For Quick Alerts
ALLOW NOTIFICATIONS  
For Daily Alerts

ಚೆನ್ನಾಗಿ ನಿದ್ದೆ ಮಾಡೋರು ಬೇಕಾಗಿದ್ದಾರೆ, ಸ್ಟೈಪೆಂಡ್ 1 ಲಕ್ಷ ರುಪಾಯಿ

|

ಭಾರತದ ಸ್ಟಾರ್ಟ್ ಅಪ್ ವೊಂದು ಚೆನ್ನಾಗಿ ನಿದ್ದೆ ಮಾಡುವವರಿಗೆ ಇಂಟರ್ನ್ ಷಿಪ್ ನೀಡಲು ಮುಂದಾಗಿದೆ. ಈ ಕಂಪೆನಿಯಲ್ಲಿ ಇಂಟರ್ನಿಯಾಗಿ ನೀವು ಮಾಡಬೇಕಾದ್ದೆಲ್ಲ ಇಷ್ಟೇ: ಚೆನ್ನಾಗಿ ನಿದ್ದೆ ಮಾಡಬೇಕು. "ಸ್ಲೀಪ್ ಇಂಟರ್ನ್ ಷಿಪ್ 2020ರ ಬ್ಯಾಚ್"ಗೆ ಅಭ್ಯರ್ಥಿಗಳಿಗೆ ಹುಡುಕಾಡುತ್ತಿದೆ ಸ್ಲೀಪ್ ಸಲ್ಯೂಷನ್ಸ್ ಸ್ಟಾರ್ಟ್ ಅಪ್ 'ವೇಕ್ ಫಿಟ್'.

ತಮ್ಮ ವೆಬ್ ಸೈಟ್ ನಲ್ಲಿ ಈ ಇಂಟರ್ನ್ ಷಿಪ್ ಬಗ್ಗೆ ಮಾಹಿತಿ ನೀಡಿದ್ದು, ಅರ್ಜಿಯನ್ನು ಆಹ್ವಾನಿಸಿದೆ. ಹ್ಞಾಂ, ಈ ಇಂಟರ್ನ್ ಷಿಪ್ ಗೆ ಅರ್ಜಿ ಹಾಕಲು ಇರಬೇಕಾದ ಕೌಶಲ ಏನು ಗೊತ್ತಾ? ಎಂಥ ಸಣ್ಣ ಅವಕಾಶ ನೀಡಿದರೂ ನಿದ್ದೆ ಮಾಡುವಂಥ ಸಾಮರ್ಥ್ಯ ಹಾಗೂ ನಿದ್ದೆಯ ಬಗ್ಗೆ ಉತ್ಕಟವಾದ ಪ್ರೀತಿ ಇರಬೇಕು.

ಪ್ರತಿ ದಿನ ಒಂಬತ್ತು ಗಂಟೆಯಂತೆ, ಪ್ರತಿ ವಾರವೂ ನಿದ್ದೆ ಮಾಡಬೇಕು. ಹೀಗೆ ನೂರು ದಿನ ನಿದ್ದೆ ಮಾಡಬೇಕು. ಅದಕ್ಕಾಗಿ ಸ್ಟೈಪೆಂಡ್ ಒಂದು ಲಕ್ಷ ರುಪಾಯಿ ನೀಡಲಾಗುತ್ತದೆ. "ತಮ್ಮ ಜೀವನದಲ್ಲೇ ನಿದ್ದೆಯನ್ನೇ ಆದ್ಯತೆ ಮಾಡಿಕೊಂಡವರು, ಎಷ್ಟು ಸಮಯ ಬೇಕಾದರೂ ನಿದ್ದೆ ಮಾಡುವಂಥವರಿಗಾಗಿ ಹುಡುಕುತ್ತಿದ್ದೇವೆ. ನಿದ್ದೆಯ ಆರೋಗ್ಯದ ಬಗ್ಗೆ ಗಮನ ಸೆಳೆಯುವುದು ನಮ್ಮ ಉದ್ದೇಶ. ನಿದ್ದೆಯನ್ನು ಬಲು ಇಷ್ಟಪಡುವವರಿಗಾಗಿ ಎದುರು ನೋಡುತ್ತಿದ್ದೇವೆ" ಎಂದು ಕಂಪೆನಿಯ ಸಹ ಸಂಸ್ಥಾಪಕ ತಿಳಿಸಿದ್ದಾರೆ.

ಚೆನ್ನಾಗಿ ನಿದ್ದೆ ಮಾಡೋರು ಬೇಕಾಗಿದ್ದಾರೆ, ಸ್ಟೈಪೆಂಡ್ 1 ಲಕ್ಷ ರುಪಾಯಿ

ಇಂಟರ್ನಿಗಳ ನಿದ್ದೆಯ ಬಗೆಯನ್ನು ನಿಗಾ ಮಾಡಲಾಗುತ್ತದೆ. ಸಲಹೆ ನೀಡುವ ಸೆಷನ್ ಗಳು ಇರುತ್ತವೆ. ಜತೆಗೆ ಸ್ಲೀಪ್ ಟ್ರ್ಯಾಕರ್ಸ್ ನೀಡಲಾಗುತ್ತದೆ. ಈ ಕಂಪೆನಿಯ ಹಾಸಿಗೆಗಳನ್ನು ಬಳಸುವ ಮುನ್ನ ಹಾಗೂ ಬಳಸಿದ ನಂತರ ಅಭ್ಯರ್ಥಿಗಳ ನಿದ್ದೆಯ ಅನುಭವದಲ್ಲಿ ಏನಾದರೂ ಬದಲಾವಣೆ ಆಗಿದೆಯಾ ಎಂದು ನಿಗಾ ಮಾಡಲಾಗುತ್ತದೆ.

English summary

1 Lakh Stipend To Candidates Who Sleep Well

Indian start up company offering 1 lakh stipend to candidates who sleep well. Here is the complete details.
Story first published: Friday, November 29, 2019, 14:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X