
HDFC Fixed Maturity ಯೋಜನೆ ಸರಣಿ 22 ಅಡಿಯಲ್ಲಿ 10 ರು ಮುಖಬೆಲೆಯಂತೆ ಕಡಿಮೆ ಅವಧಿಯಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಲು ವಿವಿಧ ಯೋಜನೆಗಳನ್ನು ನೀಡಲಾಗಿದೆ. ಯೋಜನೆ ಆರಂಭ ಹಾಗೂ ಅಂತ್ಯದ ದಿನಗಳು ಈ ಕೆಳಗಿನಂತಿದೆ:
HDFC FMP 92D July 2012 (1) : NFO ಆರಂಭ ಜುಲೈ 3, 2012, ಅವಧಿ 92 ದಿನಗಳು
HDFC FMP 371D July 2012 (1) : NFO ಆರಂಭ ಜುಲೈ 4, 2012, ಅವಧಿ 371 ದಿನಗಳು
HDFC FMP 372D July 2012 (1) : NFO ಆರಂಭ ಜುಲೈ 10, 2012, ಅವಧಿ 372 ದಿನಗಳು
HDFC FMP 91D July 2012 (1) : NFO ಆರಂಭ ಜುಲೈ 12, 2012, ಅವಧಿ 91 ದಿನಗಳು
HDFC FMP 371D July 2012 (2) : NFO ಆರಂಭ ಜುಲೈ 18, 2012, ಅವಧಿ 371 ದಿನಗಳು
HDFC FMP 90D July 2012 (2) :NFO ಆರಂಭ ಜುಲೈ 19, 2012, ಅವಧಿ 90 ದಿನಗಳು
HDFC FMP 371D July 2012 (3) :NFO ಆರಂಭ ಜುಲೈ 25, 2012, ಅವಧಿ 371 ದಿನಗಳು
HDFC FMP 91D July 2012 (2) : NFO ಆರಂಭ ಜುಲೈ 26, 2012, ಅವಧಿ 91 ದಿನಗಳು
ಹೂಡಿಕೆ ಉದ್ದೇಶ: ಸಾಲ ಹಾಗೂ ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮೂಲಕ ನಿಯಮಿತವಾಗಿ ಆದಾಯ ಬರುವಂತೆ ಮಾಡುವುದು ಹಾಗೂ ಪ್ರಗತಿ ಹಾಗೂ ಡಿವಿಡೆಂಡ್ ಎರಡು ಆಯ್ಕೆಯನ್ನು ನೀಡುತ್ತದೆ. NFO ಅವಧಿಯಲ್ಲಿ ಪ್ರತಿ ಯೋಜನೆಯಿಂದ ಸುಮಾರು 20 ಕೋಟಿ ರು.ಗೂ ಅಧಿಕ ನಿಧಿಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.
ನಿಧಿ ಹಂಚಿಕೆ: ಶೇ 60 ರಿಂದ 100 ರಷ್ಟು ಆಸ್ತಿಯನ್ನು ಸಾಲ ಹಾಗೂ ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಶೇ 40 ರಷ್ಟು ನಿವ್ವಳ ಆಸ್ತಿಯನ್ನು ಸರ್ಕಾರಿ ಭದ್ರತಾ ಪತ್ರಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ಈ ಯೋಜನೆಗಳಿಗೆ ಆರಂಭಿಕ ಹಾಗೂ ನಿರ್ಗಮನ ಶುಲ್ಕಗಳಿರುವುದಿಲ್ಲ. ಪ್ರತಿ ಯೋಜನೆಯ ಯೂನಿಟ್ ಗಳು ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಬಂಡವಾಳ ಹೂಡಿಕೆದಾರರು ನಿರಂತರವಾಗಿ ಖರೀದಿ/ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು.
ಇತರೆ ಮಾಹಿತಿ:
NFO: 10 ರು ಪ್ರತಿ ಯೂನಿಟ್
ಕನಿಷ್ಠ ಅರ್ಜಿ ಮೊತ್ತ: 5000 ಹಾಗೂ ನಂತರ 10 ರ ಹತ್ತರ ಗುಣಕದಂತೆ ಲೆಕ್ಕಚಾರ
ಮ್ಯಾನೇಜರ್: ಭರತ್ ಪರೀಕ್
(ಗುಡ್ ರಿಟರ್ನ್ಸ್.ಇನ್)


Click it and Unblock the Notifications