
ಹಣದುಬ್ಬರಕ್ಕೆ ಕಡಿವಾಣ ಹಾಕುವಲ್ಲಿ ನಾವು ಸತತ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಆದರೆ, ಇದರಿಂದ ಅದು ಬಡ್ಡಿದರಗಳ ಮೇಲೆ ಪರಿಣಾಮ ಬೀರಬೇಕಿಲ್ಲ ಎಂದು ಆರ್ ಬಿಐ ಗವರ್ನರ್ ಡಿ. ಸುಬ್ಬರಾವ್ ಸ್ಪಷ್ಟಪಡಿಸಿದರು.
ಸಗಟು ಬೆಲೆ ಸೂಚ್ಯಂಕದ (WPI) ಹಣದುಬ್ಬರ ಶೇ 7.25ರಲ್ಲಿದ್ದರೆ, ಗ್ರಾಹಕ ಬೆಲೆ ಸೂಚ್ಯಂಕ (CPI) ಎರಡಂಕಿಯಲ್ಲಿದೆ. ನಾವು ಹಣದುಬ್ಬರ ನಿಯಂತ್ರಿಸುವಲ್ಲಿ ಖಂಡಿತವಾಗಿಯೂ ಹೊಸ್ತಿಲಲ್ಲಿದ್ದೇವೆ ಎಂದು ಅವರು ಪ್ರತಿಪಾದಿಸಿದರು. ರಿಸರ್ವ್ ಬ್ಯಾಂಕಿನ ತ್ರೈಮಾಸಿಕ ಹಣಕಾಸು ನೀತಿ ಜುಲೈ 31ಕ್ಕೆ ಘೋಷಣೆಯಾಗಲಿದ್ದು, ಅದಕ್ಕೆ ಎರಡು ವಾರಗಳ ಮೊದಲೇ ಈ ಹೇಳಿಕೆ ಹೊರಬಿದ್ದಿದೆ.
ಸಗಟು ಬೆಲೆ ಸೂಚ್ಯಂಕ ಜೂನ್ ನಲ್ಲಿ 7.25ರಷ್ಟಿದ್ದರೆ ಈಗ ಶೇ 5-6ರ ಆಸುಪಾಸಿನಲ್ಲಿದೆ. ಆದೇ ರೀತಿ ಗ್ರಾಹಕ ಬೆಲೆ ಸೂಚ್ಯಂಕ ಮೇ ತಿಂಗಳಲ್ಲಿ 10.36ರ ಗಡಿಯಲ್ಲಿತ್ತು.
ಅರ್ಥಿಕ ಪ್ರಗತಿಯ ಮಟ್ಟ 9 ವರ್ಷಗಳಲ್ಲೇ ಅತಿ ಕಡಿಮೆ ಎಂದರೆ ಶೇ 6.5ಕ್ಕೆ ಕುಸಿದ ಹಿನ್ನೆಲೆಯಲ್ಲಿ ಬಡ್ಡಿದರಗಳನ್ನು ಕಡಿತಗೊಳಿಸುವಂತೆ ಉದ್ಯಮ ವಲಯ ಆರ್ ಬಿಐಗೆ ಆಗ್ರಹಿಸುತ್ತಲೇ ಇದೆ.ಇದೇ ಸಂದರ್ಭದಲ್ಲಿ ಆರ್ ಬಿಐನ ಮಾಜಿ ಗರ್ವನರ್ ಐಟಿ ಪಟೇಲ್ ಅವರು ಬರೆದ ಲೇಖನಗಳ ಸಂಗ್ರಹಿತ ಪುಸ್ತಕವನ್ನು ಸುಬ್ಬರಾವ್ ಅವರು ಲೋಕಾರ್ಪಣೆ ಮಾಡಿದರು.
WPI-Wholesale Price Index
CPI: Consumer Price Index


Click it and Unblock the Notifications