ಚೀನಾದ ಸ್ಮಾರ್ಟ್ ಫೋನ್ ತಯಾರಿಕೆ ಸಂಸ್ಥೆ Realmeದಿಂದ ಮಂಗಳವಾರ PaySa ಪ್ಲಾಟ್ ಫಾರ್ಮ್ ಮೂಲಕ ಹಣಕಾಸು ಸಾಲ ಒದಗಿಸುವುದಾಗಿ ಘೋಷಣೆ ಮಾಡಿದೆ. ಮುಂದಿನ 2 ವರ್ಷಗಳಲ್ಲಿ 2.5 ಕೋಟಿ ಗ್ರಾಹಕರನ್ನು ಹೊಂದುವ ಗುರಿ ಇರಿಸಿಕೊಂಡಿದೆ. 'Realme PaySa'ದ ಮೂಲಕ ವೈಯಕ್ತಿಕವಾಗಿ, ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿಗೆ (SME) ಸಾಲ ನೀಡಲಿದೆ.
ಮೆಟ್ರೋ ನಗರಗಳಲ್ಲಿ, ಟಯರ್ ಎರಡು ಮತ್ತು ಮೂರು ನಗರಗಳಲ್ಲಿ ಸಾಲ ನೀಡಲಾಗುತ್ತದೆ. ಡಿಜಿಟಲ್ ಪರ್ಸನಲ್ ಲೋನ್ 1 ಲಕ್ಷ ರುಪಾಯಿ ತನಕ ನೀಡಲಾಗುತ್ತದೆ. ಇನ್ನು ಡಿಜಿಟಲ್ SME ಸಾಲ 5 ಲಕ್ಷ ರುಪಾಯಿ ತನಕ ವಿತರಿಸಲಾಗುತ್ತದೆ.
"ಮೊಬೈಲ್ ಮಾರುಕಟ್ಟೆಯ ಯಶಸ್ಸನ್ನು ಇಲ್ಲೂ ಪುನರಾವರ್ತಿಸಲು ಬಯಸುತ್ತೇವೆ. ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಹಣಕಾಸು ಸೇವೆ ಒದಗಿಸುವ ಟಾಪ್ 5 ಸಂಸ್ಥೆಗಳಲ್ಲಿ ಒಂದಾಗುವ ಗುರಿ ಇದೆ. ಮೊಬೈಲ್ ಫೋನ್ ಫೈನಾನ್ಸಿಂಗ್ ಆರಂಭದ ಬಗ್ಗೆ ಹಾಗೂ 2020ರ ಪಾವತಿ ಬಗ್ಗೆ ಮೌಲ್ಯಮಾಪನ ಮಾಡುತ್ತಿದ್ದೇವೆ" ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

2020ರಲ್ಲಿ 1000 ಕೋಟಿ ರುಪಾಯಿ ಸಾಲ ವಿತರಿಸಲು ಗುರಿ ಇರಿಸಿಕೊಳ್ಳಲಾಗಿದೆ. ಮೂವತ್ತರಿಂದ ಐವತ್ತು ಲಕ್ಷ ಹೊಸ ಗ್ರಾಹಕರನ್ನು ಸೆಳೆಯುವ ಉದ್ದೇಶ ಇದೆ. ಹಲವು ಫೈನಾನ್ಷಿಯಲ್ ಉತ್ಪನ್ನಗಳನ್ನು ಆರಂಭಿಸಲು ಉದ್ದೇಶಿಸಿದ್ದು, ಭಾರತದಲ್ಲಿ ಹಣಕಾಸು ಸೇವೆ ಆರಂಭಕ್ಕೆ ಮೊದಲ ಹೆಜ್ಜೆ ಇರಿಸಲಿದೆ.
ಇನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ರಿಯಾಲ್ಮೆ ಅಪ್ಲಿಕೇಷನ್ ಸ್ಟೋರ್ ನಲ್ಲಿ ಅಪ್ಲಿಕೇಷನ್ ದೊರೆಯಲಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications