Hurry ! ಚಿನ್ನದ ನಾಣ್ಯ ಖರೀದಿ ವಿಶೇಷ ರಿಯಾಯಿತಿ

Hurry ! ಚಿನ್ನದ ನಾಣ್ಯ ಖರೀದಿ ವಿಶೇಷ ರಿಯಾಯಿತಿ
ನವದೆಹಲಿ, ಆ.13: ಸ್ವಾತಂತ್ರೋತ್ಸವ ಹಾಗೂ ಪುಷ್ಯ ನಕ್ಷತ್ರ ದಿವಸದ ಅಂಗವಾಗಿ ಚಿನ್ನದ ನಾಣ್ಯ ಖರೀದಿ ಮೇಲೆ ಭಾರತೀಯ ಅಂಚೆ ವಿಶೇಷ ರಿಯಾಯಿತಿ ಪ್ರಕಟಿಸಿದೆ.

ಆಗಸ್ಟ್ 13, 14 ಹಾಗೂ 15 ರಂದು ದೆಹಲಿಯ ಆಯ್ದ ಅಂಚೆ ಕಚೇರಿಯಲ್ಲಿ ಈ ವಿಶೇಷ ರಿಯಾಯಿತಿ ಲಭ್ಯವಿರುತ್ತದೆ. ದೆಹಲಿ ಸುಮಾರು 31 ಅಂಚೆ ಕಚೇರಿಗಳಲ್ಲಿ ಶೇ 6.5 ರಷ್ಟು ರಿಯಾಯಿತಿ ದರದಲ್ಲಿ ಚಿನ್ನದ ನಾಣ್ಯ ಮಾರಾಟ ಮಾಡಲಾಗುತ್ತದೆ.

ವಿಶಿಷ್ಟವಾದ ಚಿನ್ಹೆವುಳ್ಳ ಈ ನಾಣ್ಯಗಳು 0.5 gms, 1gms, 5gms, 8gms, 10gms, 20gmsಹಾಗೂ 50gms ತೂಕದ ಮೌಲ್ಯದಲ್ಲಿ ಸಿಗಲಿದೆ.

ಈ ನಾಣ್ಯಗಳು 24 ಕಾರೆಟ್ 99.99% ಚಿನ್ನದ ಸ್ವಿಸ್ ಪ್ರಮಾಣಪತ್ರ ಹೊಂದಿದೆ ಹಾಗೂ ನಕಲಿ ಮಾಡಲಾಗದ ಗುಣಮಟ್ಟ ಹಾಗೂ ಪ್ಯಾಕಿಂಗ್ ಹೊಂದಿರುತ್ತದೆ. ಉತ್ಪನ್ನದ ಗುಣಮಟ್ಟದ ಎಲ್ಲಾ ಪ್ರಮಾಣಪತ್ರಗಳನ್ನು ಪಡೆದಿದೆ ಎಂದು ಅಂಚೆ ಕಚೇರಿ ಪ್ರಕಟಿಸಿದೆ.

ಆದರೆ, ಇದೇ ಸೌಲಭ್ಯಗಳು ಬೆಂಗಳೂರು ಸೇರಿದಂತೆ ದಕ್ಷಿಣ ಭಾಗದಲ್ಲಿ ಲಭ್ಯವಿರುವ ಸಾಧ್ಯತೆ ಕಮ್ಮಿ ಎನ್ನಲಾಗಿದೆ. ಚಿನ್ನದ ಬೆಲೆ ಏರಿಕೆಯಿಂದ ಚಿನಿವಾರ ಪೇಟೆ ಡಲ್ ಹೊಡೆಯುತ್ತಿದೆ.

ಚಿನ್ನದ ಬೆಲೆ ಏರಿಕೆ ಬಿಸಿ: ಬೆಲೆ ಏರಿಕೆ ವ್ಯತ್ಯಯ ದಿಂದ ಆಭರಣ ಉದ್ಯಮದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿದೆ. ಶ್ರಾವಣ ಮಾಸ ಆರಂಭದ ಜೊತೆಗೆ ಸಾರ್ವಜನಿಕರು ಆಭರಣ ಮಳಿಗೆಗಳತ್ತ ಮುಗಿ ಬೀಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಹಬ್ಬಗಳ ಸರಮಾಲೆ ಆರಂಭವಾಗುವ ಮುನ್ನ ಮತ್ತೆ ಚಿನ್ನದ ಬೆಲೆ ಏರಿಕೆಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿದೆ.

ಈಗಾಗಲೇ ಚಿನ್ನದ ಬೆಲೆ ರೂ.30 ಸಾವಿರದ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಅದು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದೆ. ಇದರಿಂದ ದಕ್ಷಿಣ ಭಾರತದಲ್ಲಿ ಚಿನ್ನದ ಆಭರಣ ಮಳಿಗೆಗಳಿ ದಿಕ್ಕು ತೋಚದಂತಾಗಿದೆ.

ಚಿನ್ನದ ಬೆಲೆ ರೂ. ಪ್ರತಿ 10 ಗ್ರಾಂಗೆ 30,719ಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 1,620 ಡಾಲರ್ ಗೆ ಕೊನೆಗೊಂಡಿದೆ. ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಚಿನ್ನದ ಆಮದು ಕೂಡ ಕುಂಠಿತಗೊಂಡಿದೆ ಎಂದು ಚಿನ್ನದ ವರ್ತಕರ ಒಕ್ಕೂಟದ ಮುಂಬಯಿ ಆವೃತ್ತಿಯ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+