗಳು ಇಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುತ್ತದೆ.
ತೀರ್ಥನ್ ಕಣಿವೆ, ಹಿಮಾಚಲ ಪ್ರದೇಶ: ಜನಸಂದಣಿಯನ್ನು ತಪ್ಪಿಸಿ ಮತ್ತು ತೀರ್ಥನ್ ಕಣಿವೆಯ ಹಿಮದಿಂದ ಆವೃತವಾದ ಪರ್ವತಗಳ ನಡುವೆ ಶಾಂತಿಯನ್ನು ನೀವು ಕಂಡುಕೊಳ್ಳಬಹುದು. ಹಿಮಾಲಯದ ಮೂಲಕ ಚಾರಣ ಮಾಡಬಹುದು. ಕೈಗೆಟುಕುವ ಅತಿಥಿ ಗೃಹಗಳಲ್ಲಿ ಸ್ಥಳೀಯ ಭಕ್ಷ್ಯಗಳನ್ನು ಆನಂದಿಸಬಹುದು.
ಮುನ್ನಾರ್, ಕೇರಳ: ಮುನ್ನಾರ್‌ನಲ್ಲಿ ಬೆಟ್ಟಗಳು, ಚಹಾ ತೋಟಗಳು ಮತ್ತು ಜಲಪಾತಗಳಿದೆ. ಬಜೆಟ್ ಸ್ನೇಹಿ ಅತಿಥಿ ಗೃಹಗಳು ಮತ್ತು ಹೋಮ್‌ಸ್ಟೇಗಳು ಇಲ್ಲಿ ಸುಂದರವಾಗಿದೆ.
ನಗರ ಪ್ರೇಮಿಗಳಿಗೆ ಇದು ಬೆಸ್ಟ್ ಸ್ಥಳ
ಬೆಂಗಳೂರು, ಕರ್ನಾಟಕ: ಭಾರತದ ಐಟಿ ರಾಜಧಾನಿಯಾದ ಬೆಂಗಳೂರಿನಲ್ಲಿ ರೂಫ್‌ಟಾಪ್ ಪಾರ್ಟಿಗಳು, ಪಬ್ ಪಾರ್ಟಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನೀವು ಹೊಸ ವರ್ಷ ಆಚರಿಸಬಹುದಾಗಿದೆ. ಕೈಗೆಟುಕುವ ಹಾಸ್ಟೆಲ್‌ಗಳು ಮತ್ತು ಅತಿಥಿ ಗೃಹಗಳು ನಿಮಗೆ ಲಭ್ಯವಾಗುತ್ತದೆ.
ಕೋಲ್ಕತ್ತಾ, ಪಶ್ಚಿಮ ಬಂಗಾಳ: ಸಾಂಪ್ರದಾಯಿಕ ಸ್ಟ್ರೀಟ್ ಫುಡ್ ಆನಂದಿಸಿ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ನೀವು ಹೊಸ ವರ್ಷವನ್ನು ಆಚರಣೆ ಮಾಡಬಹುದಾಗಿದೆ. ಬಜೆಟ್ ಸ್ನೇಹಿ ಆಯ್ಕೆಗಳಲ್ಲಿ ಸಾಂಪ್ರದಾಯಿಕ ಅತಿಥಿ ಗೃಹಗಳು ಮತ್ತು ಹೆರಿಟೇಜ್ ಹೋಟೆಲ್‌ಗಳು ಸೇರಿವೆ.
ವಾರಣಾಸಿ, ಉತ್ತರ ಪ್ರದೇಶ: ವಾರಣಾಸಿಯಲ್ಲಿ ವಿಶಿಷ್ಟ ಮತ್ತು ಆಧ್ಯಾತ್ಮಿಕವಾಗಿ ಹೊಸ ವರ್ಷವನ್ನು ಆಚರಣೆ ಮಾಡಬಹುದು. ಕೈಗೆಟುಕುವ ಬೆಲೆಯ ಅತಿಥಿ ಗೃಹಗಳು ಮತ್ತು ಹೋಮ್‌ಸ್ಟೇಗಳು ಇಲ್ಲಿ ಲಭ್ಯವಾಗುತ್ತದೆ.
ಬಜೆಟ್ ಸ್ನೇಹಿ ಹೊಸ ವರ್ಷದ ಸಲಹೆಗಳು:
* ಉತ್ತಮ ಡೀಲ್‌ಗಳನ್ನು ಪಡೆಯಲು ನಿಮ್ಮ ಪ್ರವಾಸವನ್ನು ಯೋಜಿಸಿ ಮತ್ತು ನಿಮ್ಮ ವಸತಿ ಸೌಕರ್ಯವನ್ನು ಸಮಯಕ್ಕಿಂತ ಮುಂಚಿತವಾಗಿ ಕಾಯ್ದಿರಿಸಿ
* ಗರಿಷ್ಠ ಬೆಲೆಯನ್ನು ಪಾವತಿ ಮಾಡಬಾರದು ಎಂದಾದರೆ ಆಫ್-ಸೀಸನ್ ಸಮಯದಲ್ಲಿ ಪ್ರಯಾಣವನ್ನು ಮಾಡಿ
* ಹಾಸ್ಟೆಲ್‌ಗಳು, ಅತಿಥಿ ಗೃಹಗಳು ಅಥವಾ ಹೋಂಸ್ಟೇಗಳಂತಹ ಶೇರಿಂಗ್ ವಸತಿ ಆಯ್ಕೆಗಳನ್ನು ಆರಿಸಿಕೊಳ್ಳಿ
* ರುಚಿಕರವಾದ ಮತ್ತು ಬಜೆಟ್ ಸ್ನೇಹಿ ಊಟಕ್ಕಾಗಿ ಸ್ಥಳೀಯ ಮಾರುಕಟ್ಟೆಗಳು ಮತ್ತು ಬೀದಿ ಆಹಾರ ಮಳಿಗೆಗಳಿಗೆ ಹೋಗಿ
* ಅನೇಕ ನಗರಗಳಲ್ಲಿ ಆಯೋಜಿಸಲಾದ ಉಚಿತ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಲಾಭವನ್ನು ಪಡೆದುಕೊಳ್ಳಿ
* ಬ್ಯಾಗೇಜ್ ಶುಲ್ಕಗಳು ಮತ್ತು ವೆಚ್ಚಗಳನ್ನು ತಪ್ಪಿಸಲು ಕಡಿಮೆ ಪ್ಯಾಕ್ ಮಾಡಿ.


Click it and Unblock the Notifications