ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ನ 1200 ಸಿಬ್ಬಂದಿ ಧರಣಿ

ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಇರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂ) ನಲ್ಲಿ ನವೆಂಬರ್ 9, 2020ರಿಂದ 1200 ಸಿಬ್ಬಂದಿ ಧರಣಿ ಆರಂಭಿಸಿದ್ದಾರೆ. ಇದು ಕಾನೂನುಬಾಹಿರ ಎಂದು ಕಂಪೆನಿ ಹೇಳಿದೆ. ಈ ಸಂಬಂಧವಾಗಿ ಡೀಲರ್ ಗಳಿಗೆ ಹಾಗೂ ಸರಬರಾಜುದಾರರಿಗೆ ಟೊಯೊಟಾ ಕಿರ್ಲೋಸ್ಕರ್ ನಿಂದ್ ಆಂತರಿಕ ಸುತ್ತೋಲೆ ಹೊರಡಿಸಲಾಗಿದೆ.

ಟಿಕೆಎಂ- ಇಯು ಕಚೇರಿ ಸಿಬ್ಬಂದಿಯೂ ಸೇರಿ ಒಕ್ಕೂಟದ ಸದಸ್ಯರು ಈ ಕಾನೂನುಬಾಹಿರ ಧರಣಿಯಲ್ಲಿ ಭಾಗವಹಿಸಿದ್ದಾರೆ. ಕಂಪೆನಿಯ ಆವರಣದೊಳಗೇ ಧರಣಿ ನಡೆಸುತ್ತಿದ್ದಾರೆ. ಒಕ್ಕೂಟದ ಸದಸ್ಯರೊಬ್ಬರು ಕಂಪೆನಿಯ ಮ್ಯಾನೇಜರ್ ಅನ್ನು ನಿಂದಿಸಿ, ಬೆದರಿಕೆಯೊಡ್ಡಿದ್ದರು. ಆ ದುರ್ನಡತೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಒಕ್ಕೂಟದ ಸದಸ್ಯನ ವಿರುದ್ಧ ಕೈಗೊಂಡ ಶಿಸ್ತಿನ ಕ್ರಮವನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯುತ್ತಿದೆ ಎಂದು ಕಂಪೆನಿ ತಿಳಿಸಿದೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ನ  1200 ಸಿಬ್ಬಂದಿ ಧರಣಿ

ಸುತ್ತೋಲೆಯಲ್ಲಿ ತಿಳಿಸಿರುವ ಪ್ರಕಾರ, 1200 ಸದಸ್ಯರು ಈ ಕಾನೂನುಬಾಹಿರ ಧರಣಿ ಮಾಡುತ್ತಿದ್ದು, ಮತ್ತು ಕಂಪೆನಿಯ ಆವರಣದೊಳಗೆ ಕಾನೂನಿಗೆ ವಿರುದ್ಧವಾಗಿ ಉಳಿದುಕೊಂಡಿದ್ದಾರೆ. ಇದರಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಸಿಬ್ಬಂದಿಯ ಭದ್ರತೆಗೆ, ವಸ್ತುಗಳಿಗೆ ಆತಂಕ ಇದೆ. ನವೆಂಬರ್ 10ರಿಂದ ಮುಂದಿನ ನೋಟಿಸ್ ತನಕ ಲಾಕ್ ಔಟ್ ಘೋಷಣೆ ಮಾಡಿದೆ ಬೇರೆ ದಾರಿ ಇಲ್ಲ ಎಂದು ಕಂಪೆನಿ ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+