ಪ್ರಸ್ತುತ ನಾವು 2023ರ ಕೊನೆಯ ತಿಂಗಳಿನಲ್ಲಿ ಇದ್ದೇವೆ. ಇನ್ನು ಹೊಸ ವರ್ಷಕ್ಕೆ ಕೆಲವೇ ವಾರಗಳು ಬಾಕಿ ಉಳಿದಿದೆ. ಈಗಾಗಲೇ ಈ ವರ್ಷದಲ್ಲಿ ವರ್ಕ್ ಫ್ರಮ್ ಹೋಮ್ ಮಾಡಲು ಬಯಸುವವರ ಸಂಖ್ಯೆಯು ಅಧಿಕವಾಗುತ್ತಾ ಸಾಗುತ್ತಿದೆ. ಆದರೆ ಯಾವುದೇ ಒಂದು ಸಂಸ್ಥೆಯ ಅಡಿಯಲ್ಲಿ ಇಲ್ಲದೆ ನೀವಾಗಿಯೇ ವರ್ಕ್ ಫ್ರಮ್ ಹೋಮ್ ಮಾಡಿ ಸಂಪಾದಿಸುವ ವಿಧಾನ ನಿಮಗೆ ತಿಳಿದಿದೆಯೇ?
ಪ್ರಸ್ತುತ ಎಲ್ಲ ಅಗತ್ಯ ವಸ್ತುಗಳ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಿರುವಾಗ ಮನೆಯಲ್ಲಿಯೇ ಇದ್ದು, ಯಾವುದೇ ಪ್ರಯಾಣದ ಖರ್ಚು, ವೆಚ್ಚಗಳು ಇಲ್ಲದೆ ಹಣ ಸಂಪಾದಿಸುವುದನ್ನು ಈಗಲೇ ತಿಳಿಯಿರಿ, ಹೊಸ ವರ್ಷದಿಂದ ಇದನ್ನು ಆರಂಭಿಸಿ, ಇಲ್ಲಿದೆ ವಿವರ ಮುಂದೆ ಓದಿ....

1. ಆನ್‌ಲೈನ್‌ನಲ್ಲಿ ವಸ್ತು ಮಾರಾಟ
ಇದು ಇಂದು ಮಾಡಲಾಗುತ್ತಿರುವ ಅತೀ ಸುಲಭ ಮತ್ತು ಅತೀ ಕಾಮನ್ ಉದ್ಯಮವಾಗಿದೆ. ಹಲವಾರು ಗೃಹಿಣಿಯರು ಈ ಹಣ ಸಂಪಾದನೆ ಮಾರ್ಗವನ್ನು ಪಾಲಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಇ-ಕಾಮರ್ಸ್ ಪಾಪ್ಯುಲರ್ ಆಗುತ್ತಿದೆ. ನೀವು ಆನ್‌ಲೈನ್ ಶಾಫಿಪೈ (Shopify) ನಂತಹ ಆಪ್‌ಗಳ ಮೂಲಕ ಆನ್‌ಲೈನ್ ಸ್ಟೋರ್ ಅನ್ನು ತೆರೆಯಬಹುದು. ನೀವೇ ತಯಾರಿಸಿದ ವಸ್ತುಗಳನ್ನು ಕೂಡಾ ಸಾಮಾಜಿಕ ಜಾಲತಾಣದ ಮೂಲಕ ಮಾರಾಟ ಮಾಡಬಹುದು.
2. ಬ್ಲಾಗಿಂಗ್/ ಯೂಟ್ಯೂಬ್ ವಿಡಿಯೋ
ಇಂದು ಹಣ ಸಂಪಾದನೆಗೆ ಇನ್ನೊಂದು ಸಾಮಾನ್ಯ ವಿಧಾನ ಬ್ಲಾಗಿಂಗ್/ ಯೂಟ್ಯೂಬ್ ವಿಡಿಯೋ ಆಗಿದೆ. ಈ ವಿಡಿಯೋ ಯೂಟ್ಯೂಬ್‌ಗೆ ಸೀಮಿತವಾಗಿಲ್ಲ. ಬದಲಾಗಿ ಇನ್‌ಸ್ಟಾ ಗ್ರಾಂ ರೀಲ್ಸ್ ಟ್ರೆಂಡ್ ಕೂಡಾ ಇದೆ. ನೀವು ನಿರ್ದಿಷ್ಟ ಒಂದು ವಿಚಾರದಲ್ಲಿ ಅತೀ ಆಸಕ್ತಿಯನ್ನು ಹೊಂದಿದ್ದರೆ ಅದರ ಬಗ್ಗೆ ಬರೆಯಬಹುದು. ಅದನ್ನು ಬ್ಲಾಗಿಂಗ್ ಎನ್ನುತ್ತಾರೆ.
ಇದನ್ನು ಹೊರತುಪಡಿಸಿ ನೀವು ಮನೆಯಲ್ಲಿಯೇ ಇದ್ದು, ಅಡುಗೆ ಮಾಡಿ, ಕ್ರಾಫ್ಟ್ ಮಾಡಿ, ಕೇಕ್ ಮಾಡಿ ಮೊದಲಾದವುಗಳ ವಿಡಿಯೋ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ ಒಳ್ಳೆಯ ವೀವ್ಸ್, ಲೈಕ್ಸ್ ಬಂದರೆ ಹಣ ಸಂಪಾದಿಸಬಹುದು. ಪ್ರಸ್ತುತ ಹಲವು ಮಂದಿಯ ಬಿಜಿನೆಸ್ ಇದಾಗಿದೆ. ಜಾಹೀರಾತು, ಸ್ಪಾನ್ಸರ್‌ಶಿಪ್ ಮೂಲಕವೂ ಹಣ ಸಂಪಾದಿಸುತ್ತಿದ್ದಾರೆ. ಆದರೆ ನಿಮ್ಮ ವಿಡಿಯೋ ಫೇಮಸ್ ಆಗಲು ಸ್ವಲ್ಪ ಸಮಯ ಬೇಕಾಗಬಹುದು.
3. ವರ್ಚುವಲ್ ಅಸಿಸ್ಟಿಂಗ್ ಬಗ್ಗೆ ತಿಳಿದಿದೆಯೇ?
ಅಪಾಯಿಂಟ್‌ಮೆಂಟ್ ನೀಡಲು, ಪ್ರವಾಸಕ್ಕೆ ವ್ಯವಸ್ಥೆ ಮಾಡಲು, ಇಮೇಲ್‌ಗಳನ್ನು ನಿರ್ವಹಣೆ ಮಾಡುವ ಕಾರ್ಯವನ್ನು ಹಲವಾರು ಸಂಸ್ಥೆಗಳು ಮಾಡುತ್ತಿದೆ. ಅದು ಈಗಲೇ ಒಂದು ಬಿಝಿನೆಸ್ ಆಗಿ ಪರಿವರ್ತನೆಯಾಗಿದೆ. ನೀವು ಸಂಘಟನೆ ನಿರ್ವಹಣೆ ಮಾಡುವಲ್ಲಿ ನುರಿತರಾಗಿದ್ದರೆ ಈ ಕಾರ್ಯ ಬಹಳ ಸುಲಭವಾಗಲಿದೆ. ಮನೆಯಲ್ಲಿಯೇ ಕುಳಿತು ಹಣ ಸಂಪಾದನೆ ಮಾಡಬಹುದಾಗಿದೆ.
4. ಆನ್‌ಲೈನ್ ಟ್ಯೂಟರಿಂಗ್ ಅಥವಾ ಟೀಚಿಂಗ್
ಕೊರೊನಾ ಸಾಂಕ್ರಾಮಿಕ ಬಳಿಕ ಹಲವಾರು ತರಗತಿಗಳನ್ನು ಆನ್‌ಲೈನ್‌ನಲ್ಲಿ ಮಾಡಲು ಆರಂಭಿಸಲಾಗಿದೆ. ಪ್ರಸ್ತುತ ಈ ಸ್ಥಿತಿ ಬದಲಾವಣೆಯಾಗಿ, ಜನರು ಸಾಮಾನ್ಯ ತರಗತಿ ಪದ್ಧತಿಗೆ ಬದಲಾಗುತ್ತಿದ್ದಾರೆ. ಆದರೂ ಕೂಡಾ ಆನ್‌ಲೈನ್ ಮೂಲಕ ಕ್ಲಾಸ್ ನೀಡುವವರಿಗೆ ಬೇಡಿಕೆ ಕಡಿಮೆಯೇನಿಲ್ಲ. ಹಲವಾರು ಆನ್‌ಲೈನ್ ಟ್ಯೂಟ್ ಮಾಡುವ ಆಪ್‌ಗಳಿದೆ. ಅದರಲ್ಲಿ ನೀವು ಆನ್‌ಲೈನ್ ಟೀಚಿಂಗ್ ಮಾಡಿ ಹಣ ಸಂಪಾದಿಸಬಹುದು.
5. ಫ್ರಿಲ್ಯಾನ್ಸಿಂಗ್ ಮಾಡಿ
ಫ್ರಿಲ್ಯಾನ್ಸಿಂಗ್ ಎಂಬುವುದು ಈಗ ಸಾಮಾನ್ಯವಾಗಿದೆ. ಒಂದು ಸಂಸ್ಥೆಯಲ್ಲಿದ್ದು ಇನ್ನೊಂದು ಸಂಸ್ಥೆಗೆ ಫ್ರಿಲ್ಯಾನ್ಸಿಂಗ್ ಮಾಡುವುದು ತಪ್ಪು- ಸರಿ ಎಂಬ ವಾದಗಳ ನಡುವೆಯೂ ಜನರಿಗೆ ಈ ದುಬಾರಿ ಯುಗದಲ್ಲಿ ಹಣ ಸಂಪಾದಿಸಲು ಇದು ಉತ್ತಮ ಮಾರ್ಗವಾಗಿಯೇ ಉಳಿದಿದೆ.
ನೀವು ಬರವಣಿಗೆ, ಗ್ರಾಫಿಕ್ ಡಿಸೈನಿಂಗ್, ಸೋಶಿಯಲ್ ಮೀಡಿಯಾ ಮೊದಲಾದವುಗಳಲ್ಲಿ ಯಾವುದಾದರೂ ಒಂದರಲ್ಲಿ ತಜ್ಞರು ಅಥವಾ ನುರಿತರಾಗಿದ್ದರೆ, ನೀವು ಈ ಕಾರ್ಯವನ್ನು ಫ್ರಿಲ್ಯಾನ್ಸಿಂಗ್ ಮಾಡಬಹುದು. ನೀವು ಕೆಲವು ನ್ಯೂಸ್ ಪೇಪರ್‌ಗಳಿಗೆ ಆರ್ಟಿಕಲ್ ಬರೆದು ಕೊಟ್ಟರೆ ನಿಮಗೆ ಹಣ ನೀಡಲಾಗುತ್ತದೆ. ಇನ್ನು ಗ್ರಾಫಿಕ್ಸ್ ಕೂಡಾ ಹಾಗೆಯೇ. ಒಂದು ಪೋಸ್ಟರ್‌ಗೆ ನಿಗದಿತ ಹಣ ಸಂಪಾದನೆ ಮಾಡಿಕೊಳ್ಳಬಹುದು.


Click it and Unblock the Notifications