ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಒಂದೇ ದಿನದಲ್ಲಿ 2467 ಪಾಯಿಂಟ್ ಕುಸಿದು, ಆ ನಂತರ ಅಲ್ಲಿಂದ ಐನೂರು ಅಂಶಗಳ ಚೇತರಿಕೆ ಕಂಡು, 2020 ಮಾರ್ಚ್ 9ನೇ ತಾರೀಕಿನಂದು 1941.67 ಪಾಯಿಂಟ್ ನೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿದೆ. ಅಕ್ಷರಶಃ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ.
ನಿಮ್ಮೆದುರು ಒಂದು ಲೆಕ್ಕಾಚಾರ ಇಡಲಾಗುತ್ತಿದೆ. ಜನವರಿ 14ನೇ ತಾರೀಕಿನಂದು ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ಅಲ್ಲಿಂದ ಆಚೆಗೆ, ಮಾರ್ಚ್ 9ನೇ ತಾರೀಕಿಗೆ ಗರಿಷ್ಠ ಕುಸಿತ ಕಂಡ ಟಾಪ್ ಟೆನ್ ಷೇರುಗಳು ಅವುಗಳ ಜನವರಿ ಹದಿನಾಲ್ಕು ಮತ್ತು ಮಾರ್ಚ್ ಒಂಬತ್ತರ ಬೆಲೆಗಳ ವಿವರ ಇಲ್ಲಿದೆ.

ಭಾರತ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ
* ಒಎನ್ ಜಿಸಿ 125.10 (ಜನವರಿ 14), 74.65 (ಮಾರ್ಚ್ 9)
* ಇಂಡಸ್ ಇಂಡ್ ಬ್ಯಾಂಕ್ 1481.10 (ಜನವರಿ 14), 906.20 (ಮಾ17 40 10ರ್ಚ್ 9)
* ಟಾಟಾ ಸ್ಟೀಲ್ 498.45 (ಜನವರಿ 14), 322.30 (ಮಾರ್ಚ್ 9)
* ರಿಲಯನ್ಸ್ ಇಂಡಸ್ಟ್ರೀಸ್ 1529.05 (ಜನವರಿ 14), 1113.15 (ಮಾರ್ಚ್ 9)
* ಐಟಿಸಿ 243.30 (ಜನವರಿ 14), 177.20 (ಮಾರ್ಚ್ 9)
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 327.90 (ಜನವರಿ 14), 253.70 (ಮಾರ್ಚ್ 9)
* ಹೀರೋ ಮೋಟೋಕಾರ್ಪ್ 2408.80 (ಜನವರಿ 14), 1957.25 (ಮಾರ್ಚ್ 9)
* ಎಚ್ ಡಿಎಫ್ ಸಿ 2498.70 (ಜನವರಿ 14), 2028.80 (ಮಾರ್ಚ್ 9)
* ಮಹೀಂದ್ರಾ ಅಂಡ್ ಮಹೀಂದ್ರಾ 562.50 (ಜನವರಿ 14), 463.10 (ಮಾರ್ಚ್ 9)
* ಬಜಾಜ್ ಆಟೋ 3,101.50 (ಜನವರಿ 14), 2,577.50 (ಮಾರ್ಚ್ 9)


Click it and Unblock the Notifications