For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಹೆಚ್ಚಿದ ಕೋಟ್ಯಧಿಪತಿಗಳ ಸಂಖ್ಯೆ: 1007 ಜನರ ಬಳಿ 1000 ಕೋಟಿ ಸಂಪತ್ತು!

|

ವಿಶ್ವಕ್ಕೆ ಕೋವಿಡ್-19 ಆವರಿಸದ ಮೇಲಂತೂ ಮಿಲಿಯನ್‌ಗಟ್ಟಲೆ ಜನರು ಪ್ರಾಣ ಕಳೆದುಕೊಂಡ್ರೆ, ಕೋಟಿಗಟ್ಟಲೆ ಜನರು ಬದುಕನ್ನು ಕಳೆದುಕೊಂಡ್ರು, ಲೆಕ್ಕವಿಲ್ಲದಷ್ಟು ಜನರು ಉದ್ಯೋಗದಿಂದ ಹೊರಬಿದ್ರೆ, ಅಂದಾಜಿಗೆ ಸಿಗದಷ್ಟು ನಷ್ಟವು ಉಂಟಾಗಿದೆ.

ಆದರೆ ಇದೇ ಸಮಯದಲ್ಲಿ ಅನೇಕ ಶ್ರೀಮಂತರ ಮತ್ತಷ್ಟು ಸಂಪತ್ತನ್ನಗಳಿಸಿದ್ದಾರೆ. ಕಳೆದ ವರ್ಷ, ಭಾರತದಲ್ಲಿ 1007 ಜನರ ಸಂಪತ್ತು 1000 ಕೋಟಿ ರೂ. ನಷ್ಟಿದೆ. ಇತ್ತೀಚೆಗೆ ಬಿಡುಗಡೆಯಾದ ಹುರುನ್ ಇಂಡಿಯಾ ವರದಿಯಲ್ಲಿ ಈ ಅಂಕಿ ಅಂಶಗಳು ಬಹಿರಂಗವಾಗಿದ್ದು, ದೇಶದಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯೂ ಹೆಚ್ಚಾಗಿದೆ.

1000 ಕೋಟಿ ಹೊಂದಿರುವವರ ಸಂಖ್ಯೆ 1000 ದಾಟಿದೆ

1000 ಕೋಟಿ ಹೊಂದಿರುವವರ ಸಂಖ್ಯೆ 1000 ದಾಟಿದೆ

ಹುರುನ್ ಇಂಡಿಯಾ ವರದಿ ವರದಿಯ ಪ್ರಕಾರ, ದೇಶದಲ್ಲಿ 1,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಜನರ ಸಂಖ್ಯೆ 1,000 ದಾಟಿದೆ. ಈಗ ದೇಶದಲ್ಲಿ ಅಂತಹವರ ಸಂಖ್ಯೆ 1007 ಕ್ಕೆ ಏರಿದೆ. ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2021 ರ ಪ್ರಕಾರ, 894 ವ್ಯಕ್ತಿಗಳು ಸಂಪತ್ತಿನ ಹೆಚ್ಚಳವನ್ನು ನೋಡಿದ್ದಾರೆ ಅಥವಾ ಬಹುತೇಕ ಒಂದೇ ರೀತಿ ಇದ್ದಾರೆ. 229 ಹೊಸ ಜನರು ಈ ಪಟ್ಟಿಗೆ ಸೇರಿದ್ದಾರೆ. ಅದೇ ಸಮಯದಲ್ಲಿ, 113 ಸಂಪತ್ತಿನ ಇಳಿಕೆ ಕಂಡುಬಂದಿದೆ.

ಜಗತ್ತಿನ ಅತ್ಯಂತ ದುಬಾರಿ ಮತ್ತು ಅಗ್ಗದ ಪೆಟ್ರೋಲ್ ದರ ಹೊಂದಿರುವ ರಾಷ್ಟ್ರಗಳುಜಗತ್ತಿನ ಅತ್ಯಂತ ದುಬಾರಿ ಮತ್ತು ಅಗ್ಗದ ಪೆಟ್ರೋಲ್ ದರ ಹೊಂದಿರುವ ರಾಷ್ಟ್ರಗಳು

ದೇಶದಲ್ಲಿದ್ದಾರೆ 237 ಬಿಲಿಯನೇರ್ಸ್‌

ದೇಶದಲ್ಲಿದ್ದಾರೆ 237 ಬಿಲಿಯನೇರ್ಸ್‌

ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಾದಂತೆ, ಹುರುನ್ ಭಾರತದ ಈ ವರದಿಯಲ್ಲಿ, ಪ್ರಸ್ತುತ ದೇಶದಲ್ಲಿ 237 ಬಿಲಿಯನೇರ್‌ಗಳಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷ 58 ಹೊಸ ಜನರು ಈ ಪಟ್ಟಿಯಲ್ಲಿ ಹೆಚ್ಚಿದ್ದಾರೆ. ರಾಸಾಯನಿಕ ಮತ್ತು ಸಾಫ್ಟ್‌ವೇರ್ ವಲಯದಲ್ಲಿ ಕೆಲಸ ಮಾಡುವ ಅಥವಾ ವ್ಯಾಪಾರ ಮಾಡುತ್ತಿರುವವರ ಹೆಸರುಗಳು ಈ ಪಟ್ಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿವೆ. ಫಾರ್ಮಾ ವಲಯವು ಎರಡನೇ ಸ್ಥಾನದಲ್ಲಿ ಮುಂದುವರಿಯಿತು. ಈ ಪಟ್ಟಿಯಲ್ಲಿ ಫಾರ್ಮಾ ವಲಯದ 130 ಜನರಿದ್ದಾರೆ.

ಮುಖೇಶ್ ಅಂಬಾನಿ ಈಗಲೂ ನಂಬರ್ 1 ಶ್ರೀಮಂತ
 

ಮುಖೇಶ್ ಅಂಬಾನಿ ಈಗಲೂ ನಂಬರ್ 1 ಶ್ರೀಮಂತ

ಮುಖೇಶ್ ಅಂಬಾನಿ ಈಗಲೂ ದೇಶದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಯಾಗಿದ್ದಾರೆ. ಹುರುನ್ ಇಂಡಿಯಾ ವರದಿಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 10 ನೇ ವರ್ಷಕ್ಕೆ ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದು, ನಿವ್ವಳ ಆಸ್ತಿ ಮೌಲ್ಯ 7,18,000 ಕೋಟಿ ರೂ. ನಷ್ಟಿದೆ.

ಭಾರತದ ಶ್ರೀಮಂತ ಕುಟುಂಬ ಮುಕೇಶ್ ಅಂಬಾನಿಯು ವರ್ಷದಲ್ಲಿ ದಿನಕ್ಕೆ 169 ಕೋಟಿ ಗಳಿಸಿದರು, ಮತ್ತು ಅವರ ಸಂಪತ್ತು ಶೇಕಡ 9 ರಷ್ಟು ಏರಿಕೆಯಾಗಿ 7,18,000 ಕೋಟಿ ರೂಪಾಯಿಗೆ ತಲುಪಿದೆ ಎಂದು ಐಐಎಫ್ಎಲ್ ವೆಲ್ತ್-ಹುರುನ್ ಇಂಡಿಯಾ ವರದಿ ತೋರಿಸಿದೆ.

 

ಗೌತಮ್ ಅದಾನಿ 2ನೇ ಅತಿದೊಡ್ಡ ಶ್ರೀಮಂತ

ಗೌತಮ್ ಅದಾನಿ 2ನೇ ಅತಿದೊಡ್ಡ ಶ್ರೀಮಂತ

ಅಂಬಾನಿ ಬಳಿಕ ಗೌತಮ್ ಅದಾನಿ ಮತ್ತು ಅವರ ಕುಟುಂಬವು 5,05,900 ಕೋಟಿ ಸಂಪತ್ತಿನೊಂದಿಗೆ ಬರುತ್ತದೆ. ಈ ಪಟ್ಟಿಯ ಪ್ರಕಾರ, ಅದಾನಿ ಸಮೂಹದ ಸಂಯೋಜಿತ ಮಾರುಕಟ್ಟೆ ಕ್ಯಾಪ್ 9 ಲಕ್ಷ ಕೋಟಿ ರೂ. ಆಗಿದ್ದು ಮಾರುಕಟ್ಟೆ ಕ್ಯಾಪ್ ಕೂಡ ಹೆಚ್ಚಾಗಿದೆ.

ಎಚ್‌ಸಿಎಲ್‌ ಶಿವ್‌ ನಾಡಾರ್ ಸಂಪತ್ತು ಶೇ. 67ರಷ್ಟು ಏರಿಕೆ

ಎಚ್‌ಸಿಎಲ್‌ ಶಿವ್‌ ನಾಡಾರ್ ಸಂಪತ್ತು ಶೇ. 67ರಷ್ಟು ಏರಿಕೆ

ಎಚ್‌ಸಿಎಲ್‌ನ ಶಿವ್ ನಾಡಾರ್ ಮತ್ತು ಅವರ ಕುಟುಂಬದ ಸಂಪತ್ತು ಶೇಕಡಾ 67 ರಷ್ಟು ಏರಿಕೆಯಾಗಿ 2,36,600 ಕೋಟಿ ರೂ. ತಲುಪಿದೆ. ದೆಹಲಿ ಮೂಲದ ನಾಡರ್ ದಿನಕ್ಕೆ 260 ಕೋಟಿ ರೂ. ಗಳಿಸಿದ್ದಾರೆ

ಲಕ್ಷೀ ಮಿತ್ತಲ್ ಸಂಪತ್ತು ಏರಿಕೆ

ಲಕ್ಷೀ ಮಿತ್ತಲ್ ಸಂಪತ್ತು ಏರಿಕೆ

ಲಂಡನ್ ಮೂಲದ ಎಲ್ಎನ್ ಮಿತ್ತಲ್ (71) ಮತ್ತು ಆರ್ಸೆಲರ್ ಮಿತ್ತಲ್ ಕುಟುಂಬದ ಸಂಪತ್ತು ಶೇ 187 ರಷ್ಟು ಏರಿಕೆಯಾಗಿ 1,74,400 ಕೋಟಿ ರೂ. ತಲುಪಿದೆ. ಈ ವರ್ಷದಲ್ಲಿ ಅವರು ದಿನಕ್ಕೆ 312 ಕೋಟಿ ರೂ. ಏರಿಕೆಯಾಗಿದೆ.

ಪೂನವಲ್ಲಾ ಕುಟುಂಬಕ್ಕೆ ದಿನಕ್ಕೆ 190 ಕೋಟಿ ರೂಪಾಯಿ ಆದಾಯ

ಪೂನವಲ್ಲಾ ಕುಟುಂಬಕ್ಕೆ ದಿನಕ್ಕೆ 190 ಕೋಟಿ ರೂಪಾಯಿ ಆದಾಯ

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಲೀಕತ್ವ ಹೊಂದಿರುವ ಪುಣೆ ಮೂಲದ ಸೈರಸ್ ಎಸ್ ಪೂನವಲ್ಲಾ (80) ಮತ್ತು ಅವರ ಕುಟುಂಬವು ದಿನಕ್ಕೆ 190 ಕೋಟಿ ರೂಪಾಯಿ ಆದಾಯಗಳಿಸಿದೆ. ಕುಟುಂಬದ ಸಂಪತ್ತು ಶೇಕಡಾ 74 ರಷ್ಟು ಏರಿಕೆಯಾಗಿ 1,63,700 ಕೋಟಿ ರೂಪಾಯಿಗಳಿಗೆ ಏರಿಕೆಗೊಂಡಿದೆ.

ರಾಧಾಕಿಶನ್ ದಮಾನಿ ದಿನಕ್ಕೆ ಗಳಿಸಿದ್ದು 184 ಕೋಟಿ

ರಾಧಾಕಿಶನ್ ದಮಾನಿ ದಿನಕ್ಕೆ ಗಳಿಸಿದ್ದು 184 ಕೋಟಿ

ಅವೆನ್ಯೂ ಸೂಪರ್‌ಮಾರ್ಟ್‌ ಮಾಲೀಕತ್ವ ಹೊಂದಿರುವ ಮುಂಬೈ ಮೂಲದ ರಾಧಾಕಿಶನ್ ದಮಾನಿ ಮತ್ತು ಕುಟುಂಬವು ದಿನಕ್ಕೆ 184 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದು ಭಾರತದ ಏಳನೇ ಶ್ರೀಮಂತ ಕುಟುಂಬವಾಗಿದೆ.

ದಮಾನಿ ಹೊರತುಪಡಿಸಿ, ಕುಮಾರ್ ಮಂಗಳಂ ಬಿರ್ಲಾ (54) ಮತ್ತು ಅವರ ಕುಟುಂಬವು ಒಂಬತ್ತನೇ ಶ್ರೀಮಂತರಾಗಿದ್ದು, 1,22,200 ಕೋಟಿ ಸಂಪತ್ತನ್ನು ಹೊಂದಿದೆ. ಇವರ ಸಂಪತ್ತು ಒಟ್ಟಾರೆ ಶೇಕಡಾ 230ರಷ್ಟು ಹೆಚ್ಚಳವಾಗಿದ್ದು, ಈ ಕುಟಂಬವು ದಿನಕ್ಕೆ 240 ಕೋಟಿ ರೂ. ಆದಾಯಗಳಿಸಿದೆ.

ಇದರ ನಡುವೆ ಕ್ಯಾಲಿಫೋರ್ನಿಯಾ ಮೂಲದ ಎಂಟರ್‌ಪ್ರೈಸ್ ಕ್ಲೌಡ್ ಸೆಕ್ಯುರಿಟಿ ಸಂಸ್ಥೆ ZSCALER ಅನ್ನು ಮುನ್ನಡೆಸುತ್ತಿರುವ ಸ್ಯಾನ್ ಜೋಸ್ ಮೂಲದ ಜಯ್ ಚೌಧರಿ ಅವರ ಕುಟುಂಬದ ಸಂಪತ್ತು ಶೇಕಡಾ 85 ರಷ್ಟು ಏರಿಕೆಯಾಗಿ 1,21,600 ಕೋಟಿಗೆ ತಲುಪಿದ್ದು 10 ನೇ ಸ್ಥಾನದಲ್ಲಿದ್ದಾರೆ. ಚೌಧರಿ 2021 ರಲ್ಲಿ ದಿನಕ್ಕೆ 153 ಕೋಟಿ ರೂ. ಗಳಿಸಿದ್ದಾರೆ.

 

English summary

1007 Super Rich People See 51 Percent Rise In Wealth In 2021

Last year, the wealth of 1007 people in India was Rs 1000 crore. There is. These figures were revealed in the recently released Hurun India report, which also shows the number of millionaires in the country
Story first published: Saturday, October 2, 2021, 14:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X