ಡೀಲ್ ಪ್ರಭಾವ, ಇನ್ಫಿ ಷೇರುಗಳೇ ರಾಜ

ಡೀಲ್ ಪ್ರಭಾವ, ಇನ್ಫಿ  ಷೇರುಗಳೇ ರಾಜ
Infosys: Quotes, News
BSE 1130.00BSE Quote26.1 (-2.31%)
NSE 1129.90NSE Quote25.2 (-2.23%)
ಸ್ವಿಸ್ ಮೂಲದ ಜಾಗತಿಕ ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ಸಂಸ್ಥೆ ಲೊಡೆಸ್ಟೋನ್ ಹೋಲ್ಡಿಂಗ್ ಎಜಿ ಸಂಸ್ಥೆಯನ್ನು ಐಟಿ ದಿಗ್ಗಜ ಇನ್ಫೋಸಿಸ್ ಖರೀದಿಸುವ ಸುದ್ದಿ ಷೇರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.

ಸೋಮವಾರ (ಸೆ.10) ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ ನದ್ದೇ ಸದ್ದು. ಬೆಳಗ್ಗೆ 10 ಗಂಟೆಗೆ 2506 ರು ನಂತೆ ಶೇ 0.44 ರಷ್ಟು ಏರಿಕೆ ಕಂಡಿತ್ತು. ನಂತರ ಇಂಟ್ರಾ ಡೇ ನಲ್ಲಿ 2527 ರು. ಗೆ ಏರಿತು.

ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ 3.54 ಗಂಟೆಗೆ 2511.00 ರು (15.10 ಏರಿಕೆ) ಶೇ ೦.60 ರಷ್ಟು ಏರಿಕೆಯಾಗಿತ್ತು. ಎನ್ ಎಸ್ ಇನಲ್ಲಿ 2512.35 ರು ನಂತೆ (16.35 ರು ಏರಿಕೆ) ಶೆ 0.66 ರಷ್ಟು ಏರಿಕೆಯೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ.

ಮಾರುಕಟ್ಟೆ ಮುನ್ಸೂಚನೆ: ಸ್ಪೇನ್ ಮೂಲದ ಕಂಪನಿ ಖರೀದಿ ಸುದ್ದಿ ಬಲವಾದಷ್ಟು ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಷೇರುಗಳು ಮೇಲ್ಮುಖವಾಗೇ ಚಲಿಸಲಿದೆ. ಹೀಗಾಗಿ ಇನ್ನೆರಡು ದಿನವಾದರೂ ಇನ್ಫೋಸಿಸ್ ಷೇರು ಉಳ್ಳವರೇ ಜಾಣರು.

ಸ್ವಿಸ್ ಮೂಲದ ಸಂಸ್ಥೆಯನ್ನು ಸುಮಾರು 350 ಮಿಲಿಯನ್ ಡಾಲರ್ ಮೊತ್ತ ನೀಡಿ ಖರೀದಿಸುವ ಬಗ್ಗೆ ಬಿಎಸ್ ಇಗೆ ಇನ್ಫೋಸಿಸ್ ಮಾಹಿತಿ ನೀಡಿತ್ತು. ಅಲ್ಲದೆ ಸ್ಪೇನ್ ಮೂಲದ ಎವೆರಿಸ್ ಸಂಸ್ಥೆ ಖರೀದಿಗೂ ಇನ್ಫೋಸಿಸ್ ಮುಂದಾಗಿದೆ ಎಂಬ ಸುದ್ದಿ ಹಬ್ಬಿತ್ತು.

1996ರಲ್ಲಿ ಡಿಎಂಆರ್ ಕನ್ಸಲ್ಟೆನ್ಸಿ ಎಂದು ಆರಂಭವಾದ ಎವೆರಿಸ್ ಸಂಸ್ಥೆ 9000 ಕನ್ಸಲ್ಟೆನ್ಸ್ ಗಳನ್ನು ಹೊಂದಿದ್ದು, ಅಂದಾಜು 635 ಮಿಲಿಯನ್ ಡಾಲರ್ ಆದಾಯ ಹೊಂದಿದೆ. ಮಾರ್ಚ್ 31,2011ರಂತೆ 58 ಮಿಲಿಯನ್ ಡಾಲರ್ ಲಾಭ ಗಳಿಸಿದೆ.

ಯುರೋಪಿಯನ್ ಮಾರುಕಟ್ಟೆ ಮೇಲೆ ಕಣ್ಣಿಟ್ಟಿರುವ ಇನ್ಪೋಸಿಸ್ ಸಂಸ್ಥೆ 2008 ಮಾಡಿದ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಿದೆ. 2008ರಲ್ಲಿ ಯುರೋಪಿಯನ್ ಕನ್ಸಲ್ಟೆನ್ಸಿ ಎಕ್ಸಾನ್ ಖರೀದಿಯಲ್ಲಿ ಇನ್ಫೋಸಿಸ್ ಸಂಸ್ಥೆ ಸ್ವಲ್ಪದರಲ್ಲೇ ಮಿಸ್ ಮಾಡಿಕೊಂಡಿತ್ತು. ಎಕ್ಸಾನ್ ಸಂಸ್ಥೆ ಎಚ್ ಸಿಎಲ್ ಟೆಕ್ನಾಲಜೀಸ್ ಪಾಲಾಗಿತ್ತು.

ಹೊಸ ಹೊಸ ಕಂಪನಿಗಳ ಖರೀದಿಗೆ ಮುಂದಾಗಿರುವ ಇನ್ಫೋಸಿಸ್ ಸಂಸ್ಥೆ ಬಳಿ ಸದ್ಯಕ್ಕೆ $3.24 ಬಿಲಿಯನ್ (ರು 18,031 ಕೋಟಿ) ಅಪತ್ ಧನವಿದೆ.(ಜೂ.30, 2012)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+