For Quick Alerts
ALLOW NOTIFICATIONS  
For Daily Alerts

SBI ಸಾಲಗಾರರಲ್ಲಿ 20% ಮಂದಿ EMI ಮುಂದೂಡಿಕೆ ಆರಿಸಿಕೊಂಡಿದ್ದಾರೆ:ರಜನೀಶ್ ಕುಮಾರ್

|

ಕೊರೊನಾ ಹಿನ್ನೆಲೆ ಆರ್‌ಬಿಐ ಘೋಷಿಸಿದ್ದ ಇಎಂಐ ಮುಂದೂಡಿಕೆಯ ಅವಕಾಶವನ್ನು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಬ್ಯಾಂಕಿನ ಸಾಲಗಾರರಲ್ಲಿ 20 ಪರ್ಸೆಂಟ್‌ರಷ್ಟು ಮಂದಿ ಆರಿಸಿಕೊಂಡಿದ್ದಾರೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.

"ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಷಯದಲ್ಲಿ, (ನಿಷೇಧವನ್ನು ಆರಿಸಿಕೊಂಡ ಸಾಲಗಾರರ ಪರ್ಸೆಂಟ್) ಬಹಳ ಕಡಿಮೆ, 20 ಪರ್ಸೆಂಟ್‌ರಷ್ಟಿದೆ" ಎಂದು ಕುಮಾರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗಾರರಿಗೆ ತಿಳಿಸಿದರು.

SBI ಸಾಲಗಾರರಲ್ಲಿ 20% ಮಂದಿ EMI ಮುಂದೂಡಿಕೆ ಆರಿಸಿಕೊಂಡಿದ್ದಾರೆ!

"ಅವರಲ್ಲಿ ಅನೇಕರು ತಮ್ಮ ಸಾಲಗಳನ್ನು ಪೂರೈಸಬಹುದಿತ್ತು ಆದರೆ ಕಾರ್ಯತಂತ್ರದ ವಿಷಯವಾಗಿ ಅವರು ತಮ್ಮ ಹಣವನ್ನು ಉಳಿಸಿಕೊಳ್ಳಲು ಬಯಸುತ್ತಾರೆ ಮತ್ತು ನಿಷೇಧವನ್ನು ಆರಿಸಿಕೊಂಡಿದ್ದಾರೆ" ಎಂದು ಅವರು ಹೇಳಿದರು. ಜೊತೆಗೆ ಯಾವುದೇ ಹಣಕಾಸಿನ ಸವಾಲನ್ನು ಎದುರಿಸದಿದ್ದರೆ ಸಾಲಗಾರರಿಗೆ ಸಾಲ ಪಾವತಿಸುವಂತೆ ಕುಮಾರ್ ಸಲಹೆ ನೀಡಿದರು.

ಆರ್‌ಬಿಐ ಇಂದು(ಶುಕ್ರವಾರ) ವಿವಿಧ ಅವಧಿಯ ಸಾಲಗಳ ಮೇಲಿನ ಇಎಂಐ ಪಾವತಿಯಿಂದ ಮತ್ತೆ ಮೂರು ತಿಂಗಳ ಅವಧಿಗೆ ವಿನಾಯಿತಿ ಘೋಷಣೆ ಮಾಡಿತು. ಕೊರೊನಾದ ಕಾರಣಕ್ಕೆ ದೇಶದಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಎಂಐ ಪಾವತಿಗೆ ಮೂರು ತಿಂಗಳ ವಿನಾಯಿತಿ ಘೋಷಣೆ ಮಾಡಿತ್ತು. ಅದನ್ನೇ ಮುಂದುವರಿಸಿ ಜೂನ್ 1ರಿಂದ ಆಗಸ್ಟ್ 31ನೇ ತಾರೀಕಿನ ತನಕ ಮತ್ತೆ ಇಎಂಐ ಪಾವತಿಗೆ ವಿನಾಯಿತಿ ನೀಡಲಾಗಿದೆ.

English summary

20 Percent SBI Borrowers Opt for Loan Repayment Moratorium

SBI chairman Rajnish Kumar on Friday said close to 20 per cent of the bank's borrowers have opted for moratorium on repayment of term loans instalments.
Story first published: Friday, May 22, 2020, 19:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X