ಆರ್ ಬಿಐನಿಂದ ಐಸಿಐಸಿಐ ಮೇಲೆ ಭಾರಿ ದಂಡ

ಆರ್ ಬಿಐನಿಂದ ಐಸಿಐಸಿಐ ಮೇಲೆ ಭಾರಿ ದಂಡ
ICICI Bank: Quotes, News
BSE 1445.55BSE Quote10.3 (-0.71%)
NSE 1445.40NSE Quote10 (-0.69%)
ಬೆಂಗಳೂರು, ಅ.10: ಐಎನ್ ಜಿ ವೈಶ್ಯ ಬ್ಯಾಂಕ್ ಲಿಮಿಟೆಡ್ ಹಾಗೂ ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರಿ ಮೊತ್ತದ ದಂಡ ವಿಧಿಸಿದೆ.

ಐಎನ್ ಜಿ ವ್ಯೈಶ್ಯ ಬ್ಯಾಂಕ್ ಲಿಮಿಟೆಡ್ ಮೇಲೆ 55 ಲಕ್ಷ ರು ಹಾಗೂ ಐಸಿಐಸಿಐ ಮೇಲೆ 30 ಲಕ್ಷ ರು ದಂಡ ಹಾಕಲಾಗಿದೆ.

Know Your Customer (KYC) norms/Anti-Money Laundering (AML) Standards/Combating of Financing of Terrorism (CFT)/Prevention of Money Laundering Act, 2002 ಮುಂತಾದ ನಿಯಮಗಳನ್ನು ಈ ಬ್ಯಾಂಕುಗಳು ಮೀರಿದ ಕಾರಣ ದಂಡ ಹಾಕಲಾಗಿದೆ.

ಖಾತೆ ಆರಂಭಿಸಲು ಬೇಕಾದ ಅಗತ್ಯ ದಾಖಲೆ, ಗ್ರಾಹಕರ ಗುರುತು ಪತ್ತೆ ವಿಧಾನ, ಕಾರ್ಯವಿಧಾನದ ಮೇಲೆ ನಿಯಂತ್ರಣ, Suspicious Transaction ಬಗ್ಗೆ ವರದಿ ಸಲ್ಲಿಸುವಲ್ಲಿ ವಿಳಂಬ ಮುಂತಾದ ಅನೇಕ ಕಾರ್ಯಗಳಲ್ಲಿ ಈ ಬ್ಯಾಂಕುಗಳು ಪ್ರತಿಕ್ರಿಯಿಸಿದ ರೀತಿ ಆರ್ ಬಿಐ ನಿಯಮಕ್ಕೆ ವ್ಯತಿರಿಕ್ತವಾಗಿದೆ.

ಈ ಪ್ರಕರಣದ ಬಗ್ಗೆ ಸ್ಪಷ್ಟನೆ ಕೋರಿ ಕೇಳಿ ಬ್ಯಾಂಕುಗಳಿಗೆ ಆರ್ ಬಿಐ ಒಂದಷ್ಟು ಪ್ರಶ್ನೆಗಳನ್ನು ಹಾಕಿತ್ತು. ಆದರೆ, ಬ್ಯಾಂಕುಗಳಿಂದ ಮೌಖಿಕವಾಗಿ ಹಾಗೂ ಲಿಖಿತವಾಗಿ ಸ್ಪಷ್ಟ ಉತ್ತರ ಸಿಗದ ಕಾರಣ ಆರ್ ಬಿಐ ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ.

ಆರ್ ಬಿಐ ದಂಡ ವಿಧಿಸಿದ ಸುದ್ದಿ ಹೊರಬಿದ್ದ ಮೇಲೂ ಐಎನ್ ಜಿ ವೈಶ್ಯ ಬ್ಯಾಂಕ್ ಷೇರುಗಳು ಮೇಲ್ಮುಖವಾಗೇ ಚಲಿಸಿ ಅಚ್ಚರಿ ಮೂಡಿಸಿತ್ತು. ಆದರೆ, ಐಸಿಐಸಿಐ ಬ್ಯಾಂಕಿನ ಷೇರುಗಳು ಮಾತ್ರ ಬುಧವಾರ ತೀರಾ ಸಪ್ಪೆಯಾಗಿತ್ತು.

ಬಿಎಸ್ ಇನಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಐಸಿಐಸಿಐ ಬ್ಯಾಂಕಿನ ಷೇರುಗಳು 1052.70 ರು ನಂತೆ ಶೇ 1.07 ಇಳಿಕೆ ಕಂಡಿದೆ. ಇದೇ ಸಮಯಕ್ಕೆ ಎನ್ ಎಸ್ ಇನಲ್ಲಿ 1052.50 ರು ನಂತೆ ಶೇ 1.09 ರಷ್ಟು ಇಳಿದಿದೆ.

ಐಎನ್ ಜಿ ವೈಶ್ಯ ಬ್ಯಾಂಕ್ ಷೇರುಗಳು ಬಿಎಸ್ ಇನಲ್ಲಿ 421.20 ರು ನಂತೆ ಶೇ 1.29 ರಷ್ಟು ಏರಿಕೆ ಕಂಡಿದೆ. ಎನ್ ಎಸ್ ಇನಲ್ಲಿ 420.00 ರು ನಂತೆ ಶೇ 0.91 ರಷ್ಟು ಏರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+