For Quick Alerts
ALLOW NOTIFICATIONS  
For Daily Alerts

ಎರಡನೇ ಹಂತ: ಈ ವಾರ ಇನ್ಫೋಸಿಸ್‌ನ 15 ಪರ್ಸೆಂಟ್ ಉದ್ಯೋಗಿಗಳು ಕಚೇರಿಗೆ ಮರಳುವ ನಿರೀಕ್ಷೆ

|

ಭಾರತದ ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಲಿಮಿಟೆಡ್ ಈ ವಾರ ಎರಡನೇ ಹಂತದಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಲಿದ್ದು, ಅದರ 15 ಪರ್ಸೆಂಟ್ ಉದ್ಯೋಗಿಗಳು ಕಚೇರಿಗೆ ಮರಳುವ ನಿರೀಕ್ಷೆಯಿದೆ.

 

ಒಟ್ಟು ಉದ್ಯೋಗಿಗಳು 2,42,371 ರೊಂದಿಗೆ, 15 ಪರ್ಸೆಂಟ್ ಅಂದರೆ ಅಂದಾಜು 36,350 ಇನ್ಫೋಸಿಸ್ ಉದ್ಯೋಗಿಗಳು ಕಚೇರಿಗೆ ಮರಳಬಹುದು.

 

ಮೊದಲ ಹಂತದಲ್ಲಿ, ಇನ್ಫೋಸಿಸ್ ತನ್ನ ಕಚೇರಿಗಳನ್ನು 5 ಪರ್ಸೆಂಟ್‌ಕ್ಕಿಂತ ಕಡಿಮೆ ಸಾಮರ್ಥ್ಯದೊಂದಿಗೆ ಪುನಃ ತೆರೆಯಿತು ಎಂದು ಇನ್ಫೋಸಿಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಸಮೂಹ ಮಾನವ ಸಂಪನ್ಮೂಲ ಮುಖ್ಯಸ್ಥ ಕ್ರಿಶ್ ಶಂಕರ್ ಹೇಳಿದರು. "ನಾವು ಈ ವಾರ ಎರಡನೇ ಹಂತವನ್ನು ಪ್ರಾರಂಭಿಸುತ್ತೇವೆ ಮತ್ತು ಹಲವಾರು ವಾರಗಳಲ್ಲಿ ಕ್ರಮೇಣ ಹೆಚ್ಚಾಗುತ್ತೇವೆ." ಎಂದಿದ್ದಾರೆ.

ಇನ್ಫೋಸಿಸ್‌ನ 15 ಪರ್ಸೆಂಟ್ ಉದ್ಯೋಗಿಗಳು ಕಚೇರಿಗೆ ಮರಳುವ ನಿರೀಕ್ಷೆ

ಹಂತಹಂತವಾಗಿ ಕಾರ್ಯಾಚರಣೆಯನ್ನು ಪುನರಾರಂಭಿಸುವುದು ಕೈಗಾರಿಕಾ ಸಂಸ್ಥೆ ನಾಸ್ಕಾಮ್‌ನ ಸಲಹೆಗೆ ಅನುಗುಣವಾಗಿ ಐಟಿ ಕಂಪೆನಿಗಳು ಮೇ ಅಂತ್ಯದ ವೇಳೆಗೆ ಕೇವಲ 10 ರಿಂದ 15 ಪರ್ಸೆಂಟ್ ಉದ್ಯೋಗಿಗಳನ್ನು ಮಾತ್ರ ಕಚೇರಿಗಳಿಗೆ ಕಳುಹಿಸುವ ವಿಧಾನವನ್ನು ಅನುಸರಿಸಬೇಕೆಂದು ಸೂಚಿಸುತ್ತದೆ.

ಮೊದಲ ಹಂತದಲ್ಲಿ, ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಲೀಲ್ ಪರೇಖ್ ಅವರು ಬೆಂಗಳೂರಿನ ಕಂಪನಿಯ ಎಲೆಕ್ಟ್ರಾನಿಕ್ ಸಿಟಿ ಪ್ರಧಾನ ಕಚೇರಿಗೆ ಮರಳಿದ್ದರು, ಜೊತೆಗೆ ಇತರ ಕೆಲವು ಉದ್ಯೋಗಿಗಳು ನಿರ್ಣಾಯಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು.

ಮಾರ್ಚ್ 25 ರಂದು ಲಾಕ್‌ಡೌನ್ ಪ್ರಾರಂಭವಾದಾಗ, ಸಂಸ್ಥೆಯ 93 ಪರ್ಸೆಂಟ್‌ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಲು ಶಕ್ತಗೊಳಿಸಲಾಯಿತು. ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಇನ್ಫೋಸಿಸ್ ವಕ್ತಾರರು ತಿಳಿಸಿದ್ದಾರೆ.

English summary

15 Percent Infosys Employees To Return To Office This Week

IT services provider, Infosys Ltd, will resume operations in a second phase this week, with 15% of its employees expected to return to office
Story first published: Monday, May 25, 2020, 19:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X