ಭಾರತದ ಬೆಳವಣಿಗೆಗೆ ಎಎಎನ್, ಒಎನ್‌ಡಿಸಿ ಡಬಲ್ ಎಂಜಿನ್ ಶಕ್ತಿ; ನಿಲೇಕಣಿ ಹೇಳಿದ್ದೇನು?

ಪುಣೆ, ನ. 13: ಯಾವುದೇ ಆರ್ಥಿಕತೆ ಬೆಳೆಯಬೇಕಾದರೆ ಸಮಾಜದ ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆ ಆಗಬೇಕು. ಅದಕ್ಕೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಬೇಕು. ಲಕ್ಷ ಉದ್ಯೋಗ, ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಸರ್ಕಾರಗಳು ಆಗಾಗ್ಗೆ ಘೋಷಣೆ ಮಾಢುತ್ತಲೇ ಇರುತ್ತವೆ. ಆದರೆ, ಉದ್ಯೋಗಸೃಷ್ಟಿ ಅಷ್ಟು ಸುಲಭವಲ್ಲ. ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ಇರಬೇಕು, ಬೇಡಿಕೆ ಇರಬೇಕು. ಇವೆಲ್ಲವೂ ಬಹಳಷ್ಟು ವಿದ್ಯಮಾನ, ಸರ್ಕಾರದ ನೀತಿ ಇತ್ಯಾದಿಗಳ ಮಧ್ಯೆ ಪರಸ್ಪರ ಬೆಸೆದುಕೊಂಡಿರುತ್ತವೆ. ಭಾರತದಲ್ಲಿ ಆಧಾರ್ ಯೋಜನೆಯ ರೂವಾರಿ ಎನಿಸಿದ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಭಾರತದಲ್ಲಿ ಉದ್ಯೋಗಸೃಷ್ಟಿ ಬಗ್ಗೆ ನಿನ್ನೆ ಶನಿವಾರ ಮಾತನಾಡುತ್ತಾ ಬಹಳ ಕುತೂಹಲ ಎನಿಸುವ ಸಂಗತಿಗಳನ್ನು ತಿಳಿಸಿದ್ದಾರೆ.

ಮಹಾರಾಷ್ಟ್ರದ ಪುಣೆಯ ಟೈಕಾನ್ 2022 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ನಂದನ್ ನಿಲೇಕಣಿ, ಭಾರತದ ಭವಿಷ್ಯದ ಬೆಳವಣಿಗೆಗೆ ಎಎಎನ್ ಮತ್ತು ಒಎನ್‌ಡಿಸಿ ಒಟ್ಟು ಸೇರಿ ಮುನ್ನಡೆಯಬೇಕು. ಉದ್ಯೋಗ ಸೃಷ್ಟಿಗೆ ಇವೆರಡು ಬಹಳ ಮುಖ್ಯ ಎಂದು ಹೇಳಿದರು.

ಎಎಎನ್ ಎಂಬುದು ಅಕೌಂಟ್ ಆಗ್ರಿಗೇಟರ್ ನೆಟ್ವರ್ಕ್ ಆಗಿದ್ದು ಇದು ಇ-ಕಾಮರ್ಸ್ ಅನ್ನು ವಿಭಾಗೀಕರಿಸುವ ಕೆಲಸ ಮಾಡುತ್ತದೆ. ಒಎನ್‌ಡಿಸಿ ಎಂಬುದು ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಆಗಿದ್ದು ಇದು ಪಾರದರ್ಶಕ ರೀತಿಯಲ್ಲಿ ಸಾಲದ ವ್ಯವಸ್ಥೆ ಮಾಡುತ್ತದೆ. ಸಣ್ಣ ಉದ್ಯಮಗಳಿಗೆ ಸಾಲ ಸಿಗುತ್ತದೆ. ಭವಿಷ್ಯದ ಇ-ಕಾಮರ್ಸ್‌ಗೆ ಪುಷ್ಟಿ ಸಿಗುತ್ತದೆ. ಇದು ಪುಣೆ ಟೈಕಾನ್ 2022ನಲ್ಲಿ ನಂದನ್ ನಿಲೇಕಣಿ ವ್ಯಕ್ತಪಡಿಸಿದ ಅನಿಸಿಕೆ.

ಆಂತರಿಕ ಚಟುವಟಿಕೆಯಿಂದ ಉದ್ಯೋಗ

ಆಂತರಿಕ ಚಟುವಟಿಕೆಯಿಂದ ಉದ್ಯೋಗ

"ಭಾರತ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ಉದ್ಯೋಗಸೃಷ್ಟಿ ಒಂದು. ರಫ್ತು ಮತ್ತು ಉತ್ಪಾದನೆ ಆಧರಿತವಾಗಿ ಚೀನಾ ಬೆಳವಣಿಗೆ ಸಾಧಿಸುತ್ತಿದೆ. ಆದರೆ, ಭಾರತ ಆಂತರಿಕ ಉದ್ಯಮ ಚಟುವಟಿಕೆ ಮೂಲಕ ಉದ್ಯೋಗ ಸೃಷ್ಟಿ ಮಾಡಬೇಕಾಗುತ್ತದೆ. ಇದು ಸಾಧ್ಯವಾಗಬೇಕಾದರೆ ಕೋಟಿಗಟ್ಟಲೆ ಸಣ್ಣ ಉದ್ಯಮಗಳು ಹುಲುಸಾಗಿ ಬೆಳೆಯಬೇಕಾಗುತ್ತದೆ.

"ಒಂದು ವೇಳೆ 1 ಕೋಟಿ ಸಣ್ಣ ಉದ್ದಿಮೆಗಳು ಚೆನ್ನಾಗಿ ನಡೆಯುತ್ತವೆ ಎಂದಿಟ್ಟುಕೊಳ್ಳಿ. ಒಂದೊಂದು ಉದ್ದಿಮೆ ಇಬ್ಬರಿಗೆ ಕೆಲಸ ಕೊಡುತ್ತದೆ ಎಂದರೆ 2 ಕೋಟಿ ಉದ್ಯೋಗ ಸೃಷ್ಟಿಯಾಗುತ್ತದೆ. ಹೀಗಾಗಿ, ಭಾರತದಲ್ಲಿ ಉದ್ಯೋಗ ಸೃಷ್ಟಿಯ ರಚನೆಯೇ ವಿಭಿನ್ನವಾಗಿರಬೇಕಾಗುತ್ತದೆ. ಸಣ್ಣ ಉದ್ದಿಮೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಮತ್ತು ಸಾಲದ ವ್ಯವಸ್ಥೆ ಸುಲಭವಾಗಿ ಆಗುವಂತಿರಬೇಕು. ಇದನ್ನು ಒಎನ್‌ಡಿಸಿ ಮತ್ತು ಎಎಎನ್ ಸಾಧ್ಯವಾಗಿಸುತ್ತದೆ. ಉದ್ದಿಮೆಗಳು ಯಶಸ್ವಿಯಾದರೆ ಉದ್ಯೋಗಸೃಷ್ಟಿ ಸಾಧ್ಯವಾಗುತ್ತದೆ" ಎಂದು ನಂದನ್ ನಿಲೇಕಣಿ ವಿಶ್ಲೇಷಣೆ ಮಾಡಿದರು.

ಪ್ರಾಡಕ್ಟ್ ಮತ್ತು ಸಲ್ಯೂಷನ್

ಪ್ರಾಡಕ್ಟ್ ಮತ್ತು ಸಲ್ಯೂಷನ್

"ಡಿಜಿಟಲ್ ಕಾಮರ್ಸ್‌ನ ಮುಕ್ತ ಜಾಲ (ಒಎನ್‌ಡಿಸಿ) ಬಳಸಿ ಹೆಚ್ಚೆಚ್ಚು ಕಂಪನಿಗಳು ಅಪ್ಲಿಕೇಶನ್ ಮತ್ತು ಸಲ್ಯೂಷನ್ ನಿರ್ಮಿಸುವುದಕ್ಕೆ ಸಾವು ಸಾಕ್ಷಿಯಾಗಲಿದ್ದೇವೆ. ಶ್ರೇಷ್ಠ ಸಂಸ್ಥೆಗಳ ನಿರ್ಮಾಣಕ್ಕೆ ಒಳ್ಳೆಯ ಅವಕಾಶ ಇದೆ. ಬಹಳಷ್ಟು ಕಂಪನಿಗಳು ಭಾರತಕ್ಕಾಗಿ ಪರಿಹಾರಗಳನ್ನು ನಿರ್ಮಿಸುವ ಕಾಯಕದಲ್ಲಿ ತೊಡಗಿವೆ. ಮೆಟ್ರೋ ನಗರಗಳ ಆಯ್ದ 2 ಕೋಟಿ ಜನರಿಗೆ ಮಾತ್ರ ಈ ಕಂಪನಿಗಳು ಉತ್ಪನ್ನ ಮತ್ತು ಪರಿಹಾರ ನಿರ್ಮಿಸುತ್ತಿಲ್ಲ, ಭಾರೀ ಮಹತ್ವಾಕಾಂಕ್ಷೆ ಹೊಂದಿರುವ ಮತ್ತು ಹೊಸ ತಂತ್ರಜ್ಞಾನ ಬಳಸುವ ತವಕದಲ್ಲಿರುವ ಸಣ್ಣ ನಗರಗಳಲ್ಲಿ ವಾಸಿಸುತ್ತಿರುವ 20 ಕೋಟಿ ಜನರಿಗೆ ಪ್ರಾಡಕ್ಟ್ ಮತ್ತು ಸಲ್ಯೂಷನ್ಸ್ ನಿರ್ಮಿಸಲಾಗುತ್ತಿದೆ" ಎಂದು ಆಧಾರ್ ತಂತ್ರಜ್ಞಾನದ ರೂವಾರಿ ಹೇಳಿದರು.

ಇದೇ ವೇಳೆ, ಭಾರತದ ಉದ್ಯೋಗಸೃಷ್ಟಿ ಹೇಗಾಗುತ್ತದೆ ಎಂಬುದಕ್ಕೆ ತಮ್ಮ ಆಧಾರ್ ಯೋಜನೆಯ ಉದಾಹರಣೆಯನ್ನೂ ನಿಲೇಕಣಿ ನೀಡಿದರು. ಷೇರುಪೇಟೆ ಬ್ರೋಕರ್ ಕಂಪನಿ ಝೀರೋಧ, ಪೇಮೆಂಟ್ ಆ್ಯಪ್‌ಗಳಾದ ಪೇಟಿಎಂ, ಫೋನ್ ಪೇ, ಭಾರತ್ ಪೇ ಮೊದಲಾದ ಸಂಸ್ಥೆಗಳಿಗೆ ಕೋಟ್ಯಂತರ ಗ್ರಾಹಕರು ಸಿಕ್ಕು ದೊಡ್ಡದಾಗಿ ಬೆಳೆಯಲು ಕಾರಣವಾಗಿದ್ದು ಆಧಾರ್. ರಿಲಾಯನ್ಸ್ ಜಿಯೋಗೆ ಒಂದು ದಿನದಲ್ಲಿ 10 ಲಕ್ಷ ಗ್ರಾಹಕರು ಮತ್ತು ಆರು ತಿಂಗಳಲ್ಲಿ 10 ಕೋಟಿ ಗ್ರಾಹಕರು ಸಿಗಲು ಸಹಾಯವಾಗಿದ್ದು ಆಧಾರ್. ಇದೇ ರೀತಿಯಲ್ಲಿ ಒಎನ್‌ಡಿಸಿಯ ಪ್ರಭಾವ ಇರುತ್ತದೆ ಎಂದು ನಂದನ್ ನಿಲೇಕಣಿ ವಿವರಿಸಿದರು.

ಡಿಜಿಟಲ್ ಇಂಡಿಯಾ ಪರಿಣಾಮ

ಡಿಜಿಟಲ್ ಇಂಡಿಯಾ ಪರಿಣಾಮ

"ಜನ ಜೀವನದ ಮೇಲೆ ಡಿಜಿಟಲ್ ಇಂಡಿಯಾ ಮಾಡಿರುವ ಪರಿಣಾಮವನ್ನು ನಾವು ಕಾಣುತ್ತಿದ್ದೇವೆ. ಜನಜೀವನ ಉತ್ತಮಗೊಳ್ಳಲು, ಸುಗಮಗೊಳ್ಳಲು ಮತ್ತು ಉತ್ಪನ್ನಶೀಲತೆ ಹೆಚ್ಚಿಸಲು ಇದು ಸಹಾಯವಾಗಿದೆ. ಹೊಸ ಪ್ರಯೋಗಗಳಿಗೆ ಒಳ್ಳೆಯ ವಾತಾವರಣ ನಿರ್ಮಿಸುತ್ತಿದೆ.

ಸರ್ಕಾರ ಮೂಲ ರೂಪ ಕೊಟ್ಟರೆ ಉದ್ದಿಮೆದಾರರು ಎಲ್ಲಾ ಪ್ರಯೋಗಗಳನ್ನು ಮಾಡುತ್ತಾರೆ. ಭಾರತ ಒಳ್ಳೆಯ ಸ್ಥಿತಿಯಲ್ಲಿದೆ. ಮುಂದಿನ ದಶಕ ಭಾರತಕ್ಕೆ ಸೇರಿದ್ದಾಗಿರುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.

"ದೇಶದ 130 ಕೋಟಿ ಜನರು ಆಧಾರ್ ಅನ್ನು ನಿಯಮಿತವಾಗಿ ಬಳಸುತ್ತಾರೆ. ಆಧಾರ್‌ನಲ್ಲಿ ದಿನಕ್ಕೆ 5 ಕೋಟಿ ಅಥೆಂಟಿಕೇಶನ್ ಆಗುತ್ತಿರುತ್ತದೆ. ದಿನಕ್ಕೆ 50 ಲಕ್ಷ ಕೆವೈಸಿ ನಡೆಯುತ್ತಿರುತ್ತದೆ. 26 ಕೋಟಿ ಜನರು ಯುಪಿಐ ಮೂಲಕ ಡಿಜಿಟಲ್ ಪೇಮೆಂಟ್ ಮಾಡುತ್ತಾರೆ. 15 ಕೋಟಿ ಜನರು ತಮ್ಮ ಬ್ಯಾಂಕ್ ಖಾತೆಗಳಿಂದ ಹಣ ವಿತ್‌ಡ್ರಾ ಮಾಡಲು ಆಧಾರ್ ಶಕ್ತ ಪೇಮೆಂಟ್ ಸಿಸ್ಟಂ ಬಳಸುತ್ತಾರೆ. ಇದು 40 ಕೋಟಿ ಜನರು ಒಂದಿಲ್ಲೊಂದು ರೀತಿಯಲ್ಲಿ ಡಿಜಿಟಲ್ ವಹಿವಾಟನ್ನು ಮಾಡುತ್ತಿರುವುದನ್ನು ಸೂಚಿಸುತ್ತದೆ" ಎಂದು ಇನ್ಫೋಸಿಸ್‌ನ ಮಾಜಿ ಛೇರ್ಮನ್ ನಂದನ್ ನಿಲೇಕಣಿ ತಿಳಿಸಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+