For Quick Alerts
ALLOW NOTIFICATIONS  
For Daily Alerts

ಪ್ರಯಾಣಿಕರಿಗೆ 10 ನಿಮಿಷದಲ್ಲಿ ಕೊರೊನಾ ಫಲಿತಾಂಶ; ಎಮಿರೇಟ್ಸ್ ನಲ್ಲಿ ಮೊದಲು

|

ಎಮಿರೇಟ್ಸ್ ವಿಮಾನ ಯಾನ ಸಂಸ್ಥೆಯು ತನ್ನ ಪ್ರಯಾಣಿಕರಿಗೆ 10 ನಿಮಿಷಗಳ ಕೊರೊನಾ ರಕ್ತಪರೀಕ್ಷೆಯನ್ನು ಆರಂಭಿಸಿದೆ. ಮೂಲನೆಲೆಯಾದ ದುಬೈನಿಂದ ಹೊರಡುವ ಎಲ್ಲ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ ಎಂದು ಬುಧವಾರ ಹೇಳಿಕೊಂಡಿದೆ. ಹೀಗೆ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ಆರಂಭಿಸಿರುವ ಮೊದಲ ವಿಮಾನ ಯಾನ ಸಂಸ್ಥೆ ಎಮಿರೇಟ್ಸ್.

ಈ ತಿಂಗಳ ಆರಂಭದಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರ ವಿಮಾನ ಸೇವೆ ಆರಂಭಿಸಲಾಗಿದ್ದು, ಅದಕ್ಕೂ ಮುನ್ನ ಯುನೈಟೆಡ್ ಅರಬ್ ಎಮಿರೇಟ್ಸ್ ನ ಎಲ್ಲ ವಾಣಿಜ್ಯ ವಿಮಾನಗಳು ಕಾರ್ಯ ಚಟುವಟಿಕೆ ನಿಲ್ಲಿಸಿದ್ದವು. ಅಂದ ಹಾಗೆ ವಿಮಾನಗಳು ವಿದೇಶೀ ನಾಗರಿಕರಿಗಾಗಿ ಇದ್ದು, ಯಾರು ದೇಶ ಬಿಟ್ಟು ಹೋಗಲು ಬಯಸುತ್ತಾರೋ ಅಂಥವರು ತೆರಳುವುದಕ್ಕೆ ಅವಕಾಶ ಇದೆ. ಆದರೆ ದೇಶದೊಳಗೆ ಬರುವುದಕ್ಕೆ ಅವಕಾಶ ನೀಡುತ್ತಿಲ್ಲ.

ಈ ದಿನ ಟ್ಯುನಿಷಿಯಾಗೆ ತೆರಳಿದ ಎಲ್ಲ ಪ್ರಯಾಣಿಕರಿಗೆ ದುಬೈನಿಂದ ಹೊರಡುವ ಮುನ್ನ COVID- 19 ಪರೀಕ್ಷೆ ಮಾಡಲಾಗಿದೆ ಎಂದು ಎಮಿರೇಟ್ಸ್ ವಿಮಾನಯಾನ ಸಂಸ್ಥೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದುಬೈ ಆರೋಗ್ಯ ಪ್ರಾಧಿಕಾರವು ರಕ್ತ ಪರೀಕ್ಷೆ ನಡೆಸಿ, ಹತ್ತು ನಿಮಿಷದೊಳಗೆ ಫಲಿತಾಂಶ ನೀಡುತ್ತದೆ.

10 ನಿಮಿಷದಲ್ಲಿ ಕೊರೊನಾ ಫಲಿತಾಂಶ; ಎಮಿರೇಟ್ಸ್ ನಲ್ಲಿ ಮೊದಲು

ಯುಎಇಯಲ್ಲಿ ದುಬೈ ಸೇರಿದಂತೆ ಏಳು ಎಮಿರೇಟ್ಸ್ ಗಳಿವೆ. ಈಗಾಗಲೇ ಐದು ಸಾವಿರ ಕೊರೊನಾ ಪಾಸಿಟಿವ್ ಹಾಗೂ ಇಪ್ಪತ್ತೆಂಟು ಸಾವಿನ ಪ್ರಕರಣಗಳು ದಾಖಲಾಗಿದೆ. ಏಪ್ರಿಲ್ 4ರಂದು ದುಬೈನಲ್ಲಿ ಎರಡು ವಾರಗಳ ಕರ್ಫ್ಯೂ ಘೋಷಿಸಲಾಗಿದೆ.

English summary

10 Minutes Corona Test For Emirates Airlines Passengers

This is the first, Emirates airlines conducting for it's outgoing passengers.
Story first published: Wednesday, April 15, 2020, 20:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X