ನವದೆಹಲಿ, ಏಪ್ರಿಲ್ 3: 2016ರಲ್ಲಿ ನೋಟು ಅಮಾನ್ಯೀಕರಣದ ಬಳಿಕ ಸಂಚಲನ ಸೃಷ್ಟಿಯಾಗಿತ್ತು. ಈ ಆದೇಶ ಬಳಿಕ 1000 & 500 ಮುಖಬೆಲೆ ನೋಟು ಮಾಯವಾಗಿದ್ದವು. ಆಗ ಹುಟ್ಟಿಕೊಂಡ ₹2000 ಮುಖಬೆಲೆ ನೋಟು ಕೂಡ ಈಗ ತೆರೆಮರೆಗೆ ಸರಿಯುತ್ತಿದೆ. ಈಗಾಗಲೇ ಭಾಗಶಃ ₹2000 ಮುಖಬೆಲೆಯ ನೋಟುಗಳು ವಾಪಸ್ ಬ್ಯಾಂಕ್‌ಗೆ ಬಂದಿವೆಯಂತೆ.
ಕಳೆದ ವರ್ಷ 2023ರ ಮೇ 19 ರಂದು ಆರ್‌ಬಿಐ ಮಹತ್ವದ ಘೋಷಣೆ ಹೊರಡಿಸಿತ್ತು. ಹೀಗೆ ಒಟ್ಟು ₹3.56 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನ ಚಲಾವಣೆಯಿಂದ ಹಿಂಪಡೆಯುವುದಾಗಿ 2023ರ ಮೇ 19ರಂದು ಆರ್‌ಬಿಐ ಘೋಷಣೆ ಮಾಡಿತ್ತು. 2,000 ರೂಪಾಯಿ ಕರೆನ್ಸಿ ನೋಟು ವಾಪಾಸ್ ಪಡೆಯುವ ಘೋಷಣೆ ಹೊರಡಿಸಿದ ನಂತರ ಜನ ಕೂಡ ಮುಗಿಬಿದ್ದು ನೋಟನ್ನು ತಂದು ಬ್ಯಾಂಕ್‌ಗೆ ಜಮೆ ಮಾಡುತ್ತಿದ್ದಾರೆ. ಈವರೆಗೂ ಸಾಕಷ್ಟು ಪ್ರಮಾಣದಲ್ಲಿ, 2,000 ರೂಪಾಯಿ ಮುಖಬೆಲೆ ನೋಟುಗಳು ಬ್ಯಾಂಕ್ ಸೇರಿವೆ.

ಶೇ. 97ರಷ್ಟು ನೋಟು ವಾಪಸ್
ಇದೀಗ ಸಿಕ್ಕಿರುವ ಲೆಕ್ಕಾಚಾರದ ಪ್ರಕಾರ ₹2 ಸಾವಿರ ಮುಖಬೆಲೆಯ ಒಟ್ಟು ಶೇ. 97.69 ರಷ್ಟು ನೋಟುಗಳು ಬ್ಯಾಂಕ್‌ಗೆ ಮರಳಿ ಬಂದಿವೆ. ಇದೀಗ ಇನ್ನೂ ₹8,202 ಕೋಟಿ ಮೌಲ್ಯದ ನೋಟು ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. 2016ರಲ್ಲಿ ಘೋಷಣೆ ಮಾಡಿದಂತೆ ದಿಢೀರ್ ನೋಟ್ ಬ್ಯಾನ್ ಮಾಡಿರಲಿಲ್ಲ ಆರ್‌ಬಿಐ. ಹೀಗಾಗಿ, ಜನರಿಗೆ ಅನುಕೂಲ ಆಗಲಿ ಎಂದು ಸಾಕಷ್ಟು ಸಮಯ ಆರ್‌ಬಿಐ ನೀಡಿದೆ. ಇದೇ ಕಾರಣಕ್ಕೆ ಜನರು ಕೂಡ ಆರಾಮವಾಗಿ ಬಂದು 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ವಾಪಸ್ ನೀಡಿದ್ದಾರೆ.
19 ಪ್ರಾದೇಶಿಕ ಕಚೇರಿಗಳಲ್ಲಿ ಅವಕಾಶ
ಇದೀಗ ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ ₹2 ಸಾವಿರ ಮುಖಬೆಲೆಯ ಒಟ್ಟು ಶೇ. 97.69 ರಷ್ಟು ನೋಟುಗಳು ಬ್ಯಾಂಕ್‌ಗೆ ಮರಳಿ ಬಂದಿವೆ. ಈಗ ಬಾಕಿ ಇರುವ ₹8,202 ಕೋಟಿ ಮೌಲ್ಯದ ನೋಟು ಹಿಂದಿರುಗಿಸಲು ಇನ್ನೂ ಕಾಲಾವಕಾಶ ಇದೆ. ಆ ಪ್ರಕಾರ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು & ಬೇರೆ ಮುಖಬೆಲೆಯ ನೋಟುಗಳ ಜೊತೆ ಬದಲಾಯಿಸಿಕೊಳ್ಳಲು ವ್ಯವಸ್ಥೆ ಮಾಡಿದೆ ಆರ್‌ಬಿಐ. ಇದಕ್ಕಾಗಿ ಆರ್‌ಬಿಐನ ಒಟ್ಟಾರೆ 19 ಪ್ರಾದೇಶಿಕ ಕಚೇರಿಗಳಲ್ಲಿ, ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಅಂಚೆ ಮೂಲಕವು ಕೂಡ ಪ್ರಾದೇಶಿಕ ಕಚೇರಿಗಳಿಗೆ ನೋಟುಗಳನ್ನು ಕಳುಹಿಸಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
2016ರಲ್ಲಿ 500 ಮತ್ತು 1000ರ ನೋಟ್ ಅಮಾನ್ಯ ಅಥವಾ ನೋಟ್ ಬ್ಯಾನ್ ನಂತರದಲ್ಲಿ 2000 ಮುಖಬೆಲೆ ನೋಟ್ ಚಲಾವಣೆಗೆ ಬಂತು. ಆರ್‌ಬಿಐ ದೇಶದಲ್ಲಿ ಚಲಾವಣೆ ಆಗುತ್ತಿದ್ದ, 2000 ರೂಪಾಯಿ ನೋಟು ಚಲಾವಣೆ ಸ್ಥಗಿತಗೊಳಿಸಿದೆ. ವಾಪಸ್ ಪಡೆಯುವುದಕ್ಕೆ, ಬ್ಯಾಂಕ್‌ಗಳಿಗೆ ಆರ್‌ಬಿಐ ಆದೇಶ ನೀಡಿತ್ತು. ಈ ಕಾರಣಕ್ಕೆ ಭಾಗಶಃ ನೋಟುಗಳು ವಾಪಸ್ ಬಂದಿವೆ, ಇನ್ನೂ ಬಾಕಿ ಉಳಿದ ನೋಟುಗಳು ಕೂಡ ವಾಪಸ್ ಬರುವ ನಿರೀಕ್ಷೆ ಇದೆ.


Click it and Unblock the Notifications