ಎಚ್‌ಡಿಎಫ್‌ಸಿ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‌ನ ಗ್ರಾಹಕರಿಗೆ ಕಳೆದ ಹಲವಾರು ದಿನಗಳಿಂದ ಮೆಸೇಜ್ ಒಂದು ಬರುತ್ತಿದೆ. ಕೆವೈಸಿ ಮಾಡದಿದ್ದರೆ, ನಿಮ್ಮ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯನ್ನು ಮುಚ್ಚಲಾಗುತ್ತದೆ ಎಂದು ಈ ಮೆಸೇಜ್‌ನಲ್ಲಿ ಹೇಳಲಾಗುತ್ತಿದೆ. ಆದರೆ ಇದು ನಿಜವೇ?. ಹೌದು ಇದು ನಿಜವಲ್ಲ ನೀವು ಇಂತಹ ಜಾಲಕ್ಕೆ ಒಳಗಾಗಿ ವಂಚನೆ ಜಾಲದಲ್ಲಿ ಸಿಲುಕದಿರಿ. ಈ ಮಸೇಜ್‌ನಲ್ಲಿ ಲಿಂಕ್ ಅನ್ನು ನೀಡಲಾಗುತ್ತಿದ್ದು, ಇದನ್ನು ಕ್ಲಿಕ್ ಮಾಡಿ ಕೆವೈಸಿ ಮಾಡಿ ಎಂದು ಹೇಳಲಾಗುತ್ತಿದೆ.
"ಕೆವೈಸಿ ಅಪ್‌ಡೇಟ್ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ಮುಖ್ಯವಾಗುತ್ತದೆ. ನೀವು https://rb.gy/xaotao0 ಅನ್ನು ಕ್ಲಿಕ್ ಮಾಡುವ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯನ್ನು ಅಪ್‌ಡೇಟ್ ಮಾಡಿ. ನೀವು ಅಪ್‌ಡೇಟ್ ಮಾಡಿದಿದ್ದರೆ, ನಿಮ್ಮ ಖಾತೆ ಬ್ಲಾಕ್ ಆಗಲಿದೆ," ಎಂದು ಈ ಮೆಸೇಜ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ ನೀವು ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ನಿಮ್ಮ ಖಾತೆಯಲ್ಲಿರುವ ಮೊತ್ತ ಮಂಗಮಾಯ ಆಗುವ ಸಾಧ್ಯತೆಯಿದೆ.

ಎಚ್ಚರಿಕೆ ನೀಡಿದ ಎಚ್‌ಡಿಎಫ್‌ಸಿ ಬ್ಯಾಂಕ್
ಈ ಬಗ್ಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ತೀಚೆಗೆ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ವಂಚಕರ ಜಾಲಕ್ಕೆ ನೀವು ಸಿಲುಕಿದ್ದಂತಾಗುತ್ತದೆ. ಕೆವೈಸಿ ನೆಪದಲ್ಲಿ ನೀವು ಜಾಲಕ್ಕೆ ಸಿಲುಕಿದ್ದಂತೆ ಆಗುತ್ತದೆ. "ನಿಮ್ಮನ್ನು ನೀವು ವಂಚಕರಿಂದ ರಕ್ಷಣೆ ಮಾಡಿ!, ಎಂದಿಗೂ ಕೂಡಾ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಬರುವ ಮೆಸೇಜ್ ಅನ್ನು ಚೆಕ್ ಮಾಡಿ. ಅದು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದಲೇ ಬಂದಿದೆಯೇ ಎಂದು ನೋಡಿಕೊಳ್ಳಿ. ಅಧಿಕೃತ ಐಡಿ ಎಚ್‌ಡಿಎಫ್‌ಸಿಬಿಕೆ/ ಎಚ್‌ಡಿಎಫ್‌ಸಿಬಿಎನ್ & hdfcbk.io ಮೂಲಕ ನೀವು ಪರಿಶೀಲಿಸಿ," ಎಂದು ಬ್ಯಾಂಕ್ ತಿಳಿಸಿದೆ.
ಈ ಬಗ್ಗೆ ಹಲವಾರು ಬ್ಯಾಂಕ್ ಗ್ರಾಹಕರು ದೂರನ್ನು ನೀಡಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಯನ್ನು ಬಂದ್ ಮಾಡಲಾಗಿದೆ, ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೂಡಾ ಕೆಲವು ಮೆಸೇಜ್‌ನಲ್ಲಿ ಉಲ್ಲೇಖಿಸಲಾಗಿದೆ. ನೀವು ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯನ್ನು ಮತ್ತೆ ಉಪಯೋಗ ಮಾಡಬೇಕಾದರೆ, ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್ ಕಾರ್ಡ್) ಅನ್ನು ಶೀಘ್ರವೇ ಲಿಂಕ್ ಮಾಡಿ. ಅದಕ್ಕಾಗಿ ನಾವು ಇಲ್ಲಿ ನೀಡಿದ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ಉಲ್ಲೇಖ ಮಾಡಲಾಗಿದೆ.
ವಂಚನೆಯ ಮೆಸೇಜ್‌ನಿಂದ ನಮ್ಮನ್ನು ಕಾಪಾಡಿಕೊಳ್ಳುವುದು ಹೇಗೆ?
* ಇಂತಹ ವಂಚನೆಯ ಮೆಸೇಜ್ ಅನ್ನು ತಪ್ಪಿಸಬೇಕಾದರೆ, ಬ್ಯಾಂಕ್ ಗ್ರಾಹಕರು ಲಿಂಕ್ ಬಗ್ಗೆ ಜಾಗರೂಕರಾಗಿರುವುದು ಅತೀ ಮುಖ್ಯವಾಗಿದೆ. ನೀವು ಸೋರ್ಸ್ ಅನ್ನು ಚೆಕ್ ಮಾಡಬೇಕಾಗುತ್ತದೆ, ಲಿಂಕ್ ಅಧಿಕೃತವೇ ಎಂದು ನೋಡಿಕೊಳ್ಳಿ.
* ಯುಆರ್‌ಎಲ್‌ನಲ್ಲಿ ಸರಿಯಾದ ಲಿಂಕ್ ಅನ್ನು ಟೈಪ್ ಮಾಡಿ ನೀವು ನೋಡುವುದು ಅತೀ ಮುಖ್ಯವಾಗುತ್ತದೆ.
* ಅಧಿಕೃತ ಲಾಗಿನ್ ಪೇಜ್‌ನಲ್ಲಿ ಮಾತ್ರ ನಿಮ್ಮ ಪಾಸ್‌ವರ್ಡ್, ಯೂಸರ್ ಐಡಿಯನ್ನು ನಮೂದಿಸಿ ಲಾಗಿನ್ ಆಗಿ
* ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೊದಲು ಯುಆರ್‌ಎಲ್ ಅನ್ನು ಪರಿಶೀಲಿಸಿ. https:// ಎಂದು ಇದೆಯೇ ನೋಡಿ. ಇಲ್ಲಿ ಎಸ್ (s) ಎಂಬುವುದು ಸುರಕ್ಷಿತ ಎಂದು ಅರ್ಥವಾಗಿದೆ.
* ಫೋನ್‌ನಲ್ಲಿ ಮಾತ್ರ ಅಧಿಕೃತ ಖಾತೆಯಲ್ಲಿ ವೈಯಕ್ತಿಕ ಮಾಹಿತಿಯನ್ನು ಉಲ್ಲೇಖಿಸಿ, ಕರೆ ಅಥವಾ ಸೆಷನ್‌ನಲ್ಲಿ ಮಾಹಿತಿಯನ್ನು ನಮೂದಿಸಬೇಡಿ.
* ಬ್ಯಾಂಕ್, ಕ್ರೆಡಿಟ್, ಡೆಬಿಟ್ ಕಾರ್ಡ್ ಸ್ಟೇಟ್‌ಮೆಂಟ್‌ಗಳನ್ನು ಚೆಕ್ ಮಾಡುತ್ತೀರಿ.


Click it and Unblock the Notifications