ಬೆಂಗಳೂರು, ಏಪ್ರಿಲ್ 17: ಭಾರತ ಮಾತ್ರವಲ್ಲ ಇಡೀ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿರುವವರು ಮುಕೇಶ್ ಅಂಬಾನಿ. ಇತ್ತೀಚೆಗೆ ತಮ್ಮ ಮಗನ ಮದುವೆಯನ್ನು ಕೂಡ ನೂರಾರು ಕೋಟಿ ರೂ. ಖರ್ಚು ಮಾಡಿ ಬಹಳ ಅದ್ದೂರಿಯಾಗಿ ಮಾಡಿದ್ದರು.
ಮುಕೇಶ್ ಅಂಬಾನಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ. ಕುಟುಂಬದ ಆಸ್ತಿ ವಿಭಜನೆಯಾದ ಬಳಿಕ ಅನಿಲ್ ಅಂಬಾನಿ ಅವರು ಆರ್ಥಿಕವಾಗಿ ಸಾಲದ ಸುಳಿಗೆ ಸಿಲುಕಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದರು. ಆದರೆ, ಇದೀಗ ಅನಿಲ್ ಅಂಬಾನಿ ಅವರ ಕಂಪೆನಿಗಳು ಕೂಡ ಆರ್ಥಿಕವಾಗಿ ನಿಧಾನಕ್ಕೆ ಚೇತರಿಕೆ ಕಾಣುತ್ತಿದೆ. ಅದರಲ್ಲಿಯೂ ಅನಿಲ್ ಅಂಬಾನಿ ಅವರ ರಿಲಯನ್ಸ್ ಪವರ್ ಕಂಪೆನಿ ಷೇರುಗಳು ಏರುಗತಿಯಲ್ಲಿವೆ.

2020ರ ಮಾರ್ಚ್ 27ರಂದು ರಿಲಯನ್ಸ್ ಷೇರು ಬೆಲೆ 1.13ರಷ್ಟು ಇತ್ತು. ರಿಲಯನ್ಸ್‌ನ ಇತ್ತೀಚಿನ ಫೈಲಿಂಗ್ ಮಾಹಿತಿಯಂತೆ ರಿಲಯನ್ಸ್ ಪವರ್ ಕಂಪನಿಯು ಜೆಎಸ್‌ಡಬ್ಲ್ಯು ರಿನಿಯ್ಯುವೇಬಲ್ ಎನರ್ಜಿಯಿಂದ 132.39 ಕೋಟಿ ರೂ. ಪಡೆದುಕೊಂಡಿದೆ. ಈ ಡೀಲ್ ಪ್ರಕಾರ, ರಿಲಯನ್ಸ್ ಪವರ್ ಮಹಾರಾಷ್ಟ್ರದ ವಾಶ್‌ಪೇಟ್‌ನ 45 ಮೆ.ವ್ಯಾ. ಪವರ್ ಪ್ರಾಜೆಕ್ಟ್‌ನ ಡೀಲಿಂಗ್ ಆಗಿದೆ.
ಜೆಎಸ್‌ಡಬ್ಲ್ಯು ಎನರ್ಜಿಯ 7.2 ಜಿಡಬ್ಲ್ಯು, 206 ಜಿಡಬ್ಲ್ಯು ಪವನ ಹಾಗೂ ಜಲವಿದ್ಯುತ್‌ನಂತ ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಇದು ಒಟ್ಟು 12.5 ಜಿಡ್ಲ್ಯು ಲಾಕ್-ಇನ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದರ ಹೊರತಾಗಿ ಕಂಪೆನಿಯು ಬ್ಯಾಟರಿ ಶಕ್ತಿಯ ಶೆಖರಣಾ ವ್ಯವಸ್ಥೆ ಮತ್ತು ಹೈಡ್ರೋ ಪಂಪ್ಡ್ ಸ್ಟೋರೇಜ್ ಯೋಜನೆ ಮೂಲಕ 3.4ಜಿಡಬ್ಲ್ಯುಎಚ್ ಲಾಕ್-ಇನ್ ಇಂಧನದ ಶೇಖರಣಾ ಸಾಮರ್ಥ್ಯವನ್ನು ಕೂಡ ಹೊಂದಿದೆ.
ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಡಿಬಿಎಸ್ ಬ್ಯಾಂಕ್‌ನ ಸಾಲವನ್ನು ತೀರಿಸಿದ ಬಳಕ ಈ ದೊಡ್ಡ ಮೊತ್ತದ ಡೀಲ್ ನಡೆದಿದೆ. ಈ ಎಲ್ಲ ಬ್ಯಾಂಕ್‌ಗಳು ಸುಮಾರು 400 ಕೋಟಿ ರೂ.ನಷ್ಟು ನೀಡಿದ್ದು, ಆ ಪೈಕಿ ಸಾಲದ ಶೇ.30-35ರಷ್ಟು ಪ್ರಿನ್ಸಿಪಲ್ ಮೊತ್ತವನ್ನು ಪಾವತಿಸಿದೆ. ಅಲ್ಲದೆ, ಅನಿಲ್ ಅಂಬಾನಿಯ ಕಂಪೆನಿಯು ಜೆಸಿ ಫ್ಲವರ್ಸ್‌ನ 2100 ಕೋಟಿ ರೂ. ಸಾಲ ವಿಲೇವಾರಿ ಮಾಡುವುದಕ್ಕೂ ಮುಂದಾಗಿರುವುದಾಗಿ ವರದಿಯಾಗಿದೆ.
ಈ ವರ್ಷದಲ್ಲಿ ರಿಲಯನ್ಸ್ ಪವರ್ ತನ್ನ ಅರುಣಾಚಲ ಪ್ರದೇಶಸದ ಕಲೈನ 1200 2ನೇ ಹಂತದ ಜಲ ವಿದ್ಯುತ್ ಯೋಜನೆಯನ್ನು ಕೂಡ 128.39 ಕೋಟಿ ರೂ.ಗೆ ಟಿಎಚ್‌ಡಿಸಿ ಇಂಡಿಯಾಕ್ಕೆ ಮಾರಾಟ ಮಾಡುವ ಒಪ್ಪಂದಕ್ಕೂ ಸಹಿ ಮಾಡಿದೆ.


Click it and Unblock the Notifications