
ಈಗಾಗಲೇ ಪ್ರಸಕ್ತ ಆರ್ಥಿಕ ವರ್ಷದಲ್ಲಿ 389 ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ಮೂಲಕ 43,604 ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ ನೀಡಿದೆ.
ವಿದೇಶಿ ಉದ್ಯೋಗಿಗಳ ಸಂಖ್ಯೆ 17,329 ರಷ್ಟಿದ್ದು, 2010 ರಲ್ಲಿ ಕೇವಲ 9,536 ರಷ್ಟಿದ್ದರು. EBITDA ಮಿತಿಯನ್ನು ಉಳಿಸಿಕೊಂಡು ಬಂದಿರುವ ಟಿಸಿಎಸ್ 2004-05ರಲ್ಲಿ ಶೇ 28.9ರಷ್ಟಿತ್ತು 2011-12ರಲ್ಲಿ ಶೇ 29.5ರಷ್ಟಿದೆ. ಪೇಮೇಂಟ್ ಅನುಪಾತ ಕೂಡಾ ಏರಿಕೆಯಾಗಿದ್ದು, 2004-05ರಲ್ಲಿ ಶೇ 27.6ರಷ್ಟಿತ್ತು. 2011-12ರಲ್ಲಿ ಶೇ 37.2ರಷ್ಟಾಗಿದೆ.
ಕೈಗಾರಿಕಾ ಹಾಗೂ ಮಾರುಕಟ್ಟೆ ಪ್ರಗತಿಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಯೋಜಿಸಲಾಗಿದೆ. 2013-14ರ ಆರ್ಥಿಕ ವರ್ಷದಲ್ಲಿ 50 ಸಾವಿರ ಹೊಸ ನೇಮಕಾತಿಗಳು ನಡೆಯಲಿದೆ ಎಂದು ಟಿಸಿಎಸ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎನ್ ಚಂದ್ರಶೇಖರನ್ ಹೇಳಿದ್ದಾರೆ.
ಸಂಬಳ ಏರಿಕೆ: ಗ್ರೇಡ್ ಹಾಗೂ ಕಾರ್ಯಕ್ಷಮತೆಗೆ ತಕ್ಕಂತೆ ಶೇ 8 ರಷ್ಟು ಸಂಬಳ ಏರಿಕೆ ನಿರೀಕ್ಷಿಸಬಹುದು. ಯುರೋಪ್ ನಲ್ಲಿ ಸಂಸ್ಥೆ ಅಷ್ಟಾಗಿ ಪ್ರಗತಿ ಕಂಡಿಲ್ಲ. ಮುಂದಿನ ತ್ರೈಮಾಸಿಕದಲ್ಲಿ ಎಲ್ಲವೂ ಸರಿ ಹೋಗುವ ಭರವಸೆ ಇದೆ ಎಂದು ಸಿಇಒ ಚಂದ್ರಶೇಖರ್ ಹೇಳಿದರು.
ದಾಖಲೆ ನೇಮಕಾತಿ: 2011-12 ಸಾಲಿನಲ್ಲಿ ಸುಮಾರು 70,400 ವೃತ್ತಿಪರರನ್ನು ನೇಮಕಾತಿ ಮಾಡಿಕೊಂಡು ಹೊಸ ದಾಖಲೆ ಬರೆಯಲಾಗಿದೆ. ಕ್ಯಾಂಪಸ್ ಸಂದರ್ಶನ ಮೂಲಕ ಆಯ್ಕೆಯಾದ 43,600 ಅಭ್ಯರ್ಥಿಗಳು ಮುಂದಿನ ತ್ರೈಮಾಸಿಕದ ಕೊನೆಗೆ ಸಂಸ್ಥೆಯನ್ನು ಸೇರಲಿದ್ದಾರೆ.
attrition rate ಶೇ 12.2 ಆಗಿದೆ. ಟಿಸಿಎ ಉದ್ಯೋಗಿಗಳ ಸರಾಸರಿ ವಯಸ್ಸು 28 ವರ್ಷ. 3 ವರ್ಷ ಅನುಭವ ಇರುವ ಟೆಕ್ಕಿಗಳು ಶೇ 62.4ರಷ್ಟಿದ್ದಾರೆ. ಶೇ 31.6 ರಷ್ಟು ಮಹಿಳಾ ಟೆಕ್ಕಿ ಟಿಸಿಎಸ್ ನಲ್ಲಿ ಉದ್ಯೋಗದಲ್ಲಿದ್ದಾರೆ.


Click it and Unblock the Notifications