ಫಿನ್‌ಟೆಕ್ ಕಂಪನಿ ಕಿನಾರಾ ಕ್ಯಾಪಿಟಲ್ ಕರ್ನಾಟಕದಲ್ಲಿ ಎಂಎಸ್‌ಎಂಇಗಳ ಬೆಳವಣಿಗೆಯನ್ನು ಬೆಂಬಲಿಸಲು ಹಣಕಾಸು ವರ್ಷ 2024 ರಲ್ಲಿ 575 ಕೋಟಿ ರೂಪಾಯಿಗೂ ಹೆಚ್ಚು ವ್ಯಾಪಾರ ಸಾಲಗಳನ್ನು ವಿತರಿಸುವುದಾಗಿ ಘೋಷಿಸಿದೆ. "ಕರ್ನಾಟಕವು ವೈವಿಧ್ಯಮಯ ಎಂಎಸ್‌ಎಂಇ ವಲಯದೊಂದಿಗೆ ಬೆಳೆಯುತ್ತಿರುವ ರಾಜ್ಯವಾಗಿದೆ. ಕಿನಾರಾ ಕ್ಯಾಪಿಟಲ್ ಈ ವಲಯದ ಉತ್ತೇಜನಕ್ಕೆ ಮುಂದಾಗುತ್ತದೆ," ಎಂದು ಕಿನಾರಾ ಕ್ಯಾಪಿಟಲ್ ಹೇಳಿದೆ.
"ಕಿನಾರಾ ಕ್ಯಾಪಿಟಲ್ ಕರ್ನಾಟಕದಲ್ಲಿ ಪ್ರಧಾನ ಕಛೇರಿ ಹೊಂದಲು ಹೆಮ್ಮೆಪಡುತ್ತದೆ. ಒಂದು ದಶಕದಿಂದ ನಾವು ಈ ರಾಜ್ಯದಲ್ಲಿ ಸಾವಿರಾರು ಸಣ್ಣ ವ್ಯಾಪಾರ ಉದ್ಯಮಿಗಳಿಗೆ ಬೆಂಬಲ ನೀಡಿದ್ದೇವೆ. ಹಣಕಾಸು ವರ್ಷ 2024 ರಲ್ಲಿ 575 ಕೋಟಿ ರೂಪಾಯಿಗಿಂತ ಅಧಿಕ ಹಣವನ್ನು ಕರ್ನಾಟಕದಲ್ಲಿ ಎಂಎಸ್‌ಎಂಇಗಳಿಗೆ ವಿತರಿಸುವ ನಮ್ಮ ಬದ್ಧತೆಯು ವ್ಯಾಪಾರದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಆರ್ಥಿಕತೆಗಳಲ್ಲಿ 6,000+ ಹೊಸ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ," ಎಂದು ಕಿನಾರಾ ಕ್ಯಾಪಿಟಲ್‌ನ ಸಿಒಒ ತಿರುನಾವುಕರಸು ಹೇಳಿದ್ದಾರೆ.

ಎಂಎಸ್‌ಎಂಇ ವ್ಯಾಪಾರ ಮಾಲೀಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬಹುದು. ಮೈಕಿನಾರಾ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಇದರ ಪ್ರಯೋಜನವನ್ನು ಪಡೆಯಬಹುದಾಗಿದ್ದು, ಇದು ಕನ್ನಡದಲ್ಲಿ ಲಭ್ಯವಿದೆ. ಹಣಕಾಸು ವರ್ಷ 2023 ರಲ್ಲಿ ಕಿನಾರಾ ಕ್ಯಾಪಿಟಲ್ 341 ಕೋಟಿ ರೂಪಾಯಿಗಳನ್ನು ವಿತರಿಸಿದೆ. ಇದು ಹಣಕಾಸು ವರ್ಷ 2022 ರಲ್ಲಿ ಶೇಕಡ 141 ಗಿಂತ ಅಧಿಕವಾಗಿದೆ ಎಂದು ಕಂಪನಿ ತಿಳಿಸಿದೆ.
ಕಾರ್ಯಾಚರಣೆ ವಿಸ್ತರಣೆ
ಈ ಹಣಕಾಸು ವರ್ಷದ (FY24) ವಿತರಣಾ ಯೋಜನೆಯು ಕಾರ್ಯಾಚರಣೆಯ ವಿಸ್ತರಣೆಗಳಿಂದ ಬೆಂಬಲಿತವಾಗಿದೆ. ಇತ್ತೀಚೆಗೆ, ಕಿನಾರಾ ಕ್ಯಾಪಿಟಲ್ ಹಾವೇರಿ, ಹುಮನಾಬಾದ್ ಮತ್ತು ರಾಮನಗರದಲ್ಲಿ ಮೂರು ಹೊಸ ಶಾಖೆಗಳನ್ನು ತೆರೆದಿದೆ. 28 ಶಾಖೆಗಳು ಮತ್ತು 658 ಪಿನ್ ಕೋಡ್‌ಗಳಿಗೆ ವಿಸ್ತಾರಗೊಂಡಿದೆ. ಇದಲ್ಲದೆ, ಕಂಪನಿಯು ಕರ್ನಾಟಕದಲ್ಲಿ ತನ್ನ ಉದ್ಯೋಗಿ ಬಲವನ್ನು 930 ಉದ್ಯೋಗಿಗಳಿಗೆ ಹೆಚ್ಚಿಸಲು ಯೋಜಿಸಿದೆ. ಈ ಹಣಕಾಸು ವರ್ಷದಲ್ಲಿ ಕಿನಾರಾ ಕ್ಯಾಪಿಟಲ್‌ನ ಕಚೇರಿಗಳಲ್ಲಿ 300 ಕ್ಕೂ ಹೆಚ್ಚು ಹೊಸ ನೇಮಕಾತಿಗಳನ್ನು ಮಾಡಲಾಗಿದೆ.
ಇಲ್ಲಿಯವರೆಗೆ, ಕಿನಾರಾ ಕರ್ನಾಟಕದಲ್ಲಿ 20,717 ವ್ಯಾಪಾರ ಸಾಲಗಳಲ್ಲಿ 1,089 ಕೋಟಿ ರೂಪಾಯಿಗೂ ಹೆಚ್ಚು ವಿತರಿಸಿದೆ. ಕಿನಾರ ಬೆಂಬಲದಿಂದ ಸಣ್ಣ ವ್ಯಾಪಾರ ಉದ್ಯಮಿಗಳಿಗೆ 79 ಕೋಟಿ ರೂಪಾಯಿಯ ಆದಾಯದ ಹೆಚ್ಚಳ ಮತ್ತು ಸ್ಥಳೀಯ ಆರ್ಥಿಕತೆಗಳಲ್ಲಿ 21,437 ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ. ಆಹಾರ ಉತ್ಪನ್ನಗಳು, ನಿರ್ಮಾಣ ಸಾಮಗ್ರಿಗಳು, ಯಂತ್ರ ಘಟಕಗಳು, ಜವಳಿ, ಫ್ಯಾಬ್ರಿಕೇಶನ್, ಆಟೋ ಘಟಕಗಳು, ಆಟೋಮೊಬೈಲ್‌ಗಳು, ಇತ್ಯಾದಿಗಳು ರಾಜ್ಯದಲ್ಲಿ ಕಿನಾರಾ ಕ್ಯಾಪಿಟಲ್‌ನ ಕೆಲವು ಪ್ರಮುಖ ಉಪ ವಲಯಗಳಾಗಿದೆ.


Click it and Unblock the Notifications