
ಅದರೆ, 241 ರಿಂದ ಒಂದು ವರ್ಷದ ಅವಧಿಯೊಳಗಿನ ಠೇವಣಿ ಮೇಲಿನ ಬಡ್ಡಿದರವನ್ನು ಶೇಕಡ 1 ರಷ್ಟು ಕಡಿತಗೊಳಿಸಿದ್ದು, ಶೇ 7.5 ರಿಂದ ಶೇ 6.5ಕ್ಕೆ ಇಳಿಸಲಾಗಿದೆ.
ಬ್ಯಾಂಕಿನ ಒಂಭತ್ತು ವಿವಿಧ ಠೇವಣಿಗಳಲ್ಲಿ 6 ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡ 0.50ರಷ್ಟು ಕಡಿತಪೊಳಿಸಲಾಗಿದೆ. 7 ರಿಂದ 90 ದಿನಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡ 7 ರಿಂದ ಶೇ 6.50ಕ್ಕೆ ಇಳಿಸಲಾಗಿದೆ.
ಅದೇ ರೀತಿ 71 ರಿಂದ 179 ದಿನಗಳ ನಡುವಿನ ಠೇವಣಿಗಳ ಮೇಲಿನ ಬಡ್ಡಿದರ ಶೇಕಡ 7 ರಿಂದ 6.50ಕ್ಕೆ ಇಳಿದಿದೆ. ಹೊಸ ದರಗಳು ಸೆಪ್ಟೆಂಬರ್ 7 ರಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ಎಸ್ ಬಿಐ ಪ್ರಕಟಣೆ ತಿಳಿಸಿದೆ.
ಇತರೆ ಬ್ಯಾಂಕುಗಳ ನಡುವೆ ಪೈಪೋಟಿಗೆ ಬಿದ್ದಿರುವ ಎಸ್ ಬಿಐ ಎಲ್ಲರಿಗಿಂತ ಮೊದಲು ಬಡ್ಡಿದರವನ್ನು ಇಳಿಕೆ ಮಾಡಿದೆ. ಎಸ್ ಬಿಐ ಮಾರ್ಗವನ್ನೇ ಇತರೆ ಬ್ಯಾಂಕ್ ಗಳು ಅನುಸರಿಸುವ ಸಾಧ್ಯತೆ ಹೆಚ್ಚಿದೆ.
ಎಸ್ ಬಿಐ ಮೇಳ: ನಗರದ ಸೇಂಟ್ ಮಾರ್ಕ್ ರಸ್ತೆಯಲ್ಲಿನ ಸ್ಥಳೀಯ ಪ್ರಧಾನ ಕಚೇರಿಯಲ್ಲಿ ಸೆ.14 ರಿಂದ 3 ದಿನಗಳ ಕಾಲ 'ಎಸ್‌ಬಿಐ ಉತ್ಸವ್' (ಗೃಹ-ವಾಹನ ಸಾಲ ಮೇಳ) ಆಯೋಜಿಸಿದೆ.
ಈ ಉತ್ಸವದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದ 55 ಸಂಸ್ಥೆಗಳು, ಕಾರು ವಿತರಣೆಯ 15 ಸಂಸ್ಥೆಗಳು ಭಾಗವಹಿಸಲಿವೆ. ಮನೆ ಖರೀದಿಸಲು ಇಚ್ಛಿಸಿದವರಿಗೆ 'ಸ್ಥಳದಲ್ಲಿಯೇ ಗೃಹಸಾಲ ಮಂಜೂರು' ಪತ್ರ ನೀಡಲಾಗುವುದು ಎಂದು ಎಸ್ ಬಿಐ ಪ್ರಕಟಣೆ ತಿಳಿಸಿದೆ.
ಗೃಹ ಸಾಲ ರೂ. 30 ಲಕ್ಷದವರೆಗೆ ಶೇ 10.25 ಬಡ್ಡಿ, ಹೆಚ್ಚಿನ ಸಾಲಕ್ಕೆ ಶೇ 10.40 ಬಡ್ಡಿ. ಕಾರು ಸಾಲಕ್ಕೆ ಶೇ 10.75 ಬಡ್ಡಿದರ ನಿಗದಿಪಡಿಸಲಾಗಿದೆ. ಹೆಚ್ಚಿನ ಆಸಕ್ತಿ ಉಳ್ಳವರು ಎಸ್ ಬಿಐ ಸೆಂಟ್ ಮಾರ್ಕ್ ರಸ್ತೆಯ ಪ್ರಧಾನ ಕಚೇರಿಯನ್ನು ಸಂಪರ್ಕಿಸಬಹುದು.
ವಿಳಾಸ: ನಂ.65, ಸೈಂಟ್ ಮಾರ್ಕ್ಸ್ ರಸ್ತೆ, ಬೆಂಗಳೂರು-560 001
ಸಂಪರ್ಕ:+(91)-(80)-25943120, 25943037, 25943121
ಟೋಲ್ ಫ್ರೀ ಸಂಖ್ಯೆ: 18004253800
ವೆಬ್ ತಾಣ: www.sbi.co.in / www.statebankofindia.com


Click it and Unblock the Notifications