ನಟ ಹಾಗೂ ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಅವರು ನಟಿಸಿರುವ ಇತ್ತೀಚಿನ ಸಿನಿಮಾ 'ಜ್ವಿಗಾಟೊ'ದಲ್ಲಿಅವರ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದು ಅವರ ಮೂರನೇ ಸಿನಿಮಾ ಆಗಿದ್ದು, ಈ ಸಿನಿಮಾ ಅತ್ಯುತ್ತಮ ವಿಮರ್ಶೆ ಪಡೆದಿದ್ದರೂ ಚಿತ್ರ ಬಿಡುಗಡೆಯಾದ ಮೊದಲ ಒಂದು ವಾರದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಒಂದು ಕೋಟಿಯನ್ನು ಬಾಚಿಕೊಳ್ಳಲು ವಿಫಲವಾಗಿತ್ತು. "ಕಾಮಿಡಿ ನಟ್ ವಿಥ್ ಕಪಿಲ್", "ದಿ ಕಪಿಲ್ ಶರ್ಮಾ ಶೋ" ಮುಂತಾದ ಕಾರ್ಯಕ್ರಮಗಳನ್ನು ಟಿವಿಯಲ್ಲಿ ಯಶಸ್ವಿಯಾಗಿ ನಡೆಸಿಕೊಡುವುದರ ಮೂಲಕ ಪ್ರಸಿದ್ದಿಗೆ ಬಂದರು.
ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಬಾಲಕ ಇಂದು ದೇಶದ ಪ್ರಸಿದ್ದ ಹಾಸ್ಯನಟನಾಗುವವರೆಗೆ, ಅವರು ನಡೆದು ಬಂದ ಹಾದಿಯನ್ನು ಕಡುಬಡತನದಿಂದ ಶ್ರೀಮಂತನಾಗಿರುವುದನ್ನು ರೋಚಕ ಕಥೆ ಎಂದೇ ವರ್ಣಿಸಬಹುದು. ಪಂಜಾಬ್‌ನ ಅಮೃತಸರದಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಕಪಿಲ್ ಅವರ ತಾಯಿ ಗೃಹಿಣಿಯಾಗಿದ್ದು ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಅವರ ಕುಟುಂಬ ಆರ್ಥಿಕವಾಗಿ ಸ್ಥಿತಿವಂತರಾಗದೇ ಇರೋದ್ರಿಂದ ಅವರ ಬಾಲ್ಯವು ಕಷ್ಟಕರವಾಗಿಯೇ ಸಾಗಿತ್ತು. ಹೀಗಾಗಿ ಕಪಿಲ್ ತನ್ನ ತಾಯಿಗೆ ಮನೆಯ ಕೆಲಸಗಳಲ್ಲಿ ಕೈಜೋಡಿಸುತ್ತಿದ್ದರು. ತಮ್ಮ ಕುಟುಂಬಕ್ಕೆ ಹಣಕಾಸಿನ ನೆರವಿಗಾಗಿ PCO ಬೂತ್ ಮತ್ತು ಟೆಕ್ಸ್ ಟೈಲ್ಸ್ ಗಳಲ್ಲಿ ಕೆಲಸ ಮಾಡಿದ್ದರು. ಆದರೆ ಇಂದು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟರಲ್ಲಿ ಓರ್ವರಾಗಿರುವ ಕಪಿಲ್ ಶರ್ಮಾ ಅವರ ದುಬಾರಿ ಆಸ್ತಿಗಳ ಪಟ್ಟಿ ಇಲ್ಲಿದೆ.
ಕಪಿಲ್ ಶರ್ಮಾ ಪ್ರತಿ ಸಂಚಿಕೆಗೆ ಪಡೆಯುವ ಸಂಬಳ, ನಿವ್ವಳ ಮೌಲ್ಯ:
2007 ರಲ್ಲಿ 'ದಿ ಗ್ರೇಟ್ ಇಂಡಿಯನ್ ಲಾಫಿಂಗ್ ಚಾಲೆಂಜ್' ಗೆದ್ದ ಬಳಿಕ ಕಪಿಲ್ ಶರ್ಮಾ ಅವರ ವೃತ್ತಿ ಬದುಕು ಹೊಸ ತಿರುವು ಪಡೆದುಕೊಂಡಿತು. ಆದರೆ ಅವರಿಗೆ ಪ್ರಮುಖ ಬ್ರೇಕ್ ಸಿಕ್ಕಿದ್ದು 2013 ರ ತಮ್ಮದೇ ಆದ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ ಅಂದರೆ ತಪ್ಪಾಗಲಾರದು. ಇದು ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಗಳಿಸಿ "ಕಪಿಲ್ ಶರ್ಮಾ" ಹೆಸರು "ಬ್ರ್ಯಾಂಡ್" ಆಗಿಬಿಟ್ಟಿತು.
ಇದಾದ ಬಳಿಕ ಅವರ ಮತ್ತೊಂದು ಶೋ "ಕಪಿಲ್ ಶರ್ಮಾ ಶೋ" ಕೂಡ ದೊಡ್ಡ ಯಶಸ್ಸು ಪಡೆಯಿತು. ಹೀಗಾಗಿ ಕಪಿಲ್ ಶರ್ಮಾ ಅವರ ನಿವ್ವಳ ಮೌಲ್ಯವು 2023ರಲ್ಲಿ, 280 ಕೋಟಿಗೆ ತಲುಪುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಅವರು ಪ್ರತಿ ಎಪಿಸೋಡ್ ಗೆ ಒಟ್ಟು 50 ಲಕ್ಷ ರೂಪಾಯಿಗಳ ಚೆಕ್ ಪಡೆದುಕೊಳ್ಳುತ್ತಾರೆ.
ಐಷಾರಾಮಿ ಆಸ್ತಿ:
ಮುಂಬೈನ ಅಂಧೇರಿ ವೆಸ್ಟ್‌ನಲ್ಲಿ ಕಪಿಲ್ ನಿವಾಸ ಹೊಂದಿದ್ದಾರೆ ಎಂದು ಮ್ಯಾಜಿಕ್‌ಬ್ರಿಕ್ಸ್ ವರದಿ ಮಾಡಿದ್ದು, ಇದು ಆಲಿಯಾ ಭಟ್, ನವಾಜುದ್ದೀನ್ ಸಿದ್ದಿಕಿ, ಮಿಕಾ ಸಿಂಗ್ ಮತ್ತು ಸೋನು ಸೂದ್ ಮುಂತಾದ ಸೆಲೆಬ್ರಿಟಿಗಳು ನೆಲೆಸಿರುವ ಸ್ಥಳವಾಗಿದೆ. ಇವರ ಮುಂಬೈ ನಿವಾಸ 15 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೇ ತಮ್ಮ ತವರು ರಾಜ್ಯ ಪಂಜಾಬ್‌ನಲ್ಲಿ ಸುಮಾರು 25 ಕೋಟಿ ರೂಪಾಯಿ ಮೌಲ್ಯದ ಫಾರ್ಮ್‌ಹೌಸ್ ನ ಒಡೆಯರಾಗಿದ್ದಾರೆ ಎಂದು ವರದಿಯಾಗಿದೆ.
ದುಬಾರಿ ಕಾರಗಳ ಒಡೆಯ:
ತಮ್ಮ ಸಂಗ್ರಹದಲ್ಲಿ ಅನೇಕ ಐಷಾರಾಮಿ, ದುಬಾರಿ ಬೆಲೆಯ ಕಾರುಗಳನ್ನು ಹೊಂದಿರುವ ಕಪಿಲ್ 5.5 ಕೋಟಿ ಮೌಲ್ಯದ ರಿಚ್ ಆಗಿರುವ 'DC' ವಿನ್ಯಾಸದ ವ್ಯಾನಿಟಿ ವ್ಯಾನ್ ಹೊಂದಿದ್ದಾರೆ. ಇದಲ್ಲದೆ ರೇಂಜ್ ರೋವರ್ ಇವೊಕ್, ವೋಲ್ವೋ ಎಕ್ಸ್‌ಸಿ 90 ಎಸ್‌ಯುವಿ, ಮರ್ಸಿಡಿಸ್ ಬೆಂಜ್ ಎಸ್ 350 ಮತ್ತು ರೇಂಜ್ ರೋವರ್ ಇವೊಕ್ ಅವರ ಒಡೆತನದಲ್ಲಿರುವ ಕಾರುಗಳಾಗಿವೆ ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.


Click it and Unblock the Notifications