ನಗರದ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಜೂ.7 ಹಾಗೂ ಜೂ.8ರಂದು ನಡೆದ ಸಮಾವೇಶದಲ್ಲಿ 600 ರಿಂದ 800 ಉದ್ಯಮಿಗಳು ಪಾಲ್ಗೊಂಡಿದ್ದರು.
ಸುಮಾರು 6 ಲಕ್ಷ ಕೋಟಿ ರು.ಗಳ ಬಂಡವಾಳ ಹೂಡಿಕೆ, 10 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ ಹೊಂದಿದ್ದ ಕರ್ನಾಟಕ ಸರ್ಕಾರ ವಿವಿಧ ಸಂಸ್ಥೆಗಳೊಡನೆ ಮಾಡಿಕೊಂದ ಪ್ರಮುಖ ಒಪ್ಪಂದಗಳು ಇಂತಿದೆ:
* 1.40 ಲಕ್ಷ ಕೋಟಿ ರು ಪವನ, ಸೌರ, ಉಷ್ಣ ವಿದ್ಯುತ್ ಹಾಗೂ ಇಂಧನ ಉತ್ಪಾದನಾ ಕ್ಷೇತ್ರದ ಮೇಲೆ ಹೂಡಿಕೆ. ಅಮೆರಿಕನ್ ಸಂಸ್ಥೆಗಳೊಡನೆ ಒಪ್ಪಂದ
* ಎಚ್ ಎ ಎಲ್ ನಿಮ್ದ ಬೆಂಗಳೂರಿನ ಚಲ್ಲಘಟ್ಟದಲ್ಲಿ 600 ಕೋಟಿ ರು ವೆಚ್ಚದಲ್ಲಿ ಹೊಸ ಯುದ್ಧ ವಿಮಾನ ಮತ್ತು ಇಂಜಿನ್ ತಯಾರಿಕಾ ಘಟಕ.
* ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ನಿಂದ 8500 ಕೋಟಿ ರು ವೆಚ್ಚದಲ್ಲಿ ರಿಫೈನರಿ ವಿಸ್ತರಣಾ ಘಟಕ.
* ಆದಿತ್ಯಾ ಬಿರ್ಲಾ ಸಮೂಹ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ನಿಂದ 6150 ಕೋಟಿ ರು ವೆಚ್ಚದ ಸಿಮೆಂಟ್ ಉತ್ಪಾದನಾ ಘಟಕ.
* ಗ್ರಾಸಿಂ ಇಂಡಸ್ಟ್ರಿ ಯಿಂದ 319 ಕೋಟಿ ರು ವೆಚ್ಚದಲ್ಲಿ ಕಾಸ್ಟಿಕ್ ಸೋಡಾ ಘಟಕ ಸ್ಥಾಪನೆ.
* ಸನ್ ಫೋರೆಸ್ಟ್ ಸಿಟಿ ವೆಂಚರ್ಸ್ ನಿಂದ 9340 ಕೋಟಿ ರು ವೆಚ್ಚದಲ್ಲಿ 'ಪ್ರಾಜೆಕ್ಟ್ ವಾಯು' ಹೆಸರಿನಲ್ಲಿ ಏರೋ ಸ್ಪೆಸ್ ಸಿಟಿ ಅಭಿವೃದ್ಧಿ.
* ಜೆಎಸ್ ಡಬ್ಲ್ಯೂ ಸಮೂಹದಿಂದ 8090 ಕೋಟಿ ರು ವೆಚ್ಚದಲಿ ಉಕ್ಕು ಉತ್ಪಾದನೆ ಮತ್ತು ಸಿಮೆಂಟ್ ಘಟಕ ಸ್ಥಾಪನೆ.
* ಟೊಯೋಟಾ ಕಿರ್ಲೋಸ್ಕರ್ ನಿಂದ ಆಟೋ ಕಾಂಪೋನೆಂಟ್ ಉತ್ಪಾದನೆ ಘಟಕ
* ವೆಲ್ಸ್ ಪನ್ ಗ್ರೂಪ್ ನಿಂದ 9900 ಕೋಟಿ ವೆಚ್ಚಲ್ಲಿ ವಿಂಡ್, ಪವರ್ ಘಟಕ ಸ್ಥಾಪನೆ.
* ಚೆಟ್ಟಿನಾಡ್ ಸಿಮೆಂಟ್ ಕಾರ್ಪೊರೇಷನ್ ನಿಂದ 2855 ಕೋಟಿ ರು ವೆಚ್ಚದಲ್ಲಿ ಗ್ರೀನ್ ಫೀಲ್ಡ್ ಸಿಮೆಂಟ್ ಘಟಕ ಸ್ಥಾಪನೆ.
* ಎಂಬಸ್ಸಿ ಗ್ರೂಪ್ ನಿಂದ 14370 ಕೋಟಿ ವೆಚ್ಚದಲ್ಲಿ ಐಟಿ ಪಾರ್ಕ್ ಅಭಿವೃದ್ಧಿ. ಐಟಿ ಮೂಲ ಸೌಕರ್ಯ ಹಾಗೂ ಲಾಜಿಸ್ಟಿಕ್ ಯೋಜನೆ.
* ನೆಟ್ ಆಪ್ ನಿಂದ 882 ಕೋಟಿ ರು ವೆಚ್ಚದಲ್ಲಿ ಕ್ಯಾಂಪಸ್ ಯೋಜನೆ.
* ಸಿಂಗಪುರ ಮೂಲದ ಅಸೆಂಡಾಸ್ ಗ್ರೂಪ್ ನಿಂದ 10,483 ಕೋಟಿ ರು ವೆಚ್ಚದಲ್ಲಿ ಬೆಂಗಳೂರಿನ ಬಾಗಲೂರಿನಲ್ಲಿ ಇಂಟಿಗ್ರೇಟೆಡ್ ಐಟಿ ಇನ್ಫ್ರಾಸ್ಟಕ್ಚರ್ ಅಂಡ್ ಎಲೆಕ್ಟ್ರಾನಿಕ್ಸ್ ಸ್ಥಾಪನೆ. [ಜಿಮ್ 2012 ಸಮಾವೇಶದ ಚಿತ್ರಗಳ ಸಂಪುಟ ನೋಡಿ]
* ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟಲ್ ಮೆಂಟ್ ನಿಂದ 250 ಕೋಟಿ ರು ವೆಚ್ಚದಲ್ಲಿ ಬೆಂಗಳೂರಿನಲ್ಲಿ ಐಐಎಚ್ ಎಸ್ ವಿವಿ ಸ್ಥಾಪನೆ.
* ಫ್ಯೂಚರ್ ಗ್ರೂಪ್ ನಿಂದ 891 ಕೋಟಿ ರು ವೆಚ್ಚಲ್ಲಿ ಇನ್ನೋವೇಷನ್ ಅಂಡ್ ಡಿಸೈನ್ ಸಿಟಿ ಮತ್ತು ಇಂಟಿಗ್ರೇಟೆಡ್ ಫುಡ್ ಪಾರ್ಕ್ ಸ್ಥಾಪನೆ.
* ಜಿವಿಕೆ ಗ್ರೂಪ್ ನಿಂದ 29000 ಕೋಟಿ ರು. ವೆಚ್ಚದಲ್ಲಿ ಮರ್ಚೆಂಟ್ ಪವರ್ ಯೋಜನೆಗಳು.
* ರಾಜೇಶ್ ಎಕ್ಸ್ ಪೋರ್ಟ್ ನಿಂದ 11986 ಕೋಟಿ ವೆಚ್ಚದಲ್ಲಿ ಸಮಗ್ರ ಟೌನ್ ಶಿಪ್, ಜೇಮ್ಸ್ ಅಂಡ್ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ.
* ಡ್ರೀಮ್ಸ್ ಲ್ಯಾಂಡ್ ವೆಂಚರ್ಸ್ ನಿಂದ ಬಿಡದಿಯಲ್ಲಿ ಥೀಮ್ ಮತ್ತು ಹೆರಿಟೇಜ್ ಪಾರ್ಕ್.
* ಮಾರಿಬ್ ಇನ್ ಫ್ರಾ ಸ್ಟಕ್ಚರ್ ಫಾರ್ ಟೂರಿಸಂನಿಂದ ಮೂಲ ಸೌಕರ್ಯ ಅಭಿವೃದ್ಧಿ.
ಹೋಟೆಲ್: ನವೀನ್ ಗ್ರೂಪ್ ನಿಂದ 126 ಕೋಟಿ ರು ವೆಚ್ಚದಲ್ಲಿ ಕಬಿಬಿ, ಸುರತ್ಕಲ್, ಬೆಂಗಳೂರಿನಲ್ಲಿ ಹೋಟೆಲ್ ಸ್ಥಾಪನೆ.
* ತಾಜ್ ವಿವಂತಾ ಹೋಟೆಲ್ಸ್ ನ ಕಾವೇರಿ ರಿಟ್ರೀಟ್ ಅಂಡ್ ರೆಸಾರ್ಟ್ ನಿಂದ ಕೊಡಗಿನಲ್ಲಿ ಹೋಟೆಲ್ ನಿರ್ಮಾಣ.
* ಸುಜ್ಲಾನ್ ಗ್ರೂಪ್ ನಿಂದ 20000 ಕೋಟಿ ರು ವೆಚ್ಚದಲ್ಲಿ 3000 ಮೆಗಾ ವ್ಯಾಟ್ ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆ ಯೋಜನೆಗಳು.
* ಮಾರಿಬ್ ಇನ್ಫ್ರಾ ಸ್ಟಕ್ಚರ್ ನಿಂದ 18200 ಕೋಟಿ ರು ವೆಚ್ಚದಲ್ಲಿ ಪ್ರವಾಸೋದ್ಯಮ ಮೂಲ ಸೌಕರ್ಯ ಅಭಿವೃದ್ಧಿ.
* ಜಿಂದಾಲ್ ಅಲ್ಯೂಮಿನಿಯಂನಿಂದ 2000 ಕೋಟಿ ರು ಹೂಡಿಕೆ.
ಜಿಮ್ 2012ನ ಹೂಡಿಕೆಯಲ್ಲಿ ಶೇ 60ರಷ್ಟು ಬಂಡವಾಳ ಉತ್ತರ ಕರ್ನಾಟಕದ ಪಾಲಾಗಲಿದೆ. ಇಂಜಿನಿಯರಿಂಗ್, ಆರೋಗ್ಯ, ಐಟಿ ಬಿಟಿ, ಸಾರಿಗೆ, ಕೆಮಿಕಲ್, ನೀರಾವರಿ,ಇಂಧನ, ಪ್ರವಾಸೋದ್ಯಮ, ವಸತಿ, ನಗರಾಭಿವೃದ್ಧಿ ಯೋಜನಾ ಕ್ಷೇತ್ರಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಕಂಡು ಬಂದಿದೆ.


Click it and Unblock the Notifications
