10 ದೇಶಿ ಕಂಪೆನಿಗಳ 4.22 ಲಕ್ಷ ಕೋಟಿ ಷೇರು ಮೌಲ್ಯ ವಾರದಲ್ಲೇ ಉಡೀಸ್
ದೇಶದ ಅತ್ಯಂತ ಮೌಲ್ಯಯುತ 10 ಕಂಪೆನಿಗಳು ಮಾರ್ಚ್ 9ರಿಂದ 13ನೇ ತಾರೀಕಿನ ಮಧ್ಯೆ 4,22,399.44 ಕೋಟಿ ರುಪಾಯಿ ನಷ್ಟ ಅನುಭವಿಸಿವೆ. ಇದರಲ್ಲಿ ಟಿಸಿಎಸ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿವೆ. ಕೇವಲ ಒಂದು ವಾರದಲ್ಲಿ ಸೆನ್ಸೆಕ್ಸ್ 3,473.14 ಪಾಯಿಂಟ್ಸ್ ಇಳಿಕೆ ಕಂಡಿದೆ.
ಜಾಗತಿಕ ಪಿಡುಗಾದ ಕೊರೊನಾ ವೈರಾಣು ಭೀತಿಗೆ ವಿಶ್ವದ ನಾನಾ ಷೇರು ಮಾರುಕಟ್ಟೆಗಳಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಿದೆ. ಟಿಸಿಎಸ್ ಮಾರುಕಟ್ಟೆ ಬಂಡವಾಳ ಮೌಲ್ಯ 1,16,549.07 ಕೋಟಿ ರುಪಾಯಿ ನಷ್ಟ ಅನುಭವಿಸಿದೆ. ಇನ್ನು ರಿಲಯನ್ಸ್ ಇಂಡಸ್ಟ್ರೀಸ್ 1,03,425.15 ಕೋಟಿ ಕರಗಿದೆ.

ಯಾವ ಕಂಪೆನಿಗಳ ನಷ್ಟ ಪ್ರಮಾಣ ಎಷ್ಟು?
ಇನ್ಫೋಸಿಸ್ 41,315.98 ಕೋಟಿ
ಎಚ್ ಡಿಎಫ್ ಸಿ ಬ್ಯಾಂಕ್ 34,919.51 ಕೋಟಿ
ಹಿಂದೂಸ್ತಾನ್ ಯುನಿಲಿವರ್ 33,208.35 ಕೋಟಿ
ಕೊಟಕ್ ಮಹೀಂದ್ರಾ ಬ್ಯಾಂಕ್ 30,931.1 ಕೋಟಿ
ಐಸಿಐಸಿಐ ಬ್ಯಾಂಕ್ 25,098.54 ಕೋಟಿ
ಬಜಾಜ್ ಫೈನಾನ್ಸ್ 16,320.81 ಕೋಟಿ
ಭಾರ್ತಿ ಏರ್ ಟೆಲ್ 13,611.62 ಕೋಟಿ
ಎಚ್ ಡಿಎಫ್ ಸಿ 7013.31 ಕೋಟಿ


Click it and Unblock the Notifications