ಆರ್ ಬಿಐ ಸಿಆರ್ ಆರ್ ಕಡಿತ; ಬಡ್ಡಿ ದರ ಇಳಿಕೆ?

ಆರ್ ಬಿಐ ಸಿಆರ್ ಆರ್ ಕಡಿತ; ಬಡ್ಡಿ ದರ ಇಳಿಕೆ?
HDFC Bank: Quotes, News
BSE 744.75BSE Quote13.75 (-1.85%)
NSE 744.55NSE Quote14.1 (-1.89%)
ಮುಂಬೈ, ಸೆ.18: ದೇಶದ ಪ್ರಸಕ್ತ ಸನ್ನಿವೇಶಗಳನ್ನು ಗಮನದಲ್ಲಿರಿಸಿಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ ಜಾಗರೂಕತೆಯ ನಿಲುವು ತಾಳಿದೆ. ನಗದು ಮೀಸಲು ಅನುಪಾತ (ಸಿಆರ್‌ಆರ್) 0.25%ರಷ್ಟು ಕಡಿತಗೊಳಿಸಿದೆ. ಆದರೆ, ರೆಪೋದರ, ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆರ್ ಬಿಐ ಈ ಕ್ರಮದಿಂದ ಬ್ಯಾಂಕುಗಳ ಬಡ್ಡಿದರ ಇಳಿಕೆ ಸಾಧ್ಯವೇ?

ಕೇಂದ್ರ ಸರ್ಕಾರ ಎಫ್‌ಡಿಐ, ಡೀಸೆಲ್ ಬೆಲೆ ಏರಿಕೆ ಕ್ರಮಗಳನ್ನು ಕೈಗೊಂಡಿ ರುವ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ತೆಗೆದುಕೊಂಡಿರುವ ಈ ನೀತಿಯಿಂದ ಆರ್ಥಿಕ ವ್ಯವಸ್ಥೆಗೆ ಸುಮಾರು 17 ಸಾವಿರ ಕೋಟಿ ರೂಪಾಯಿ ಹರಿದು ಬರಲಿದೆ. ರಾಷ್ಟ್ರದ ಅರ್ಥ ವ್ಯವಸ್ಥೆಯಲ್ಲಿ ಉತ್ಪಾದನಾ ವಿಭಾಗಗಳಿಗೆ ಸಾಕಾಗುವಷ್ಟು ಹಣದ ಹರಿವನ್ನು ನೋಡಿಕೊಳ್ಳುವುದು ಆರ್‌ಬಿಐ ಪ್ರಥಮ ಆದ್ಯತೆಯಾಗಿದೆ.

ಬಡ್ಡಿದರ ಇಳಿಕೆ ಸಾಧ್ಯವೇ?: ಸಾಲು ಸಾಲು ಹಬ್ಬದ ಋತು ಆರಂಭವನ್ನು ಗಮನಿಸಿ ಎಸ್ ಬಿಐ, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್ ಗಳು ವಿಶೇಷ ಕೊಡುಗೆಗಳನ್ನು ತನ್ನ ಗ್ರಾಹಕರಿಗೆ ಈಗಾಗಲೇ ನೀಡಿದೆ. ಆರ್ ಬಿಐ ನೀತಿಯಿಂದ ಹರಿದು ಬರುವ ಸುಮಾರು 2,000 ಕೋಟಿ ಇಟ್ಟುಕೊಂಡು ಬಡ್ಡಿದರ ಇಳಿಕೆ ಮಾಡಲು ಯಾವ ಬ್ಯಾಂಕು ಕೂಡಾ ಮುಂದಾಗುವ ಸಾಧ್ಯತೆ ಕಮ್ಮಿ ಎನ್ನಬಹುದು.

ಬೇಕಾದರೆ ಇನ್ನಷ್ಟು ಗ್ರಾಹಕ ಸ್ನೇಹಿ ಆಫರ್ ಗಳು ಹೆಚ್ಚಾಗಬಹುದು. ಎಚ್ ಡಿಎಫ್ ಸಿ, ಐಸಿಐಸಿಐ ಸೇರಿದಂತೆ ಕೆಲ ಪ್ರಮುಖ ಖಾಸಗಿ ಬ್ಯಾಂಕುಗಳು ಮಾತ್ರ ಬಡ್ಡಿದರ ಇಳಿಕೆ ಬಗ್ಗೆ ಮಾತನಾಡಿದೆ.

ಮೂಲಾಂಶ ಕಡಿತದಿಂದ ಸಿಆರ್‌ಆರ್ ಪ್ರಮಾಣ ಶೇ.4.5ಕ್ಕೆ ಇಳಿದರೆ, ಬ್ಯಾಂಕ್‌ಗಳಿಗೆ ನೀಡುವ ಸಾಲದ ರೆಪೋದರದಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಹೀಗಾಗಿ, ರೆಪೋದರ ಶೇ.8 ರಷ್ಟಿದೆ. ಬ್ಯಾಂಕ್‌ಗಳಿಂದ ಪಡೆಯುವ ಸಾಲದ ಹೆಚ್ಚುವರಿ ದ್ರವ್ಯತ್ವ ರಿವರ್ಸ್ ರೆಪೋದರವೂ ಶೇ. 7ರಷ್ಟೇ ನಿಂತಿದೆ.

ಹಣದುಬ್ಬರ ನಾಗಾಲೋಟವನ್ನು ಮುಂದುವರಿಸಿದ್ದು, ಬೆಲೆಏರಿಕೆ ಮತ್ತು ಹಣದುಬ್ಬರದ ನಿರೀಕ್ಷೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತಿರುವುದರಿಂದ ವಿತ್ತೀಯ ನೀತಿಯನ್ನು ಹಾಗೇ ಕಾಪಾಡಿಕೊಳ್ಳಲಾಗಿದೆ ಎಂದು ಗವರ್ನರ್ ಡಿ. ಸುಬ್ಬಾರಾವ್ ಹೇಳಿದ್ದಾರೆ.

ಜುಲೈನಲ್ಲಿ ಶೇ. 6.87 ರಷ್ಟಿದ್ದ ಹಣದುಬ್ಬರ ಆಧರಿಸಿದ ಸಗಟು ಬೆಲೆ ಆಗಸ್ಟ್ ತಿಂಗಳಿನಲ್ಲಿ ಶೇ.7.55ಕ್ಕೇರಿದೆ. ಸೆ.22ರಿಂದಲೇ ಸಿಆರ್ ಆರ್ ಕಡಿತವೂ ಜಾರಿಗೆ ಬರಲಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಆರ್‌ಬಿಐನ ಸಿಆರ್‌ಆರ್ ದರ ಕಡಿತಗೊಂಡಿರುವುದರಿಂದಾಗಿ ಬ್ಯಾಂಕ್‌ಗಳ ಸಾಲ ಪ್ರಮಾಣವೂ ಹೆಚ್ಚಾಗಲಿದೆ. ಇದರಿಂದ ಹೂಡಿಕೆ ಸುಧಾರಿಸಲಿದ್ದು ಪ್ರಗತಿಗೆ ಪೂರಕವಾಗಲಿದೆ

ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+