

| 93.566 | ![]() | United States Dollar |
ಆರ್ ಬಿಐ ಈ ಕಠಿಣ ಕ್ರಮ ಕೈಗೊಂಡರೆ ಮುಂದಿನ ಅಕ್ಷಯ ತದಿಗೆ ಗ್ರಾಹಕರ ಪಾಲಿಗೆ ಹೆಚ್ಚಿನ ಲಾಭ ತರಲು ಸಾಧ್ಯವಿಲ್ಲ. ಚಿನ್ನದ ಆಮದು ನಿಯಂತ್ರಿಸಲು ಬ್ಯಾಂಕುಗಳಲ್ಲಿ ಚಿನ್ನದ ನಾಣ್ಯ ಮಾರಾಟವನ್ನು ನಿಷೇಧಿಸಲು ರಿಸರ್ವ್ ಬ್ಯಾಂಕ್ ಚಿಂತನೆ ನಡೆಸಿದೆ.
ಚಾಲ್ತಿ ಖಾತೆ ಕೊರತೆ ವಿಸ್ತರಣೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದ್ದರಿಂದ ಚಿನ್ನದ ಆಮದು ಹೆಚ್ಚಾಗಿತ್ತು. ಇದನ್ನು ಸರಿದೂಗಿಸಲಾಗಿಸಲು ನಾಣ್ಯ ಮಾರಾಟ ನಿಷೇಧಕ್ಕೆ ಆರ್ ಬಿಐ ಚಿಂತಿಸಿದೆ.
2010 ರಲ್ಲಿ 963 ಟನ್ ಗಳಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. 2011ರಲ್ಲಿ 878 ಟನ್ ಗಳಷ್ಟು ಮಾತ್ರ ಆಮದಾಗಿತ್ತು. 2011ರಲ್ಲಿ ಬ್ಯಾಂಕ್ ಗಳಲ್ಲಿ ಚಿನ್ನದ ನಾಣ್ಯ ಮಾರಾಟ ಶೇ 33 ರಷ್ಟು ಏರಿಕೆ ಕಂಡಿತ್ತು.
ಭಾರತದಲ್ಲಿ ಎಸ್ ಬಿಐ, ಐಸಿಐಸಿಐ, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗಳ ಮೂಲಕ ಶೇ 70 ರಷ್ಟು ಚಿನ್ನದ ನಾಣ್ಯ ಮಾರಾಟ ನಡೆಯುತ್ತಿದೆ. ಚಿನ್ನದ ನಾಣ್ಯ ವ್ಯಾಪಾರದಿಂದ ಹೆಚ್ಚಿನ ಲಾಭವೇನಿಲ್ಲ ಎಂದು ಬ್ಯಾಂಕುಗಳು ಹೇಳಿದೆ.
ಆದರೆ, ಚಿನ್ನದ ನಾಣ್ಯ ಮಾರಾಟದಿಂದ ಬ್ಯಾಂಕ್ ಗಳು 150 ಕೋಟಿ ರು ಲಾಭ ಗಳಿಸುತ್ತಿದ್ದರೂ ಇದು ಬ್ಯಾಂಕುಗಳ ಕೋರ್ ಬಿಸಿನೆಸ್ ಅಲ್ಲ ಆದ್ದರಿಂದ ನಾಣ್ಯ ಮಾರಾಟ ಸ್ಥಗಿತಗೊಳಿಸುವುದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಆರ್ ಬಿಐ ಹೇಳಿದೆ.
ಇನ್ನೊಂದು ಕೋನದಲ್ಲಿ ನೋಡುವುದಾದರೆ ಬ್ಯಾಂಕುಗಳು ಉಳಿತಾಯವನ್ನು ಬಂಡವಾಳವನ್ನಾಗಿಸುವುದು ಹಾಗೂ ಆರ್ಥಿಕ ಚಟುವಟಿಕೆ ಪ್ರಚಾರ ಮಾಡುವುದು ಮುಖ್ಯವಾಗಿದೆ. ಚಿನ್ನದ ನಾಣ್ಯ ಮಾರಾಟ, ಬ್ಯಾಂಕಿನ ಕೆಲಸವಲ್ಲ ಎಂದು ಆರ್ ಬಿಐ ತೀರ್ಮಾನಿಸಿದೆ. ಆರ್ ಬಿಐ ನಿರ್ಧಾರ ಬರೀ ಬ್ಯಾಂಕುಗಳಿಗೆ ಸೀಮಿತವಾಗಿದೆಯೇ ಅಥವಾ ಪೋಸ್ಟ್ ಆಫೀಸ್ ಗಳಿಗೂ ಅನ್ವಯಿಸುತ್ತದೆಯೇ? ಗೊತ್ತಿಲ್ಲ. ಆರ್ ಬಿಐ ನಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.


Click it and Unblock the Notifications
