ನಿಮಗೆ ಯಾವುದೇ ಒಂದು ಕಾರಣಕ್ಕೆ ಆದಾಯ ತೆರಿಗೆ ನೋಟಿಸ್ ಬಂದರೆ ನೀವು ಅದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ, ಹಾಗೆಯೇ ಎಲ್ಲ ಪ್ರಮುಖ ದಾಖಲೆಗಳನ್ನು ಕೂಡಾ ಸಲ್ಲಿಸಬೇಕಾಗುತ್ತದೆ. ಹಾಗೆಯೇ ನಿಗದಿತ ದಿನಾಂಕಕ್ಕೂ ಮುನ್ನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಪಾವತಿ ಮಾಡುವುದು ಕಡ್ಡಾಯವಾಗಿದೆ. ನೀವು ಸರಿಯಾದ ದಿನಾಂಕಕ್ಕೂ ಮುನ್ನ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿಲ್ಲದಿದ್ದರೆ ನಿಮಗೆ ದಂಡವನ್ನು ವಿಧಿಸಲಾಗುತ್ತದೆ.
ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಆದಾಯವು ತೆರಿಗೆಗೆ ಒಳಪಡುವ ಆದಾಯವಾಗಿದ್ದರೆ ನೀವು ಅದಕ್ಕೆ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುವುದು ಕಡ್ಡಾಯವಾಗಿರುತ್ತದೆ. ಯಾರು ನಿಗದಿತ ಸಮಯ ಅಥವಾ ಗಡುವಿಗೂ ಮುನ್ನ ಆದಾಯ ತೆರಿಗೆ ರಿಟರ್ನ್ ಅನ್ನು ಪಾವತಿ ಮಾಡುವುದಿಲ್ಲವೋ ಅವರಿಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್ ಅನ್ನು ನೀಡುತ್ತದೆ. ಇನ್ನು ಕೆಲವು ಸಂದರ್ಭದಲ್ಲಿ ಸಮಯಕ್ಕೆ ಸರಿಯಾದ ಆದಾಯ ತೆರಿಗೆ ರಿಟರ್ನ್ ಪಾವತಿಸಿದ್ದರೂ ಕೂಡಾ ಆದಾಯ ತೆರಿಗೆ ಇಲಾಖೆಯು ನೋಟಿಸ್ ಅನ್ನು ನೀಡಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

ಆದಾಯ ತೆರಿಗೆ ಇಲಾಖೆಯ ನೋಟಿಸ್ ಬಂದರೆ ಅಪಾಯವೇ?
ಸಾಮಾನ್ಯವಾಗಿ ಆದಾಯ ತೆರಿಗೆ ಇಲಾಖೆಯ ನೋಟಿಸ್ ಬಂದರೆ ಜನರು ಆತಂಕಕ್ಕೆ ಒಳಗಾಗುವುದು ಇದೆ. ಆದಾಯ ತೆರಿಗೆ ಎಂಬ ಶಬ್ದದಲ್ಲಿಯೇ ಈ ಆತಂಕವು ಸೃಷ್ಟಿ ಮಾಡುತ್ತದೆ. ಆದರೆ ಆದಾಯ ತೆರಿಗೆ ಇಲಾಖೆಯ ನೋಟಿಎಸ್ ಬಂದಾಗ, ಪ್ರತಿ ಬಾರಿಯೂ ಏನೋ ತಪ್ಪಾಗಿದೆ ಎಂಬ ಭಾವನೆ ಬೇಡ. ಯಾಕೆಂದರೆ ಬರೀ ಐಟಿಆರ್ ಫೈಲಿಂಗ್ ವೇಳೆ ಮಾಡಿದ ತಪ್ಪುಗಳಿಗಾಗಿ ಆದಾಯ ತೆರಿಗೆ ಇಲಾಖೆಯ ನೋಟಿಸ್ ಬರುವುದು ಅಲ್ಲ. ಆದರೆ ನೀವು ಯಾವುದೇ ನೋಟಿಎಸ್‌ಗೆ ಸರಿಯಾದ ಪ್ರತಿಕ್ರಿಯೆಯನ್ನು ನೀಡುವುದು ಅತೀ ಮುಖ್ಯವಾಗುತ್ತದೆ. ಹಾಗೆಯೇ ಇಲಾಖೆಗೆ ಬೇಕಾದ ಎಲ್ಲ ಮಾಹಿತಿಗಳನ್ನು ದಾಖಲೆಗಳನ್ನು ನೀವು ನೀಡಬೇಕಾಗುತ್ತದೆ.
ನೀವು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ ಉಲ್ಲೇಖ ಮಾಡಲಾದ ಕೆಲವು ಅಂಶಗಳನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ನೋಟಿಸ್ ನೀಡುವ ಸಾಧ್ಯತೆಗಳು ಕೂಡಾ ಇದೆ. ಘೋಷಿತ ಆದಾಯ ಮತ್ತು ನಿಜವಾದ ಆದಾಯದಲ್ಲಿನ ವ್ಯತ್ಯಾಸಗಳು ಇದ್ದಾಗ, ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ವರದಿ ಮಾಡಲು ವೈಫಲ್ಯವಾದಾಗ, ಅಪೂರ್ಣ ದಾಖಲಾತಿ ಮತ್ತು ತಡವಾದರೂ ಕೂಡಾ ಫೈಲಿಂಗ್ ಅಥವಾ ರಿಟರ್ನ್ಸ್ ಸಲ್ಲಿಸದಿರುವ ಕಾರಣವನ್ನು ಕೇಳಲು ಕೂಡಾ ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ಅನ್ನು ನೀಡುತ್ತದೆ. ನೀವು ಹೆಚ್ಚಿನ ಕಡಿತಗಳನ್ನು ಕ್ಲೈಮ್ ಮಾಡಿದ್ದರೂ ಕೂಡಾ ನೀವು ನೋಟಿಸ್ ಪಡೆಯಬಹುದಾಗಿದೆ.
ಯಾವೆಲ್ಲ ಕಾರಣಕ್ಕೆ ಆದಾಯ ತೆರಿಗೆ ನೋಟಿಸ್ ನೀಡಲಾಗುತ್ತದೆ?
ನಿಮ್ಮ ಘೋಷಿತ ಆದಾಯ ಮತ್ತು ನಿಜವಾದ ಆದಾಯದಲ್ಲಿನ ವ್ಯತ್ಯಾಸಗಳು: ತೆರಿಗೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಜನರ ಮೇಲೆ ನಿರಂತರವಾಗಿ ಆದಾಯ ತೆರಿಗೆ ಇಲಾಖೆಯು ನಿಗಾ ಇರಿಸುತ್ತದೆ. ನೀವು ಆದಾಯ ತೆರಿಗೆ ಫೈಲಿಂಗ್ ಮೂಲಕ ಉಲ್ಲೇಖಿಸಿದ ಆದಾಯ ಮತ್ತು ನಿಮ್ಮ ನಿಜವಾದ ಆದಾಯದ ನಡುವೆ ಕೆಲವು ವ್ಯತ್ಯಾಸಗಳಿವೆ ಎಂದು ಅಧಿಕಾರಿಗಳಲ್ಲಿ ಅನುಮಾನವಿದ್ದರೆ, ನಿಮಗೆ ನೋಟಿಸ್ ನೀಡಬಹುದು.
ಅಧಿಕ ಮೊತ್ತದ ವಹಿವಾಟುಗಳನ್ನು ಉಲ್ಲೇಖಿಸುವಲ್ಲಿ ವೈಫಲ್ಯ: ನೀವು ಐಟಿಆರ್ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಕೂಡಾ ಉಲ್ಲೇಖ ಮಾಡುವುದು ಮುಖ್ಯವಾಗುತ್ತದೆ. ಒಂದು ವೇಳೆ ನೀಡುವ ಹೆಚ್ಚಿನ ಮೌಲ್ಯದ ವಹಿವಾಟುಗಳ ಬಗ್ಗೆ ಉಲ್ಲೇಖ ಮಾಡದಿದ್ದದರೆ ತೆರಿಗೆ ಅಧಿಕಾರಿಗಳು ಆ ಬಗ್ಗೆ ಪರಿಶೀಲನೆ ಮಾಡುತ್ತಾರೆ. ಈ ವಹಿವಾಟುಗಳಲ್ಲಿ ದೊಡ್ಡ ನಗದು ಠೇವಣಿ, ಆಸ್ತಿ ಅಥವಾ ಐಷಾರಾಮಿ ವಸ್ತುಗಳ ಖರೀದಿ ಸೇರಿವೆ. ಆದಾಯ ತೆರಿಗೆ ಇಲಾಖೆಯು ಕಪ್ಪುಹಣವನ್ನು ನಿಗ್ರಹಿಸಲು ಮತ್ತು ಎಲ್ಲಾ ಕಡಿಮೆ ಆದಾಯವನ್ನು ಪತ್ತೆಹಚ್ಚಲು ತೆರಿಗೆದಾರರು ತಮ್ಮ ಎಲ್ಲಾ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಉಲ್ಲೇಖ ಮಾಡಬೇಕಾಗುತ್ತದೆ.
ಅಪೂರ್ಣ ದಾಖಲೆಗಳು: ಐಟಿಆರ್ ಅನ್ನು ಸಲ್ಲಿಸುವಾಗ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ. ನೀವು ಲಗತ್ತಿಸದಿದ್ದರೆ, ತೆರಿಗೆ ಅಧಿಕಾರಿಗಳು ಈ ಬಗ್ಗೆ ನೋಟಿಎಸ್ ಮೂಲಕ ನಿಮಗೆ ಸೂಚನೆ ನೀಡುತ್ತಾರೆ. ಎಲ್ಲಾ ಮೂಲಗಳಿಂದ ನೀವು ಕ್ಲೈಮ್ ಮಾಡಿದ ಕಡಿತಗಳು ಮತ್ತು ಆರ್ಥಿಕ ವರ್ಷದಲ್ಲಿ ಒಟ್ಟು ಆದಾಯದ ಬೆಂಬಲಕ್ಕಾಗಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸುವುದು ಮುಖ್ಯವಾಗುತ್ತದೆ.
ಐಟಿಆರ್ ಫೈಲಿಂಗ್ ತಡ ಅಥವಾ ಫೈಲಿಂಗ್ ಮಾಡದಿರುವುದು: ನಿಮ್ಮ ತೆರಿಗೆ ರಿಟರ್ನ್ಸ್ ಅನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಮುಖ್ಯವಾಗಿದೆ. ನೀವು ನಿಮ್ಮ ತೆರಿಗೆ ರಿಟರ್ನ್ಸ್ ಅನ್ನು ಸಮಯಕ್ಕೆ ಸರಿಯಾಗಿ ಐಟಿಆರ್ ಫೈಲ್ ಮಾಡಿದಿದ್ದರೆ, ಅಥವಾ ಗಡುವು ಮುಗಿದು ಎಷ್ಟೋ ದಿನಗಳು ಕಳೆದರೂ ಕೂಡಾ ಐಟಿಆರ್ ಫೈಲ್ ಮಾಡಿದ್ದರೆ ನಿಮಗೆ ಆದಾಯ ತೆರಿಗೆ ಇಲಾಖೆ ಖಂಡಿತವಾಗಿಯೂ ನೋಟಿಸ್ ನೀಡುತ್ತದೆ.
ಸಾಮಾನ್ಯ ಪರಿಶೀಲನೆ, ಮಿತಿಮೀರಿದ ಕಡಿತಗಳು: ಆದಾಯ ತೆರಿಗೆ ಇಲಾಖೆಯು ಸಾಮಾನ್ಯವಾಗಿ ತೆರಿಗೆ ರಿಟರ್ನ್‌ಗಳನ್ನು ಪರಿಶೀಲಿಸಬೇಕಾದ ಫೈಲ್‌ಗಳನ್ನು ಆಯ್ಕೆ ಮಾಡುತ್ತದೆ. ನಿಮ್ಮ ತೆರಿಗೆ ರಿಟರ್ನ್ಸ್ ಅನ್ನು ನೀವು ನಿಖರವಾಗಿ ಮತ್ತು ಸಮಯಕ್ಕೆ ಪಾವತಿಸಿದ್ದರೆ, ನೀವು ಚಿಂತಿಸಬೇಕಾಗಿಲ್ಲ. ಇನ್ನು ನೀವು ಹೆಚ್ಚಿನ ಕಡಿತವನ್ನು ಕ್ಲೈಮ್ ಮಾಡಿದ್ದರೆ ಆದಾಯ ತೆರಿಗೆ ಅಧಿಕಾರಿಗಳು ಹೆಚ್ಚಿನ ಪರಿಶೀಲನೆಗಾಗಿ ನಿಮಗೆ ನೋಟಿಸ್ ಕಳುಹಿಸಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications